Shivamogga: Children's open daycare center canceled - what is the reason? ಶಿವಮೊಗ್ಗ : ಮಕ್ಕಳ ತೆರೆದ ತಂಗುದಾಣ ಕೇಂದ್ರ ರದ್ದು – ಕಾರಣವೇನು?

shimoga news | ಶಿವಮೊಗ್ಗ : ಮಕ್ಕಳ ತೆರೆದ ತಂಗುದಾಣ ಕೇಂದ್ರ ರದ್ದು – ಕಾರಣವೇನು?

ಶಿವಮೊಗ್ಗ (shimoga), ನವೆಂಬರ್ 24: ಶಿವಮೊಗ್ಗದ ಸೋಮಿನಕೊಪ್ಪದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸುರಭಿ ಮಕ್ಕಳ ತೆರೆದ ತಂಗುದಾಣವನ್ನು ರದ್ದುಗೊಳಿಸಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಆದೇಶ ಹೊರಡಿಸಿದೆ.

ಈ ಕುರಿತಂತೆ ನವೆಂಬರ್ 24 ರಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಂಜುನಾಥ್ ರವರು ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

ಜಿಲ್ಲಾ ಬಾಲ ನ್ಯಾಯ (ಮಕ್ಕಳ ಪಾಲನೆ ಮತ್ತು ರಕ್ಷಣೆ) ಕಾಯ್ದೆ – 2015 ರ ಸೆಕ್ಷನ್ 41 (1) ರ ಅಡಿ ಸದರಿ ಮಕ್ಕಳ ತೆರೆದು ತಂಗುದಾಣ ಕಾರ್ಯನಿರ್ವಹಣೆ ಮಾಡುತ್ತಿತ್ತು. ಅಲ್ಪಾವಧಿ ವಸತಿ ಹಾಗೂ ಸೇತುಬಂಧ ಶಿಕ್ಷಣ ಅಗತ್ಯವಿರುವ ಮಕ್ಕಳಿಗೆ ಆಶ್ರಯ ಕಲ್ಪಿಸಲಾಗುತ್ತಿತ್ತು.

ಸದರಿ ತಂಗುದಾಣವು ಮಿಷನ್ ವಾತ್ಸಲ್ಯದ ಮಾರ್ಗಸೂಚಿಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತಿದೆಯೇ? ಎಂಬುವುದನ್ನು ಪರಿಶೀಲಿಸಲು, ನವದೆಹಲಿಯ ರಾಷ್ಟ್ರೀಯ ಮಕ್ಕಳು ಹಕ್ಕುಗಳ ರಕ್ಷಣಾ ಆಯೋಗವು ಭೇಟಿಯಿತ್ತು ತಪಾಸಣೆ ಮಾಡಿತ್ತು.

ಈ ವೇಳೆ ನಿಯಮಾನುಸಾರ ಕಾರ್ಯನಿರ್ವಹಣೆ ಮಾಡದಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ 31/10/2025 ರಿಂದ ಅನ್ವಯವಾಗುವಂತೆ ಹಾಗೂ ಬಾಲನ್ಯಾಯ ಕಾಯ್ದೆ – 2015 ಸೆಕ್ಷನ್ 41 (7) ರ ಅನ್ವಯ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಪ್ರದತ್ತವಾದ ಅಧಿಕಾರ ಚಲಾಯಿಸಿ ತುಂಗುದಾಣದ ಕಾರ್ಯನಿರ್ವಹಣೆ ರದ್ದುಪಡಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಶಿವಮೊಗ್ಗದ ಆಲ್ಕೊಳದ ಸರ್ಕಾರಿ ವೀಕ್ಷಣಾಲಯ ಕಟ್ಟಡದಲ್ಲಿರುವ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಕಚೇರಿಯ ದೂ.ಸಂ.: 08182-295709 ನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ.

Shivamogga, November 24: The District Child Protection Unit has issued an order to close the Surabhi Children’s Open Day Care Centre operating in Sominakoppa, Shivamogga. Information regarding this was given in a press release issued by District Child Protection Officer Manjunath of the District Child Protection Unit on November 24.

Power outages in various parts of Shivamogga city on November 30th! ಶಿವಮೊಗ್ಗ ನಗರದ ವಿವಿಧೆಡೆ ನವೆಂಬರ್ 30 ರಂದು ವಿದ್ಯುತ್ ವ್ಯತ್ಯಯ! Previous post shimoga | power cut news | ಶಿವಮೊಗ್ಗ ನಗರದ ವಿವಿಧೆಡೆ ನವೆಂಬರ್ 25, 26 ರಂದು ವಿದ್ಯುತ್ ವ್ಯತ್ಯಯ!
Shivamogga: Man sentenced to 4 years in rigorous imprisonment for abandoning his married wife! ಶಿವಮೊಗ್ಗ : ಮದುವೆಯಾಗಿ ಕೈ ಕೊಟ್ಟವನಿಗೆ 4 ವರ್ಷ ಕಠಿಣ ಜೈಲು ಶಿಕ್ಷೆ! Next post bhadravati news | ಭದ್ರಾವತಿಯ ಅಗರದಹಳ್ಳಿ ವ್ಯಕ್ತಿಗೆ 10 ವರ್ಷ ಕಠಿಣ ಜೈಲು ಶಿಕ್ಷೆ- 1 ಲಕ್ಷ ರೂ. ದಂಡ!