bhadravati news | ಭದ್ರಾವತಿಯ ಅಗರದಹಳ್ಳಿ ವ್ಯಕ್ತಿಗೆ 10 ವರ್ಷ ಕಠಿಣ ಜೈಲು ಶಿಕ್ಷೆ- 1 ಲಕ್ಷ ರೂ. ದಂಡ!

Fraud Case: 10 People Sentenced to 1 Year in Jail! ದಾಂಧಲೆ ಪ್ರಕರಣ : 10 ಜನರಿಗೆ 1 ವರ್ಷ ಜೈಲು ಶಿಕ್ಷೆ!

ಭದ್ರಾವತಿ (bhadravathi), ನವೆಂಬರ್ 25: ಯುವಕನೋರ್ವನ ಆತ್ಮಹತ್ಯೆಗೆ ಕಾರಣಕರ್ತನಾದ ವ್ಯಕ್ತಿಗೆ 10 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ 1 ಲಕ್ಷ ರೂ. ದಂಡ ವಿಧಿಸಿ, ಭದ್ರಾವತಿಯ 4 ನೇ ಹೆಚ್ಚುವರಿ ಸತ್ರ ಮತ್ತು ಜಿಲ್ಲಾ ನ್ಯಾಯಾಲಯ ತೀರ್ಪು ನೀಡಿದೆ.

ಭದ್ರಾವತಿ ತಾಲೂಕು ಅಗರದಹಳ್ಳಿ ಕ್ಯಾಂಪ್ ಗ್ರಾಮದ ನಿವಾಸಿ ಚಂದ್ರಪ್ಪ (50) ಶಿಕ್ಷೆಗೊಳಗಾದ ವ್ಯಕ್ತಿ ಎಂದು ಗುರುತಿಸಲಾಗಿದೆ.

ನ್ಯಾಯಾಧೀಶರಾದ ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ್ ಅವರು ಈ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ರತ್ನಮ್ಮ ಪಿ ಅವರು ವಾದ ಮಂಡಿಸಿದ್ದರು.

ಪ್ರಕರಣದ ಹಿನ್ನೆಲೆ : ಅಗರದಹಳ್ಳಿ ಕ್ಯಾಂಪ್ ನಿವಾಸಿ ಶ್ರೀಧರ್ ಪಿ ಎಂ (21) ಎಂಬ ಯುವಕ 12-01-2019 ರಂದು ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದ. ಈ ಕುರಿತಂತೆ ಮೃತ ಯುವಕನ ತಂದೆ ಮುನಿಯಪ್ಪರವರು ಪೊಲೀಸರಿಗೆ ಚಂದ್ರಪ್ಪನ ವಿರುದ್ದ ದೂರು ನೀಡಿದ್ದರು.

ತಮ್ಮ ಪುತ್ರನಿಗೆ ಓಸಿ ಜೂಜಾಟ ಕಲಿಸಿ, ತಪ್ಪು ದಾರಿಗೆ ತಂದಿದ್ದನು. ಹಾಗೆಯೇ ಜೂಜಾಟದಿಂದ ಬಂದ ಹಣ ನೀಡುವಂತೆ ಪುತ್ರನಿಗೆ ಹಿಂಸೆ ನೀಡುತ್ತಿದ್ದ. ಇದರಿಂದ ಬೇಸತ್ತು ತಮ್ಮ ಪುತ್ರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ದೂರಿನಲ್ಲಿ ಆರೋಪಿಸಿದ್ದರು.

ಈ ಕುರಿತಂತೆ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಸಬ್ ಇನ್ಸ್’ಪೆಕ್ಟರ್ ಮೋಹನ್ ಜಿ ಅವರು ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ಆರೋಪಪಟ್ಟಿ ದಾಖಲಿಸಿದ್ದರು.

Bhadravati, November 24: The 4th Additional Sessions and District Court of Bhadravati has sentenced a person who was responsible for the suicide of a young man to 10 years of rigorous imprisonment and a fine of Rs. 1 lakh.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →