shimoga | ಶಿವಮೊಗ್ಗ : ಕೊಲೆ ಯತ್ನ ಪ್ರಕರಣ – ಕಲ್ಲುಗಂಗೂರಿನ ವ್ಯಕ್ತಿಗೆ 7 ವರ್ಷ ಕಠಿಣ ಜೈಲು ಶಿಕ್ಷೆ!

Bhadravati: Assault case – 6 youths sentenced to jail!ಭದ್ರಾವತಿ : ಹಲ್ಲೆ ಪ್ರಕರಣ – 6 ಯುವಕರಿಗೆ ಜೈಲು ಶಿಕ್ಷೆ!

ಶಿವಮೊಗ್ಗ (shivamogga), ಡಿಸೆಂಬರ್ 2: ಸಂಬಂಧಿಯೋರ್ವರ ಕೊಲೆ ಯತ್ನ ಪ್ರಕರಣದಲ್ಲಿ ಭಾಗಿಯಾದ ವ್ಯಕ್ತಿಯೋರ್ವನಿಗೆ, 7 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿ 3 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.

ಶಿವಮೊಗ್ಗ ತಾಲೂಕು ಕಲ್ಲುಗಂಗೂರು ಗ್ರಾಮದ ನಿವಾಸಿ ದೊಡ್ಡೇಶಪ್ಪ (48) ಶಿಕ್ಷೆಗೊಳಗಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಶಿಕ್ಷೆಯ ಜೊತೆಗೆ 35 ಸಾವಿರ ರೂ. ದಂಡ ಕೂಡ ನ್ಯಾಯಾಲಯ ವಿಧಿಸಿದೆ.

ನ್ಯಾಯಾಧೀಶರಾದ ಯಶವಂತ ಕುಮಾರ್ ಅವರು ಈ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಶಾಂತರಾಜ ಜೆ ಅವರು ವಾದ ಮಂಡಿಸಿದ್ದರು.

ಪ್ರಕರಣದ ಹಿನ್ನೆಲೆ : 11-12-2020 ರಂದು ಪ್ರಸ್ತುತ ಶಿಕ್ಷೆಗೊಳಗಾದ ದೊಡ್ಡೇಶನು, ತನ್ನ ಸಂಬಂಧಿಯಾದ ರಾಮಚಂದ್ರಪ್ಪ ಕೆ (56) ಎಂಬುವರೊಂದಿಗೆ ಜಗಳ ಮಾಡಿಕೊಂಡು ಕಂದಲಿಯಿಂದ ಅವರ ತಲೆಗೆ ಹೊಡೆದು ಗಾಯಗೊಳಿಸಿದ್ದ.

ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಐಪಿಸಿ ಕಲಂ 326, 504, 506, 307 ರ ಅಡಿ ಪ್ರಕರಣ ದಾಖಲಾಗಿತ್ತು. ಅಂದಿನ ಗ್ರಾಮಾಂತರ ಠಾಣೆ ಇನ್ಸ್’ಪೆಕ್ಟರ್ ಆಗಿದ್ದ (ಪ್ರಸ್ತುತ ಡಿವೈಎಸ್ಪಿ) ಸಂಜೀವ್ ಕುಮಾರ್ ಟಿ ಅವರು ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ಆರೋಪಪಟ್ಟಿ ದಾಖಲಿಸಿದ್ದರು.

Shivamogga, December 2: The 3rd Additional District and Sessions Court has sentenced a person involved in the attempted murder of a relative to 7 years of rigorous imprisonment.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →