ಶಿವಮೊಗ್ಗ (shivamogga), ಡಿಸೆಂಬರ್ 3: ಬೀದಿ ನಾಯಿ ಕಡಿತದಿಂದ ಬಾಲಕನೋರ್ವ ಗಾಯಗೊಂಡು, ಆಸ್ಪತ್ರೆಗೆ ದಾಖಲಾದ ಘಟನೆ ಡಿಸೆಂಬರ್ 2 ರಂದು ಶಿವಮೊಗ್ಗದ ವಿದ್ಯಾನಗರ ಬಡಾವಣೆಯಲ್ಲಿ ನಡೆದಿದೆ.
ವಿದ್ಯಾನಗರದ 1 ನೇ ತಿರುವಿನ ನಿವಾಸಿ ಸುನೀಲ್ ಕೆ ಟಿ ಎಂಬುವರ ಪುತ್ರ ವೇದಾಂತ್ (7 ವರ್ಷ) ಗಾಯಗೊಂಡ ಬಾಲಕ ಎಂದು ಗುರುತಿಸಲಾಗಿದೆ. ನಗರದ ಖಾಸಗಿ ಆಸ್ಪತ್ರೆಗೆ ಆತನನ್ನು ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಮನೆಯ ಮುಂಭಾಗ ಬಾಲಕ ಆಟವಾಡುವ ವೇಳೆ, ಏಕಾಏಕಿ ನಾಯಿ ದಾಳಿ ನಡೆಸಿ ಐದು ಕಡೆ ಕಚ್ಚಿದೆ. ಬಾಲಕನ ಚೀರಾಟ ಗಮನಿಸಿದ ಮನೆಯವರು ನಾಯಿಯನ್ನು ಓಡಿಸಿದ್ದಾರೆ.
ಸದರಿ ರಸ್ತೆಯಲ್ಲಿ ಸಾಕಷ್ಟು ಸಂಖ್ಯೆಯ ಬೀದಿ ನಾಯಿಗಳಿದ್ದು, ನಾಗರೀಕರಿಗೆ ತೊಂದರೆಯಾಗುತ್ತಿದೆ. ಈ ಕುರಿತಂತೆ ಈಗಾಗಲೇ ಮಹಾನಗರ ಪಾಲಿಕೆ ಆಡಳಿತದ ಗಮನಕ್ಕೂ ತಂದರೂ ಬೀದಿ ನಾಯಿಗಳ ಹಾವಳಿ ನಿಯಂತ್ರಣಕ್ಕೆ ಯಾವುದೇ ಕ್ರಮವಾಗಿಲ್ಲ ಎಂದು ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Shivamogga, December 3: A boy was seriously injured and admitted to the hospital after being bitten by a stray dog in the Vidyanagar area of Shivamogga on December 2.

