shimoga news | ಶಿವಮೊಗ್ಗ : ಬಲೆಯಲ್ಲಿ ಬೀದಿ ನಾಯಿ ಹಿಡಿದು ಕ್ರೂರ ಹಿಂಸೆ – ಕೇಸ್ ದಾಖಲು!

Shivamogga: Stray dog caught in a net and brutally tortured – case registered! ಶಿವಮೊಗ್ಗ : ಬಲೆಯಲ್ಲಿ ಬೀದಿ ನಾಯಿ ಹಿಡಿದು ಕ್ರೂರ ಹಿಂಸೆ – ಕೇಸ್ ದಾಖಲು

ಶಿವಮೊಗ್ಗ (shivamogga), ಡಿಸೆಂಬರ್ 2 : ಹಂದಿ ಹಿಡಿಯಲು ಬಳಸುವ ಬಲೆಯಲ್ಲಿ ಬೀದಿ ನಾಯಿಯನ್ನು ಹಿಡಿದು, ಕ್ರೂರವಾಗಿ ಹೊಡೆದು ಹಿಂಸಿಸುತ್ತಿರುವ ಸಿಸಿ ಕ್ಯಾಮರಾದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಬೆನ್ನಲ್ಲೆ, ಶಿವಮೊಗ್ಗದ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ಗೋಪಾಳದ ಪ್ರಾಣಿ ರಕ್ಷಣಾ ಸೇವಾ ತಂಡದ ಸದಸ್ಯ ಸೂರಜ್ ಅವರು ನೀಡಿದ ದೂರಿನ ಆಧಾರದ ಮೇಲೆ ತುಂಗಾನಗರ ಠಾಣೆ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

ದೂರಿನಲ್ಲೇನಿದೆ? : 28-11-2025 ರಂದು ಶಿವಮೊಗ್ಗದ ಸ್ವಾಮಿ ವಿವೇಕಾನಂದ ಬಡಾವಣೆಯ ವೃದ್ದಾಶ್ರಮ ಎದುರಿನ ಪೊಲೀಸ್ ಲೇ ಔಟ್ ನಲ್ಲಿ ಬೆಳಿಗ್ಗೆ 8.16 ಗಂಟೆ ಸುಮಾರಿಗೆ ಘಟನೆ ನಡೆದಿತ್ತು.

https://www.instagram.com/reel/DRw0Phvj6Ef/?igsh=d2gzYWVjMW50cDF3

ಖಾಸಗಿ ಹಂದಿ ಹಿಡಿಯುವವರ ಗುಂಪೊಂದು, ಸಮುದಾಯದ ಬೀದಿ ನಾಯಿಯನ್ನು ಬಲೆಯಲ್ಲಿ ಹಿಡಿದು ಮನಸೋಇಚ್ಚೆ ಹೊಡೆದು ಸಾಯಿಸಿದ್ದರು. ಸದರಿ ಅಮಾನವೀಯ ಘಟನೆಯು ಸಿ.ಸಿ. ಟಿ.ವಿ. ಕ್ಯಾಮರಾದಲ್ಲಿ ಸೆರೆಯಾಗಿತ್ತು.

ಸದರಿ ಕೃತ್ಯ ಎಸಗಿದವರ ವಿರುದ್ದ ಸೂಕ್ತ ಕಾನೂನು ಕ್ರಮವನ್ನು ಕೈಗೊಳ್ಳಬೇಕೆಂದು ಸೂರಜ್ ಅವರು ಡಿಸೆಂಬರ್ 1 ರಂದು ಪೊಲೀಸರಿಗೆ ದೂರು ನೀಡಿದ್ದರು. ಇದರ ಆಧಾರದ ಮೇಲೆ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಗುನ್ನೆ ಸಂಖ್ಯೆ: 0723/2025 ಕಲಂ 11 (1) ಪ್ರಾಣಿ ಹಿಂಸೆ ತಡೆ ಕಾಯ್ದೆ (The Prevention of cruelty to Animal (PCA) Act) 1960  ಹಾಗೂ ಕಲಂ 325  ಬಿ ಎನ್ ಎಸ್ ಅಡಿ ಪ್ರಕರಣ ದಾಖಲಾಗಿದೆ.

Shivamogga, December 2: A case has been registered at the Tunganagar police station in Shivamogga after a CCTV camera video of a stray dog ​​being caught in a trap used for catching pigs and brutally beaten and tortured went viral on social media.

Based on a complaint filed by Suraj, a member of Gopal’s animal rescue team, the Tunganagar police have registered an FIR and are continuing their investigation.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →