shimoga news | ಶಿವಮೊಗ್ಗ : ಆಕಳಿಗೆ ಇಂಜೆಕ್ಷನ್ ಚುಚ್ಚಿ ಕಾರಲ್ಲಿ ಹೊತ್ತೊಯ್ದ ಕಳ್ಳರು!

Shivamogga: Thieves inject a cow and take it away in a car! *Scene caught on CCTV camera ಶಿವಮೊಗ್ಗ : ಆಕಳಿಗೆ ಇಂಜೆಕ್ಷನ್ ಚುಚ್ಚಿ ಕಾರಲ್ಲಿ ಹೊತ್ತೊಯ್ದ ಕಳ್ಳರು! *ಸಿಸಿ ಕ್ಯಾಮರಾದಲ್ಲಿ ಸೆರೆಯಾದ ದೃಶ್ಯ

ಶಿವಮೊಗ್ಗ (shivamogga), ಡಿಸೆಂಬರ್ 7: ಶಿವಮೊಗ್ಗ ನಗರದ ಕಾಶೀಪುರ ಬಡಾವಣೆಯ ಲಕ್ಕಪ್ಪ ಲೇಔಟ್ ನಲ್ಲಿ ಮನೆ ಮುಂಭಾಗ ಕಟ್ಟಿದ್ದ ಆಕಳೊಂದನ್ನು, ಕಳ್ಳರ ತಂಡವೊಂದು ಕಾರಲ್ಲಿ ತುಂಬಿಕೊಂಡು ಪರಾರಿಯಾದ ಘಟನೆ ಡಿಸೆಂಬರ್ 5 ರ ಮುಂಜಾನೆ 3 ಗಂಟೆ 25 ನಿಮಿಷದ ವೇಳೆ ನಡೆದಿದೆ.

ರಾಜವಿಕ್ರಮ ಎಂಬುವರಿಗೆ ಸದರಿ ಆಕಳು ಸೇರಿದ್ದಾಗಿದೆ. ಇವರು ಎಂದಿನಂತೆ ಮನೆ ಮುಂಭಾಗ ಆಕಳು ಕಟ್ಟಿ ಹಾಕಿದ್ದು, ಮುಂಜಾನೆ ವೇಳೆ ಆಗಮಿಸಿದ ಕಳ್ಳರು, ಆಕಳ ಕತ್ತಿನ ಭಾಗದ ಬಳಿ ಮೊದಲು ಇಂಜೆಕ್ಷನ್ ವೊಂದನ್ನು ಚುಚ್ಚಿದ್ದಾರೆ.

ನಂತರ ಕಾರಲ್ಲಿ ಆಕಳನ್ನು ತುಂಬಿಕೊಂಡು ಪರಾರಿಯಾಗಿದ್ದಾರೆ. ಸದರಿ ಆಕಳ ಕಳವಿನ ದೃಶ್ಯವು ಕಟ್ಟಡವೊಂದರ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಕುರಿತಂತೆ ವಿನೋಬನಗರ ಪೊಲೀಸ್ ಠಾಣೆಯಲ್ಲಿ ಕುಟುಂಬದವರು ದೂರು ದಾಖಲಿಸಿದ್ದಾರೆ.  

Shivamogga, December 7: An incident occurred on December 5 at 3:25 am when a gang of thieves loaded a cow tied in front of a house in Lakkappa Layout, Kashipura Layout, Shivamogga city, into a car and fled.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →