shimoga news | ಸ್ವಚ್ಛ ಗಾಳಿ ಹೊಂದಿರುವ ದೇಶದ ಟಾಪ್ – 10 ನಗರಗಳಲ್ಲಿ ಶಿವಮೊಗ್ಗಕ್ಕೆ 6 ನೇ ಸ್ಥಾನ!

Shivamogga ranks 6th among the top 10 cities in the country with clean air! ಸ್ವಚ್ಚ ಗಾಳಿ ಹೊಂದಿರುವ ದೇಶದ ಟಾಪ್ – 10 ನಗರಗಳಲ್ಲಿ ಶಿವಮೊಗ್ಗಕ್ಕೆ 6 ನೇ ಸ್ಥಾನ!

ಶಿವಮೊಗ್ಗ (shivamogga), ಡಿಸೆಂಬರ್ 8: ದೇಶದಲ್ಲಿ ಸ್ವಚ್ಛ (ವಾಯುಮಾಲಿನ್ಯ ರಹಿತ) ಹಾಗೂ ಅತೀ ಕಲುಷಿತ (ವಾಯು ಮಾಲಿನ್ಯ ಪೀಡಿತ) ನಗರಗಳ ಪಟ್ಟಿ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ವಾಯು ಮಾಲಿನ್ಯ ರಹಿತ ಟಾಪ್ – 10 ನಗರಗಳ ಪಟ್ಟಿಯಲ್ಲಿ ಶಿವಮೊಗ್ಗ ನಗರ 6 ನೇ ಸ್ಥಾನ ಪಡೆದುಕೊಂಡಿದೆ.

ಸ್ವಚ್ಛ ಗಾಳಿ ಹೊಂದಿರುವ ಟಾಪ್ – 10 ನಗರಗಳ ಪಟ್ಟಿಯಲ್ಲಿ ಕರ್ನಾಟಕದ 6 ನಗರಗಳು ಸ್ಥಾನ ಪಡೆದುಕೊಂಡಿವೆ. ಇದರಲ್ಲಿ ಕೊಪ್ಪಳ 4 ನೇ ಸ್ಥಾನ, ಚಾಮರಾಜನಗರ 5, ಶಿವಮೊಗ್ಗ 6, ಗದಗ 8, ಮೈಸೂರು 9 ಹಾಗೂ ಬಾಗಲಕೋಟೆ 10 ನೇ ಸ್ಥಾನ ಪಡೆದುಕೊಂಡಿದೆ.

ಸೆಂಟರ್ ಫಾರ್ ರಿಸರ್ಚ್ ಆನ್ ಎನರ್ಜಿ ಅಂಡ್ ಕ್ಲೀನ್ ಏರ್ (ಇಂಧನ ಮತ್ತು ಶುದ್ದ ಗಾಳಿಯ ಸಂಶೋಧನಾ ಕೇಂದ್ರ – ಸಿಆರ್’ಇಎ) ಸಂಸ್ಥೆ ಬಿಡುಗಡೆ ಮಾಡಿದ ವರದಿಯಲ್ಲಿ ಈ ವಿವರ ನೀಡಲಾಗಿದೆ.

ನಿರಂತರ ವಾಯು ಗುಣಮಟ್ಟ ಮೇಲ್ವಿಚಾರಣಾ ಕೇಂದ್ರ (ಸಿಎಎಕ್ಯುಎಂಎಸ್) ದ ಅಂಕಿಅಂಶ ಆಧರಿಸಿ ವಾಯು ಮಾಲಿನ್ಯ ರಹಿತ – ಸ್ವಚ್ಛ ಗಾಳಿ ಹೊಂದಿರುವ ನಗರಗಳ ಪಟ್ಟಿ ಸಿದ್ದಪಡಿಸಲಾಗಿದೆ. ದೇಶದ 225 ನಗರಗಳ ಪಟ್ಟಿ ಸಿದ್ದಪಡಿಸಿದ್ದು, ಇದರಲ್ಲಿ 114 ನಗರಗಳು ಉತ್ತಮ ವಾಯು ಮಾನದಂಡ ಪೂರೈಸಿವೆ.

Shivamogga, December 8: The list of clean (air pollution-free) and most polluted (air pollution-affected) cities in the country has been released. In this, Shivamogga city has secured 6th position in the list of top 10 cities free from air pollution. Six cities from Karnataka have made it to the list of top 10 cities with clean air. Koppal is at 4th place, Chamarajanagar at 5th, Shivamogga at 6th, Gadag at 8th, Mysore at 9th and Bagalkot at 10th.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →