bhadravati news | ಭದ್ರಾವತಿ ತಾಲೂಕಿನ ಭದ್ರಾ ನಾಲೆಯಲ್ಲಿ ನಾಲ್ವರು ನಾಪತ್ತೆ!

Bhadravati: Four Missing in Bhadra Canal near Holehonnur–Arebilachi! ಭದ್ರಾವತಿ : ಹೊಳೆಹೊನ್ನೂರು ಅರೆಬಿಳಚಿ ಸಮೀಪದ ಭದ್ರಾ ನಾಲೆಯಲ್ಲಿ ನಾಲ್ವರು ನಾಪತ್ತೆ!

ಭದ್ರಾವತಿ (bhadravathi), ಜನವರಿ 18: ಭದ್ರಾ ಎಡದಂಡೆ ನಾಲೆಯಲ್ಲಿ ಒಂದೇ ಕುಟುಂಬದ ನಾಲ್ವರು ನಾಪತ್ತೆಯಾದ ಘಟನೆ, ಜನವರಿ 18 ರಂದು ಭದ್ರಾವತಿ ತಾಲೂಕು ಹೊಳೆಹೊನ್ನೂರು ಸಮೀಪದ ಅರೆಬಿಳಚಿ ಸಮೀಪ ನಡೆದಿದೆ.

ನೀಲಾಬಾಯಿ (50), ಅವರ ಮಗ ರವಿಕುಮಾರ್ (32), ಮಗಳು ಶ್ವೇತಾ (35) ಹಾಗೂ ಅಳಿಯ ಪರಶುರಾಮ್ (40) ನಾಪತ್ತೆಯಾದವರು ಎಂದು ಗುರುತಿಸಲಾಗಿದೆ.

ಭದ್ರಾ ನಾಲೆಯಲ್ಲಿ ಬಟ್ಟೆ ಹೊಗೆಯಲು ಕುಟುಂಬದವರು ಆಗಮಿಸಿದ್ದರು. ಈ ವೇಳೆ ದುರಂತ ಸಂಭವಿಸಿದೆ ಎನ್ನಲಾಗಿದೆ.ನಾಲೆಗೆ ಬಿದ್ದ ಓರ್ವರನ್ನು ರಕ್ಷಿಸಲು ಮುಂದಾದ ವೇಳೆ ಇತರರು ನೀರುಪಾಲಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ವಿಷಯ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳ ಸಿಬ್ಬಂದಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ. ನಾಲೆಯಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಘಟನೆಯ ಕುರಿತಂತೆ ಹೆಚ್ಚಿನ ವಿವರಗಳು ಇನ್ನಷ್ಟೆ ತಿಳಿದುಬರಬೇಕಾಗಿದೆ.

ಹೆಚ್ಚಿದ ನೀರಿನ ಹರಿವು : ಭದ್ರಾ ಜಲಾಶಯದಿಂದ ಇತ್ತೀಚೆಗೆ ನಾಲೆಗಳಿಗೆ ನೀರು ಹೊರಬಿಡಲಾಗುತ್ತಿದೆ. ಇದರಿಂದ ಭದ್ರಾ ಎಡದಂಡೆ ನಾಲೆಯಲ್ಲಿ ನೀರಿನ ಹರಿವಿನ ಪ್ರಮಾಣ ಹೆಚ್ಚಿದ್ದು, ಸಂಜೆಯವರೆಗೂ ನಾಲೆಯಲ್ಲಿ ನಾಪತ್ತೆಯಾದವರ ಕುರಿತಂತೆ ಯಾವುದೇ ಸುಳಿವು ಲಭ್ಯವಾಗಿಲ್ಲವೆಂಬ ಮಾಹಿತಿ ತಿಳಿದುಬಂದಿದೆ.

Bhadravati Taluk: Four Missing in Bhadra Canal! Bhadravati, January 18: An incident occurred on January 18 near Arebilachi, close to Holehonnur in Bhadravati Taluk, where four members of the same family went missing in the Bhadra Left Bank Canal. Recently, water has been released from the Bhadra reservoir into the canals. As a result, the flow of water in the canal has increased, and until evening, no clues were found regarding those who went missing in the canal, according to reports.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →