ಶಿವಮೊಗ್ಗ, ಏ. 30: ಹೆಚ್ಚುತ್ತಿರುವ ಬಿಸಿಲ ಝಳದ ನಡುವೆಯೇ, ಶಿವಮೊಗ್ಗ ನಗರ ಹಾಗೂ ಜಿಲ್ಲೆಯ ವಿವಿಧೆಡೆ ಕಳೆದ ಕೆಲ ದಿನಗಳಿಂದ ಬೀಳುತ್ತಿರುವ ಬೇಸಿಗೆ ಮಳೆಯು, ತಂಪನೆ ವಾತಾವರಣ ನೆಲೆಸುವಂತೆ ಮಾಡಿದೆ.
ಶಿವಮೊಗ್ಗ ತಾಲೂಕು ಸೇರಿದಂತೆ ಜಿಲ್ಲೆಯ ವಿವಿಧೆಡೆ ಇತ್ತೀಚೆಗೆ ಪೂರ್ವ ಮುಂಗಾರು ಮಳೆಯಾಗುತ್ತಿದೆ. ಭಾನುವಾರ ಸಂಜೆ ಹಲವೆಡೆ ಚದುರಿದಂತೆ ಮಳೆಯಾದ ವರದಿಗಳು ಬಂದಿವೆ.
ಪ್ರಸ್ತುತ ವರ್ಷ ಜಿಲ್ಲೆಯಲ್ಲಿ ಬೇಸಿಗೆ ಬಿಸಿಲ ಬೇಗೆ ಹೆಚ್ಚಿದೆ. ತೀವ್ರ ಸ್ವರೂಪದ ತಾಪಮಾನವು ನಾಗರೀಕರ ನೆತ್ತಿ ಸುಡುವಂತೆ ಮಾಡಿತ್ತು.
ಮತ್ತೊಂದೆಡೆ, ಬೇಸಿಗೆ ವೇಳೆ ಆಗಾಗ್ಗೆ ಬೀಳುತ್ತಿದ್ದ ಮಳೆಯೂ ಕೂಡ ಕಡಿಮೆಯಾಗಿತ್ತು. ಆದರೆ ಇತ್ತೀಚೆಗೆ ಬೀಳುತ್ತಿರುವ ಮಳೆಯಿಂದ, ಬಿಸಿಲ ಬೇಗೆಯಿಂದ ಕಂಗೆಟ್ಟಿದ್ದ ನಾಗರೀಕರಲ್ಲಿ ನೆಮ್ಮದಿಯ ಭಾವ ಮೂಡುವಂತೆ ಮಾಡಿಸಿದೆ.
ಮತ್ತೊಂದೆಡೆ, ಭಾರತೀಯ ಹವಾಮಾನ ಇಲಾಖೆಯು ರಾಜ್ಯದ ವಿವಿಧೆಡೆ ಗುಡುಗು, ಮಿಂಚು ಸಹಿತ ಭಾರೀ ವರ್ಷಧಾರೆಯಾಗುವ ಸಾಧ್ಯತೆಯಿದೆ ಎಂದು ಎಂದು ಮುನ್ಸೂಚನೆ ನೀಡಿದೆ.

