shimoga accident news | ಶಿವಮೊಗ್ಗ : ಕಾರು – ಆಂಬುಲೆನ್ಸ್  ನಡುವೆ ಡಿಕ್ಕಿ!

Shivamogga : Car–Ambulance Collision!ಶಿವಮೊಗ್ಗ : ಕಾರು - ಆಂಬುಲೆನ್ಸ್ ನಡುವೆ ಡಿಕ್ಕಿ!

ಶಿವಮೊಗ್ಗ (shivamogga), ಮಾರ್ಚ್ 19: ಕಾರು ಹಾಗೂ ಆಂಬುಲೆನ್ಸ್ ನಡುವೆ ಡಿಕ್ಕಿ ಸಂಭವಿಸಿದ ಘಟನೆ ಶಿವಮೊಗ್ಗ ನಗರದ ಉಷಾ ನರ್ಸಿಂಗ್ ಹೋಂ ಸರ್ಕಲ್ ಬಳಿ ಮಾರ್ಚ್ 19 ರ ಮಧ್ಯಾಹ್ನ ಸಂಭವಿಸಿದೆ.

ವಿನೋಬನಗರ ಕಡೆಯಿಂದ ಆಂಬುಲೆನ್ಸ್ ವಾಹನ ಆಗಮಿಸಿದ್ದು, ಈ ವೇಳೆ ಬ್ರೀಝಾ ಕಾರಿಗೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಕಾರು ಪಲ್ಟಿಯಾಗಿ ನಿಂತಿದೆ. ಗಾಜುಗಳು ಸಂಪೂರ್ಣ ಪುಡಿಪುಡಿಯಾಗಿವೆ.

ಕಾರಿನಲ್ಲಿದ್ದ ಮೂವರಿಗೆ ಹಾಗೂ ಆಂಬುಲೆನ್ಸ್ ಚಾಲಕನಿಗೆ ಗಾಯವಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಘಟನಾ ಸ್ಥಳದಲ್ಲಿ ಕೆಲ ಸಮಯ ಸಂಚಾರ ಅಸ್ತವ್ಯಸ್ತವಾಗಿತ್ತು. ಸ್ಥಳಕ್ಕೆ ಟ್ರಾಫಿಕ್ ಪೊಲೀಸರು ಭೇಟಿಯಿತ್ತು ಪರಿಶೀಲನೆ ನಡೆಸಿದ್ದಾರೆ. ಅವಘಡದ ಕುರಿತಂತೆ ಹೆಚ್ಚಿನ ವಿವರಗಳು ಇನ್ನಷ್ಟೆ ಲಭ್ಯವಾಗಬೇಕಾಗಿದೆ.

Shivamogga : Car–Ambulance Collision!

Shivamogga, March 19: A collision between a car and an ambulance occurred near Usha Nursing Home Circle in Shivamogga city on the afternoon of March 19.

An ambulance coming from Vinobanagar crashed into a Brezza car. Due to the force of the impact, the car overturned and came to a halt. The windows were completely shattered.

Three people inside the car, along with the ambulance driver, sustained injuries. All the injured were admitted to a hospital for treatment. Fortunately, everyone escaped without life-threatening injuries.

Traffic was disrupted at the spot for some time. Traffic police visited the location and conducted an inspection. More details about the accident are yet to be received.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *