ಶಿವಮೊಗ್ಗ 9shivamogga), ಮಾರ್ಚ್ 19: ಖಾಸಗಿ ಬಸ್ ಹಾಗೂ ಆಟೋದ ನಡುವೆ ಸಂಭವಿಸಿದ ಡಿಕ್ಕಿಯಲ್ಲಿ, ಆಟೋದಲ್ಲಿದ್ದ ಓರ್ವರು ಮೃತಪಟ್ಟು ಮೂವರು ಗಾಯಗೊಂಡ ಘಟನೆ ಮಾರ್ಚ್ 19 ರಂದು ಶಿವಮೊಗ್ಗ ತಾಲೂಕಿನ ಗಾಜನೂರು ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಬುದ್ಧ ನಗರದ ನಿವಾಸಿ ಪ್ರೇಮ್ ಕುಮಾರ್ (28) ಮೃತಪಟ್ಟವರೆಂದು ಗುರುತಿಸಲಾಗಿದೆ. ಇವರು ಶಿವಮೊಗ್ಗದ ಡಿಸಿ ಕಚೇರಿಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಟೈಪಿಸ್ಟ್ ಆಗಿ ಕಾರ್ಯನಿರ್ವಹಣೆ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಘಟನೆಯಲ್ಲಿ ಮನೋಜ್ (21), ಪವನ್ (21) ಹಾಗೂ ಗಿರೀಶ್ (21) ಎಂಬುವರು ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತಂತೆ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Shivamogga: Private Bus Collision – One Dead, Three Injured in Auto
Shivamogga, March 19: A collision between a private bus and an auto resulted in the death of one person and injuries to three others. The incident occurred on March 19 along the National Highway near Gajanur village in Shivamogga taluk.
The deceased has been identified as Prem Kumar (28), a resident of Buddhanagara. He was working as a typist on an outsourced basis at the Shivamogga Deputy Commissioner’s office.
In the accident, Manoj (21), Pavan (21), and Girish (21) sustained injuries. They have been admitted to the hospital for treatment. A case regarding the incident has been registered at the Tunga Nagar Police Station.

