ಭದ್ರಾವತಿ (bhadravathi), ಮಾರ್ಚ್ 24: ಭದ್ರಾವತಿಯ ನ್ಯೂ ಟೌನ್ ಠಾಣೆ ಪೊಲೀಸರು ಜಾನುವಾರು ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಯುವಕನೋರ್ವನನ್ನು ಬಂಧಿಸಿದ್ದು, ಸದರಿ ಆರೋಪಿಯ ಬಂಧನದಿಂದ 11 ವಿವಿಧ ಅಪರಾಧ ಪ್ರಕರಣಗಳು ಬೆಳಕಿಗೆ ಬಂದಿವೆ!
ಭದ್ರಾವತಿ ನಗರದ ಅಪ್ಪರ್ ಹುತ್ತಾ ನಿವಾಸಿ ದಿಲೀಪ್ ಎಸ್ ಯಾನೆ ಕರಿಯ (20) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿಯಿಂದ 20,500 ನಗದು ಹಾಗೂ 95,500 ರೂ. ಮೌಲ್ಯದ 4 ದ್ವಿಚಕ್ರ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಕಳವು : ಕಳೆದ ಕೆಲ ತಿಂಗಳುಗಳ ಹಿಂದೆ ಭದ್ರಾವತಿಯ ಹೊಸಸಿದ್ದಾಪುರ ಗ್ರಾಮದ ವ್ಯಕ್ತಿಯೋರ್ವರ ಕೊಟ್ಟಿಗೆಯಲ್ಲಿ ಕಟ್ಟಿದ್ದ 2 ಹಸು ಹಾಗೂ 1 ಕರುವನ್ನು ಕಳ್ಳತನ ಮಾಡಲಾಗಿತ್ತು. ಈ ಸಂಬಂಧ ಜಾನುವಾರು ಮಾಲೀಕರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ತನಿಖೆಯ ವೇಳೆ ಆರೋಪಿಯನ್ನು ಬಂಧಿಸಿದ್ದರು. ವಿಚಾರಣೆ ವೇಳೆ ಸದರಿ ಆರೋಪಿಯ 5 ಜಾನುವಾರು ಕಳ್ಳತನ ಪ್ರಕರಣ, 4 ದ್ವಿಚಕ್ರ ವಾಹನ ಕಳ್ಳತನ, 1 ಕೊಲೆ ಯತ್ನ, 1 ಹಲ್ಲೆ ಪ್ರಕರಣ ಸೇರಿದಂತೆ 11 ಪ್ರಕರಣಗಳಲ್ಲಿ ಭಾಗಿಯಾಗಿದ್ದ ವಿವರ ತಿಳಿದುಬಂದಿದೆ ಎಂದು ಪೊಲೀಸ್ ಇಲಾಖೆ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ.
ಡಿವೈಎಸ್ಪಿ ಪ್ರಕಾಶ್ ರಾಥೋಡ್, ಇನ್ಸ್’ಪೆಕ್ಟರ್ ನಾಗಮ್ಮ ಮೇಲ್ವಿಚಾರಣೆಯಲ್ಲಿ ಸಬ್ ಇನ್ಸ್’ಪೆಕ್ಟರ್ ರಮೇಶ್ ಟಿ ನೇತೃತ್ವದಲ್ಲಿ ಪಿಎಐ ಕವಿತಾ, ಸಿಬ್ಬಂದಿಗಳಾದ ನವೀನ್, ಆದರ್ಶ, ಪ್ರಕಾಶ್, ಪ್ರಸನ್ನರವರು ಆರೋಪಿಯನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.
Bhadravati, March 24: The New Town Police Station in Bhadravati has arrested a youth in connection with a cattle theft case. Following his arrest, 11 different criminal cases have come to light!
The accused has been identified as Dilip S, also known as Kariya (20), a resident of Upper Hutta in Bhadravati. Police seized ₹20,500 in cash and four two-wheelers worth ₹95,500 from him.
Theft Incident: A few months ago, two cows and one calf were stolen from a shed belonging to a resident of Hosasidapur village in Bhadravati. Based on the complaint filed by the cattle owner, police registered a case and began investigation.
During the investigation, the accused was arrested. Upon interrogation, it was revealed that he was involved in 11 cases, including five cattle thefts, four two-wheeler thefts, one attempted murder, and one assault case, according to a press release issued by the police department.
The arrest was carried out under the supervision of DYSP Prakash Rathod and Inspector Nagamma, led by Sub-Inspector Ramesh T, along with PAI Kavita and staff members Naveen, Adarsh, Prakash, and Prasanna.