shimoga rain news | ಶಿವಮೊಗ್ಗ : ಭಾರೀ ಮಳೆಗೆ ಎಸ್ ಎಸ್ ಇಂಡಸ್ಟ್ರೀಸ್’ಗೆ ನುಗ್ಗಿದ ನೀರು – ಅಗ್ನಿಶಾಮಕ ದಳದಿಂದ ಕಾರ್ಯಾಚರಣೆ!

Shivamogga: Heavy rain floods SS Industries – Fire brigade operation! shimoga rain news | ಶಿವಮೊಗ್ಗ : ಭಾರೀ ಮಳೆಗೆ ಎಸ್ ಎಸ್ ಇಂಡಸ್ಟ್ರೀಸ್’ಗೆ ನುಗ್ಗಿದ ನೀರು – ಅಗ್ನಿಶಾಮಕ ದಳದಿಂದ ಕಾರ್ಯಾಚರಣೆ!

ಶಿವಮೊಗ್ಗ (shivamogga), ಎಪ್ರಿಲ್ 01 : ಶಿವಮೊಗ್ಗ ನಗರದಲ್ಲಿ ತಡರಾತ್ರಿ ಗುಡುಗು ಬಿರುಗಾಳಿ ಸಹಿತ ಬಿದ್ದ ಭಾರೀ ಮಳೆಯು ನಾನಾ ರೀತಿಯ ಅವಾಂತರಗಳನ್ನು ಸೃಷ್ಟಿ ಮಾಡಿದೆ.

ಭಾರೀ ಮಳೆಯಿಂದ ರಾಜಕಾಲುವೆ ಉಕ್ಕಿ ಹರಿದ ಪರಿಣಾಮದಿಂದ, ಸಾಗರ ರಸ್ತೆಯಲ್ಲಿರುವ ಮುಳ್ಳುತಂತಿ ಹಾಗೂ ಚೈನ್ ಲಿಂಕ್ ಮೆಶ್ ತಯಾರಿಸುವ ಎಸ್ ಎಸ್ ಇಂಡಸ್ಟ್ರೀಸ್ ಸಂಪೂರ್ಣ ಜಲಾವೃತವಾಗಿದ್ದ ಘಟನೆ ನಡೆದಿದೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳ ತಂಡವು ಸತತ 1 ಗಂಟೆಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿ ಪ್ಲೋಟಿಂಗ್ ಯಂತ್ರದ ಮೂಲಕ ಇಂಡಸ್ಟ್ರೀಗೆ ನುಗ್ಗಿದ ನೀರನ್ನು ಹೊರ ಹಾಕಿದೆ.

ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ದಳದ ಐಸಿ ಎಫ್ ಎಸ್ ಟಿ ಓ ಹುಸೇನ್, ಎಎಸ್ಐ ನೂರುಲ್ಲಾ, ಎಲ್ ಎಫ್ ಸುನೀಲ್, ಎಫ್ ಡಿ ಸತೀಶ್, ಎಫ್ ಎಂ ಅಭಿಷೇಕ್ ಭಾಗಿಯಾಗಿದ್ದರು.

Shivamogga: Heavy rain floods SS Industries – Fire brigade operation!

Shivamogga, April 01: Late-night heavy rain accompanied by thunderstorm in Shivamogga city created several disruptions.

Due to the overflowing of the main canal, SS Industries, located on Sagar Road and engaged in manufacturing barbed wire and chain link mesh, was completely inundated.

Upon receiving information, the fire brigade team rushed to the spot and carried out operations for more than an hour. Using a floating machine, they pumped out the water that had entered the industry.

The operation was led by Fire Station Officer (FSTO) Hussain, ASI Noorulla, LF Sunil, FD Satish, and FM Abhishek.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *