KSRTC student bus pass | ವಿದ್ಯಾರ್ಥಿಗಳಿಗೆ ಉಚಿತ/ರಿಯಾಯಿತಿ ಬಸ್ ಪಾಸ್ ವಿತರಣೆ ಆರಂಭ

KSRTC Student bus pass application invinted news / shimoga

ಶಿವಮೊಗ್ಗ (shimoga), ಮೇ 30: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು 2026-27ನೇ ಶೈಕ್ಷಣಿಕ ಸಾಲಿನ ವಿದ್ಯಾರ್ಥಿ ಉಚಿತ/ರಿಯಾಯಿತಿ ಬಸ್‌ಪಾಸ್ ವಿತರಣಾ ಕಾರ್ಯವನ್ನು ಮೇ 29 ರಿಂದ ಆರಂಭಿಸಿದೆ.

ಪ್ರಸಕ್ತ ಸಾಲಿನಲ್ಲಿ ಕರಾರಸಾ ನಿಗಮದ ವಿದ್ಯಾರ್ಥಿ ಬಸ್‌ಪಾಸ್ ಪಡೆಯಲು ಸೇವಾಸಿಂಧು ಪೋರ್ಟಲ್‌ನಲ್ಲಿ ಆನ್ ಲೈನ್ ಅರ್ಜಿ ಸಲ್ಲಿಸಬೇಕಿರುತ್ತದೆ. ಸರ್ಕಾರದ ಆದೇಶದಂತೆ ಸಂಪೂರ್ಣ ಗಣಕೀಕೃತವಾಗಿ ವಿದ್ಯಾರ್ಥಿ ಬಸ್ ಪಾಸ್‌ಗಳನ್ನು ವಿತರಿಸಲಾಗುವುದು. ಪಾಸು ಪಡೆಯಲು ವಿದ್ಯಾರ್ಥಿಗಳು ಸೇವಾಸಿಂಧು URL-https://sevasindhu.karnataka.gov.in/buspassservices ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಬೇಕಿದ್ದು, ಕೆಳಕಂಡ ಕ್ರಮಗಳನ್ನು ಅನುಸರಿಸುವಂತೆ ಕೆಎಸ್ಆರ್’ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಕರ್ನಾಟಕ ಸರ್ಕಾರವು ಕರ್ನಾಟಕ ರಾಜ್ಯದ ಮಹಿಳೆಯರಿಗೆ (ವಿದ್ಯಾರ್ಥಿನಿಯರು, ಲಿಂಗತ್ವ ಅಲ್ಪ ಸಂಖ್ಯಾತರು ಸೇರಿದಂತೆ) ಶಕ್ತಿ ಯೋಜನೆಯಡಿ ಕರ್ನಾಟಕ ರಾಜ್ಯದೊಳಗೆ ಉಚಿತ ಪ್ರಯಾಣ ಸೌಲಭ್ಯವನ್ನು ಒದಗಿಸಿರುತ್ತದೆ. ನೆರೆ ರಾಜ್ಯದ ವಿದ್ಯಾರ್ಥಿನಿಯರು ಕರ್ನಾಟಕ ರಾಜ್ಯದ ಶಾಲೆ/ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿದ್ದರೆ ಈ ಕ್ರಮಗಳನ್ನು ಅನುಸರಿಸಿ ವಿದ್ಯಾರ್ಥಿ ಪಾಸುಗಳನ್ನು ಪಡೆಯುವುದು ಕಡ್ಡಾಯವಾಗಿರುತ್ತದೆ.

ಆನ್ ಲೈನ್ ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಲು ಯಾವುದೇ ಶುಲ್ಕ ಇರುವುದಿಲ್ಲ. ವಿದ್ಯಾರ್ಥಿಗಳು, ಕರ್ನಾಟಕ-ಒನ್ ಮತ್ತು ಗ್ರಾಮ-ಒನ್ ಕೇಂದ್ರಗಳಿಗೆ ಭೇಟಿ ನೀಡಿ ಅಲ್ಲಿನ ಸಿಬ್ಬಂದಿಗಳ ಮೂಲಕವು ಅರ್ಜಿ ಸಲ್ಲಿಸ ಬಹುದಾಗಿದೆ. ಈ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಲು ಸರ್ಕಾರದ ಆದೇಶದಂತೆ ರೂ.30/- ಸೇವಾ ಶುಲ್ಕವನ್ನು ಆ ಕೇಂದ್ರಗಳ ಸಿಬ್ಬಂದಿಗಳು ಪಡೆಯಲು ಅವಕಾಶವಿರುತ್ತದೆ.

ಅರ್ಜಿ ಅನುಮೋದನೆಯಾದ ವಿದ್ಯಾರ್ಥಿಗಳಿಗೆ ಪಾಸು ಪಡೆಯಲು ಭೇಟಿ ನೀಡಬೇಕಿರುವ ಕೌಂಟರ್‌ನ ಹೆಸರು / ವಿಳಾಸ ಮಾಹಿತಿಯನ್ನು ಅರ್ಜಿಯಲ್ಲಿ ನೀಡಲಾದ ಮೊಬೈಲ್ ಸಂಖ್ಯೆಗೆ ಎಸ್‌ಎಂಎಸ್ ಮುಖೇನ ಕಳುಹಿಸಲಾಗುವುದು. ವಿದ್ಯಾರ್ಥಿಗಳು ಆಯ್ಕೆ ಮಾಡಿದ ಕೌಂಟರ್‌ಗೆ ತೆರಳಿ, ನಿಗದಿತ ಪಾಸಿನ ಶುಲ್ಕವನ್ನು ನಗದು, ಕ್ರೆಡಿಟ್‌ಕಾರ್ಡ್ / ಡೆಬಿಟ್ ಕಾರ್ಡ್/UPI ಮುಖೇನ ಪಾವತಿಸಿ ಪಾಸನ್ನು ಪಡೆಯಬಹುದಾಗಿದೆ. ಪಾಸ್ ವಿತರಣಾ ಕೌಂಟರ್‌ಗಳ ವಿವರಗಳನ್ನು ಹಾಗೂ ಪಾಸಿನ ದರಗಳನ್ನು ವಿದ್ಯಾರ್ಥಿಗಳ ಮಾಹಿತಿಗಾಗಿ ನಿಗಮದ ವೆಬ್‌ಸೈಟ್ https://ksrtc.karnataka.gov.in /student pass  ನಲ್ಲಿ ಒದಗಿಸಲಾಗಿದೆ.

ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯ ವಿಧ್ಯಾರ್ಥಿಗಳು ಆನ್‌ಲೈನ್ ಅಥವಾ ಗ್ರಾಮ ಒನ್/ಕರ್ನಾಟಕ ಒನ್‌ನಲ್ಲಿ ಅರ್ಜಿ ಸಲ್ಲಿಸಿ ಪಾಸ್ (ಸ್ಮಾರ್ಟ್ಕಾರ್ಡ್) ಪಡೆಯಲು ಕರ್ನಾಟಕಒನ್, ಶಿವಮೊಗ್ಗ, 01 ನೇ ಮಹಡಿ, ಖಾಸಗಿ ಬಸ್ ನಿಲ್ದಾಣ, ಶಿವಮೊಗ್ಗ-577201.

ಶಿಕಾರಿಪುರ- ಕರ್ನಾಟಕ ಒನ್, ತಾಲೂಕು ಕಚೇರಿ ಹಿಂಭಾಗ, ಶಿಕಾರಿಪುರ-577427. ಭದ್ರಾವತಿ- ಕರ್ನಾಟಕ ಒನ್, ಅಜೀಜ್ ಡಿಜಿಟಲ್ ಸರ್ವಿಸ್, ಓಲ್ಡ್ ಟೌನ್, ಕೋರ್ಟ್ ರಸ್ತೆ, ತಾಲ್ಲೂಕು ಕಛೇರಿ ಎದುರು, ಭದ್ರಾವತಿ. ಸಾಗರ-ಕರ್ನಾಟಕ ಒನ್, ಜ್ಯೋತಿ ಕಂಪ್ಯೂಟರ‍್ಸ್, ಕೋರ್ಟ್ ರಸ್ತೆ, ತಾಲ್ಲೂಕು ಕಛೇರಿ ಎದುರು, ಸಾಗರ-577401.

ಹೊನ್ನಾಳಿ-ಕರ್ನಾಟಕ ಒನ್, ಟಿ.ಎಸ್ ಕಾಂಪ್ಲೆಕ್ಸ್, ಟಿ.ಎಂ ರಸ್ತೆ, ತಾಲ್ಲೂಕು ಕಛೇರಿ ಎದುರು, ಹೊನ್ನಾಳಿ-577217. ಸೊರಬ-ಕರ್ನಾಟಕ ಒನ್, ಮೈಕಾ ಕಂಪ್ಯೂಟರ‍್ಸ್, ನೂರ್ ಕಾಂಪ್ಲೆಕ್ಸ್, ಎಸ್.ಎಸ್ ರಸ್ತೆ, ಸೊರಬ-577429. ಈ ಕರ್ನಾಟಕ ಒನ್ ಕೇಂದ್ರಗಳನ್ನು ಸಂಪರ್ಕಿಸಲು ಕೋರಿದೆ.

ಹೆಚ್ದಿನ ಮಾಹಿತಿಗಾಗಿ ಹಾಗೂ ದೂರುಗಳಿದ್ದಲ್ಲಿ ದೂ.ಸಂ.: 080-24410574/ 8904082030/ 080-49203888/ 080-26252625, ಇ-ಮೇಲ್ : sevasindhu@karnataka.gov.inonehelpdesk@karnataka.gov.incallcentre@ksrtc.org ಗಳನ್ನು ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Free/Discounted Bus Pass Distribution for Students Begins | Shivamogga, May 30: The Karnataka State Road Transport Corporation has started the distribution of free/discounted student bus passes for the academic year 2026–27 from May 29. To obtain a student bus pass this year, students must submit an online application through the Seva Sindhu portal URL – https://sevasindhu.karnataka.gov.in/buspassservices. As per government orders, student bus passes will be distributed in a fully computerized manner. To get the pass, students must apply through the Seva Sindhu portal, following the steps mentioned by the divisional controllers in the notification.

The Government of Karnataka has provided free travel facilities within the state for women (including girl students and gender minorities) under the Shakti scheme. If girl students from neighboring states are studying in schools/colleges in Karnataka, it is mandatory for them to follow these steps to obtain student passes.

There is no fee for submitting applications online. Students may also visit Karnataka-One and Grama-One centers and apply through the staff there. At these centers, as per government orders, a service fee of ₹30/- may be collected by the staff. Once the application is approved, the name/address of the counter where the student must visit to collect the pass will be sent via SMS to the mobile number provided in the application. Students can then go to the selected counter, pay the prescribed pass fee in cash, credit card, debit card, or UPI, and collect the pass. Details of pass distribution counters and pass rates are provided on the KSRTC website https://ksrtc.karnataka.gov.in/studentpass (ksrtc.karnataka.gov.in in Bing) for students’ information.

Shivamogga District Counters:

  • Shivamogga – Karnataka-One, 1st Floor, Private Bus Stand, Shivamogga – 577201
  • Shikaripura – Karnataka-One, behind Taluk Office, Shikaripura – 577427
  • Bhadravati – Karnataka-One, Aziz Digital Service, Old Town, Court Road, opposite Taluk Office, Bhadravati
  • Sagar – Karnataka-One, Jyothi Computers, Court Road, opposite Taluk Office, Sagar – 577401
  • Honnali – Karnataka-One, T.S Complex, T.M Road, opposite Taluk Office, Honnali – 577217
  • Sorab – Karnataka-One, Maika Computers, Noor Complex, S.S Road, Sorab – 577429

For more information or complaints:

Phone: 080-24410574 / 8904082030 / 080-49203888 / 080-26252625 Email: sevasindhu@karnataka.gov.in, onehelpdesk@karnataka.gov.in, callcentre@ksrtc.org

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *