shimoga news | ಶಿವಮೊಗ್ಗ ವಿನೋಬನಗರ ಠಾಣೆ ಪೊಲೀಸರ ಕಾರ್ಯಾಚರಣೆ : ಬೊಮ್ಮನಕಟ್ಟೆ ಆಶ್ರಯ ಬಡಾವಣೆಯ ಇಬ್ಬರು ಅರೆಸ್ಟ್!

Shivamogga Vinobanagar Police Operation: Two Arrested from Bommanakatte Ashraya Colony ಶಿವಮೊಗ್ಗ ವಿನೋಬನಗರ ಠಾಣೆ ಪೊಲೀಸರ ಕಾರ್ಯಾಚರಣೆ : ಬೊಮ್ಮನಕಟ್ಟೆ ಆಶ್ರಯ ಬಡಾವಣೆಯ ಇಬ್ಬರು ಅರೆಸ್ಟ್!

ಶಿವಮೊಗ್ಗ, ಜೂನ್ 22: ಮನೆಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ, ಶಿವಮೊಗ್ಗದ ವಿನೋಬನಗರ ಠಾಣೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.

ಬೊಮ್ಮನಕ್ಕಟೆಯ ಆಶ್ರಯ ಬಡಾವಣೆ ನಿವಾಸಿಗಳಾದ ರವಿ ಯಾನೆ ಬೆಕ್ಕು ಯಾನೆ ರವಿನಾಯ್ಕ್ (27) ಹಾಗೂ ಗಣೇಶ್ ಯಾನೆ ಗಣಿ (26) ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ.

ಆರೋಪಿಗಳಿಂದ 51 ಗ್ರಾಂ ತೂಕದ 6 ಲಕ್ಷ ರೂ. ಮೌಲ್ಯದ ಬಂಗಾರದ ಆಭರಣ, 4 ಸಾವಿರ ರೂ. ಮೌಲ್ಯದ 27 ಗ್ರಾಂ ತೂಕದ ಬೆಳ್ಳಿಯ ಆಭರಣ ವಶಕ್ಕೆ ಪಡೆಯಲಾಗಿದೆ ಎಂದು ಜೂನ್ 22 ರಂದು ಪೊಲೀಸ್ ಇಲಾಖೆ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ತಿಳಿಸಿದೆ.

17-06-2026 ರಂದು ಬೊಮ್ಮನಕಟ್ಟೆ ಆಶ್ರಯ ಬಡಾವಣೆಯ ಡಿ ಬ್ಲಾಕ್ ನ ರಾಮು ಎಂಬುವರ ಮನೆಯಲ್ಲಿ 60.7 ಗ್ರಾಂ ತೂಕದ ಬಂಗಾರದ ಆಭರಣ, 60 ಗ್ರಾಂ ತೂಕದ ಬೆಳ್ಳಿಯ ವಸ್ತುಗಳು, 5 ಸಾವಿರ ನಗದನ್ನು ಕಳ್ಳತನ ಮಾಡಲಾಗಿತ್ತು.

ಪ್ರಕರಣದ ಪತ್ತೆಗಾಗಿ ಎಸ್ಪಿ ನಿಖಿಲ್ ಬಿ ಅವರು ಎಎಎಸ್ಪಿ ಕಾರಿಯಪ್ಪ ಎ ಜಿ, ಡಿವೈಎಸ್ಪಿ ಸಂಜೀವ್ ಕುಮಾರ್ ಮಾರ್ಗದರ್ಶನದಲ್ಲಿ  ಇನ್ಸ್’ಪೆಕ್ಟರ್ ಸಂತೋಷ್ ಕುಮಾರ್ ಡಿ ಕೆ ಉಸ್ತುವಾರಿಯಲ್ಲಿ ಸಬ್ ಇನ್ಸ್’ಪೆಕ್ಟರ್ ಗಳಾದ ತಿರುಮಲೇಶ್ ಜಿ, ಸಿಬ್ಬಂದಿಗಳಾದ ರಾಜು ಕೆ ಆರ್, ಮಲ್ಲಪ್ಪ ಎಸ್ ಜಿ, ಅರುಣ್ ಕುಮಾರ್ ಎನ್, ಮನುಶಂಕರ್ ರವರನ್ನೊಳಗೊಂಡ ವಿಶೇಷ ತಂಡ ರಚಿಸಲಾಗಿತ್ತು.

ಸದರಿ ತಂಡವು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಘಟನೆ ನಡೆದ ಮೂರು ದಿನಗಳಲ್ಲಿಯೇ ಸ್ಥಳೀಯ ಬಡಾವಣೆಯ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಸಫಲವಾಗಿದೆ. ತಂಡದ ಕಾರ್ಯಾಚರಣೆಯನ್ನು ಎಸ್ಪಿ ನಿಖಿಲ್ ಬಿ ಅವರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

Shivamogga Vinobanagar Police Operation: Two Arrested from Bommanakatte Ashraya Colony

Shivamogga, June 22: In connection with a house burglary case, the Vinobanagar Police Station officers in Shivamogga successfully arrested two accused.

The arrested individuals have been identified as residents of Bommanakatte Ashraya Colony — Ravi alias Bekku alias Ravinayak (27) and Ganesh alias Gani (26).

From the accused, police recovered gold ornaments weighing 51 grams worth ₹6 lakh and silver ornaments weighing 27 grams worth ₹4,000, according to the press release issued on June 22.

On June 17, 2026, a burglary took place at the house of Ramu in D Block, Bommanakatte Ashraya Colony, where 60.7 grams of gold ornaments, 60 grams of silver items, and ₹5,000 cash were stolen.

To crack the case, SP Nikhil B formed a special team under the guidance of ASP Kariappa A.G., DySP Sanjeev Kumar, and Inspector Santosh Kumar D.K. The team included Sub-Inspectors Thirumalesh G, staff members Raju K.R., Mallappa S.G., Arun Kumar N., and Manushankar.

The team carried out a swift operation and managed to arrest the two local colony residents within three days of the incident. SP Nikhil B openly praised the team’s successful action.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *