shimoga news | ಅಪಘಾತದಲ್ಲಿ ಸಾವು : ಗಾಜನೂರು, ಆಯನೂರು ಊರಿನ ಹೆಸರೇಳಿದ್ದ ಮಹಿಳೆ – ವಾರಸುದಾರರ ಪತ್ತೆಗೆ ಪೊಲೀಸರ ಮನವಿ

shimoga crime news update

ಶಿವಮೊಗ್ಗ (shivamogga), ಜುಲೈ 04: ಅಪಘಾತದಲ್ಲಿ ಮೃತಪಟ್ಟ ಅಪರಿಚಿತ ಮಹಿಳೆಯ ವಾರಸುದಾರರ ಪತ್ತೆಗೆ ಉಡುಪಿ ಜಿಲ್ಲೆಯ ಬ್ರಹ್ಮಾವರ ಠಾಣೆಯ ಪೊಲೀಸರು ಮನವಿ ಮಾಡಿದ್ದಾರೆ. ಈ ಕುರಿತಂತೆ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ.

ಉಡುಪಿ ಜಿಲ್ಲೆಯ ಬ್ರಹ್ಮಾವರ ಪೋಲಿಸ್ ಠಾಣಾ ವ್ಯಾಪ್ತಿಯ ಬಾರ್ಕೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಎದುರು, ಸುಮಾರು 62 ವರ್ಷದ ಮಹಿಳೆಗೆ ಮೋಟಾರ್ ಸೈಕಲ್ ಡಿಕ್ಕಿ ಹೊಡೆದಿತ್ತು.

ಅವರ ತಲೆಗೆ ಗಂಭೀರ ಸ್ವರೂಪದ ಪೆಟ್ಟು ಬಿದ್ದಿತ್ತು. ಮಹಿಳೆಯನ್ನು ಅಜ್ಜರಕಾಡು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಇವರು ತಮ್ಮ ಹೆಸರು ಲೀಲಾ ಅಲಿಯಾಸ್ ಶಾರದಾ ಅಲಿಯಾಸ್ ಕೆಂಚಮ್ಮ ಎಂದು ಹಾಗು ಗಾಜನೂರು, ಆಯನೂರು ಕಡೆಯವರೆಂದು ಆಸ್ಪತ್ರೆಯಲ್ಲಿ ಹೇಳಿಕೊಂಡಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಜನವರಿ15 ರಂದು ಮಹಿಳೆ ಮೃತಪಟ್ಟಿರುತ್ತಾರೆ. ಮೃತರ ವಾರಸುದಾರರು ಪತ್ತೆಯಾಗದ ಕಾರಣ ಮರಣೋತ್ತರ ಪರೀಕ್ಷೆ ಮಾಡಿಸಿ, ಕ್ರಮದಂತೆ ಮೃತದೇಹವನ್ನು ಅಂತ್ಯ ಸಂಸ್ಕಾರ ಮಾಡಲಾಗಿರುತ್ತದೆ.

ಮೃತ ಮಹಿಳೆಯ ಚಹರೆ : 5.3 ಅಡಿ ಎತ್ತರ, ಸಪೂರ ಶರೀರ, ಗೋಧಿ ಮೈ ಬಣ್ಣ, ಬಲಭುಜದ ಕಾಲರ್ ಬೋನ್‌ನಲ್ಲಿ ಹಾಗೂ ಎಡಗೈ ಕಪ್ಪು ಮಚ್ಚೆ ಇದ್ದು, ಎಡಗೈ ಮಣಿಗಂಟಿಗೆ ಕಪ್ಪು ದಾರ ಕಟ್ಟಿರುತ್ತಾರೆ.

ಮೃತ ಮಹಿಳೆಯ ವಾರಸುದಾರರ ಬಗ್ಗೆ ಸುಳಿವು ಇದ್ದಲ್ಲಿ, ಬ್ರಹ್ಮಾವರ ಪೋಲಿಸ್ ಠಾಣೆಯ ದೂರವಾಣಿ ಸಂಖ್ಯೆ : 9480805453 / 9480805432 ಅಥವಾ ಇ-ಮೇಲ್ : brahmavaraudp@ksp.gov.in ಹಾಗೂ cpibrahmavaraudp@ksp.gov.in ಉಡುಪಿ ಜಿಲ್ಲೆಯ ಕಂಟ್ರೋಲ್ ರೂಮ್ ದೂರವಾಣಿ ಸಂಖ್ಯೆ : 0820-2526709/ 2526444 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *