ಸಾಗರ (sagara), ಜುಲೈ 04: ಸಾಗರ ತಾಲೂಕಿನ ಆಚಾಪುರ ಗ್ರಾಮದಲ್ಲಿ ಟೈರ್ ಹಾಗೂ ರಿಮ್ ಕಳವು ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಯನ್ನು ಆನಂದಪುರ ಠಾಣೆ ಪೊಲೀಸರು ಪತ್ತೆ ಹಚ್ಚುವಲ್ಲಿ ಸಫಲರಾಗಿದ್ದಾರೆ.
ಶಿವಮೊಗ್ಗದ ಟಿಪ್ಪು ನಗರದ ನಿವಾಸಿ ಸೋನು ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಈತನಿಂದ 45 ಸಾವಿರ ರೂ. ಮೌಲ್ಯದ 3 ಟೈರ್ ಮತ್ತು ರಿಮ್ ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
6/02/2026 ರ ರಾತ್ರಿ ಆಚಾಪುರ ಗ್ರಾಮದಲ್ಲಿ ಟೈರ್ ಹಾಗೂ ರಿಮ್ ಗಳನ್ನು ಕಳವು ಮಾಡಲಾಗಿತ್ತು. ಈ ಸಂಬಂಧ ಆನಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸಬ್ ಇನ್ಸ್’ಪೆಕ್ಟರ್ ನೇತೃತ್ವದ ತಂಡವು ಜುಲೈ 3 ರಂದು ಆರೋಪಿಯನ್ನು ಬಂಧಿಸುವಲ್ಲಿ ಸಫಲವಾಗಿದೆ.
Tyre Theft in Achapura Village, Sagar: Man from Tipu Nagar, Shivamogga Arrested! | Sagar, July 4: Police from the Anandapura station have successfully traced the accused involved in the theft of a tyre and rim in Achapura village, Sagar taluk.

