shimoga news | ಶಿವಮೊಗ್ಗದ ಅನುಪಿನಕಟ್ಟೆ ಬಳಿ ಗಾಂಜಾ ಮಾರಾಟ : ಇಬ್ಬರ ಬಂಧನ

shimoga crime news update

ಶಿವಮೊಗ್ಗ (shivamogga), ಜುಲೈ 02: ಶಿವಮೊಗ್ಗ ನಗರದ ಹೊರವಲಯ ಅನುಪಿನಕಟ್ಟೆ ಸಮೀಪದ ತುಂಗಾ ಮೇಲ್ದಂಡೆ ಚಾನಲ್ ಸಮೀಪ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇರೆಗೆ, ಇಬ್ಬರು ಆರೋಪಿಗಳನ್ನು ತುಂಗಾನಗರ ಠಾಣೆ ಪೊಲೀಸರು ಬಂಧಿಸಿದ ಘಟನೆ ಜೂನ್ 29 ರಂದು ನಡೆದಿದೆ.

ಸೈಯದ್ ಅಹಮದ್ ಯಾನೆ ಗುಡ್ಡು (24) ಹಾಗೂ ಮಲ್ಲಿಕ್ ಯಾನೆ ತಬ್ರೇಜ್ (22) ಬಂಧಿತ ಆರೋಪಿಗಳೆಂದು ಗುರುತಿಸಲಾಗಿದೆ. ಆರೋಪಿಗಳಿಂದ 60 ಸಾವಿರ ರೂ. ಮೌಲ್ಯದ 1 ಕೆಜಿ 270 ಗ್ರಾಂ ತೂಕದ ಗಾಂಜಾ ಹಾಗೂ 600 ನಗದನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಆರೋಪಿಗಳ ವಿರುದ್ದ ಎನ್’ಡಿಪಿಎಸ್ ಕಾಯ್ದೆಯಡಿ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಇಲಾಖೆ ಜುಲೈ 02 ರಂದು ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ತಿಳಿಸಿದೆ.

Shivamogga: Ganja Sale Near Anupinakatte – Two Arrested

Shivamogga, July 02: On June 29, police from the Tunganagar station arrested two individuals near the Tunga Left Bank Channel close to Anupinakatte on the outskirts of Shivamogga city, on charges of selling ganja.

The accused have been identified as Syed Ahmed alias Guddu (24) and Mallik alias Tabrez (22). Police seized 1.270 kg of ganja worth ₹60,000 along with ₹600 cash from them.

A case has been registered against the accused under the NDPS Act at the Tunganagar Police Station, according to a press release issued by the district police department on July 02.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *