News Update | ಮೊಬೈಲ್ ಪೋನ್ ವಿವಾದ : ಪುತ್ರ, ತಂದೆ, ತಾಯಿಯ ದುರಂತ ಅಂತ್ಯ!

Maharashtra: A heartbreaking incident occurred near Khawad Hill in Chhatrapati Sambhajinagar on August 21. A son, standing at the edge of a cliff, threatened to jump over a dispute related to a mobile phone. In an attempt to save him, the father rushed forward, but tragically fell into the gorge. The mother, too, tried to rescue them and also fell, resulting in both parents losing their lives.

ಮಹಾರಾಷ್ಟ್ರ : ಮೊಬೈಲ್ ಫೋನ್ ವಿಚಾರಕ್ಕೆ ಸಂಬಂಧಿಸಿದಂತೆ ಬೆಟ್ಟದ ಅಂಚಿನಲ್ಲಿ ನಿಂತು ಬೀಳುವುದಾಗಿ ಹೆದರಿಸುತ್ತಿದ್ದ ಮಗನನ್ನು ರಕ್ಷಿಸಲು ಮುಂದಾದ ತಂದೆ ಹಾಗು ಬಳಿಕ ತಾಯಿ ಕೂಡ ಪ್ರಪಾತಕ್ಕೆ ಬಿದ್ದು ಮೃತಪಟ್ಟ ಹೃದಯ ವಿದ್ರಾವಕ ಘಟನೆ ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದ ಖಾವಡ್ ಬೆಟ್ಟದ ಬಳಿ ಆಗಸ್ಟ್ 21 ರಂದು ನಡೆದಿದೆ.

19 ವರ್ಷದ ಕುನಾಲ್ ಚಂದ್ ಗುಡೆ, ಆತನ ತಂದೆ 48 ವರ್ಷದ ಮುರುಳೀಧರ್ ಚಾಂದ್ಗುಡೆ ಹಾಗೂ 42 ವರ್ಷದ ತಾಯಿ ಸಂಗೀತಾ ಮೃತಪಟ್ಟವರು ಎಂದು ಗುರುತಿಸಲಾಗಿದೆ.

ಹೊಸ ಮೊಬೈಲ್ ಪೋನ್ ವಿಚಾರಕ್ಕೆ ಸಂಬಂಧಿಸಿದಂತೆ ಕುನಾಲ್ ತಂದೆಯೊಂದಿಗೆ ಜಗಳ ಮಾಡಿಕೊಂಡಿದ್ದ. ಇದೇ ವಿಚಾರದಲ್ಲಿ ಬೇಸರಗೊಂಡು ಖಾವಡ್ ಬೆಟ್ಟದ ಬಳಿ ಆಗಮಿಸಿ ಬೆಟ್ಟದಂಚಿನಿಂದ ಕೆಳಕ್ಕೆ ಬೀಳುವುದಾಗಿ ಬೆದರಿಸುತ್ತಿದ್ದ.

ತಂದೆ – ತಾಯಿ ಕೂಡ ಸ್ಥಳಕ್ಕಾಗಮಿಸಿ ಪುತ್ರನ ಮನವೊಲಿಕೆಗೆ ಯತ್ನಿಸಿದ್ದರು. ವಿಚಾರ ತಿಳಿದ ಪೊಲೀಸರು, ಅಗ್ನಿಶಾಮಕ ದಳ, ಸ್ಥಳೀಯ ಗ್ರಾಮಸ್ಥರು ಕೂಡ ಸ್ಥಳಕ್ಕಾಗಮಿಸಿದ್ದರು. ಹಲವು ಗಂಟೆಗಳ ಪ್ರಯತ್ನದ ಹೊರತಾಗಿಯೂ ಕುನಾಲ್ ಬೆದರಿಕೆ ಮುಂದುವರಿಸಿದ್ದ.

ಈ ನಡುವೆ ಮಗನನ್ನು ಹಿಡಿದು ರಕ್ಷಿಸಲು ತಂದೆ ಮುರುಳೀಧರ್ ಮುಂದಾಗಿದ್ದಾರೆ. ಈ ವೇಳೆ ಆಯತಪ್ಪಿ ಇಬ್ಬರು ಪ್ರಪಾತಕ್ಕೆ ಬಿದ್ದಿದ್ದಾರೆ. ಕಣ್ಣದುರೆ ಪತಿ ಹಾಗೂ ಮಗ ಪ್ರಪಾತಕ್ಕೆ ಬೀಳುವುದನ್ನು ಕಂಡು ಆಘಾತಕ್ಕೊಳಗಾದ ಸಂಗೀತಾ ಕೂಡ ಕೆಲ ಕ್ಷಣಗಳಲ್ಲಿ ಬೆಟ್ಟದಿಂದ ಜಿಗಿದಿದ್ದಾರೆ. ರಕ್ಷಣಾ ಸಿಬ್ಬಂದಿಗಳು ಮೂವರ ಮೃತದೇಹಗಳನ್ನು ಪ್ರಪಾತದಿಂದ ಹೊರತೆಗೆದಿದ್ದಾರೆ. ಸದರಿ ಘಟನೆಯ ದೃಶ್ಯಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

Maharashtra: A heartbreaking incident occurred near Khawad Hill in Chhatrapati Sambhajinagar on August 21. A son, standing at the edge of a cliff, threatened to jump over a dispute related to a mobile phone. In an attempt to save him, the father rushed forward, but tragically fell into the gorge. The mother, too, tried to rescue them and also fell, resulting in both parents losing their lives.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *