ಶಿವಮೊಗ್ಗ (shivanogga), ಆಗಸ್ಟ್ 22: ಶಿವಮೊಗ್ಗ ನಗರದ ಹೊರವಲಯ ಹರಕೆರೆಯ ರಿಂಗ್ ರೋಡ್ ಸಮೀಪ ನಡೆದಿದ್ದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಮೂವರು ಆರೋಪಿಗಳನ್ನು ತುಂಗಾನಗರ ಠಾಣೆ ಪೊಲೀಸರು ಬಂಧಿಸುವಲ್ಲಿ ಸಫಲರಾಗಿದ್ದಾರೆ.
ಶಿವಮೊಗ್ಗದ ಅಣ್ಣಾ ನಗರದ ನಿವಾಸಿ ಅಮಾನ್ (24), ಅಶೋಕನಗರದ ನಿವಾಸಿ ಮೊಹಮ್ಮದ್ ಶೆಹಜಾನ್(22) ಹಾಗೂ ಗೋಪಿ ಸರ್ಕಲ್ ನಿವಾಸಿ ಹೇಮಂತ್ ಎಸ್ ಎ (21) ಬಂಧಿತ ಆರೋಪಿಗಳೆಂದು ಗುರುತಿಸಲಾಗಿದೆ.
ಸಾರ್ವಜನಿಕರಿಂದ ಆರೋಪಿಗಳು ದರೋಡೆ ಮಾಡಿದ್ದ 30,500 ನಗದು, ಎರಡು ಮೊಬೈಲ್ ಫೋನ್ ಹಾಗೂ ಕೃತ್ಯಕ್ಕೆ ಬಳಸಿದ್ದ ಇನ್ನೋವಾ ಕಾರನ್ನು ವಶಕ್ಕೆ ಪಡೆಯಲಾಗಿದೆ ಎಂದು ಆಗಸ್ಟ್ 22 ರಂದು ಪೊಲೀಸ್ ಇಲಾಖೆ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.
ಇನ್ಸ್’ಪೆಕ್ಟರ್ ಕೆ ಟಿ ಗುರುರಾಜ್ ನೇತೃತ್ವದಲ್ಲಿ ಪಿಎಸ್ಐ ಗಾದಿಲಿಂಗಪ್ಪ ಗೌಡರ್, ರಘುವೀರ್, ಸಿಬ್ಬಂದಿಗಳಾದ ಶ್ಯಾಮ್ ಕುಮಾರ್, ಮೋಹನ್ ಕುಮಾರ್, ನಾಗಪ್ಪ ಅಡಿವಪ್ಪನವರ್, ಪ್ರಶಾಂತ್ ಕುಮಾರ್, ಅಬ್ದುಲ್ ಖಾದರ್ ಜಿಲಾನಿ, ಪ್ರವೀಣ್, ಪುನೀತ್ ರವರು ಆರೋಪಿಗಳನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.
ಪ್ರಕರಣದ ಹಿನ್ನೆಲೆ : ಇನ್ನೋವಾ ಕಾರಿನಲ್ಲಿ ಆಗಮಿಸಿದ್ದ ಮೂವರು ಆರೋಪಿಗಳು, ಹರಕೆರೆ ರಿಂಗ್ ರೋಡ್ ನಲ್ಲಿದ್ದ ಇಬ್ಬರ ಮೇಲೆ ಹಲ್ಲೆ ನಡೆಸಿದ್ದರು. ನಂತರ ಅವರ ಬಳಿಯಿದ್ದ ನಗದು ಹಾಗೂ ಮೊಬೈಲ್ ಫೋನ್ ಕಿತ್ತುಕೊಂಡು ಪರಾರಿಯಾಗಿದ್ದರು. ಈ ಕುರಿತಂತೆ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
Robbery near Harakere Ring Road, Shivamogga: Three arrested! | Shivamogga, August 22: Tunganagar police have successfully arrested three accused individuals in connection with a robbery case that occurred near the Harakere Ring Road on the outskirts of Shivamogga city.

