kuvempu university news | ಕುವೆಂಪು ವಿಶ್ವವಿದ್ಯಾಲಯ ಪಿಜಿ, ಸ್ನಾತಕೋತ್ತರ ಡಿಪ್ಲೊಮಾ ಪ್ರವೇಶ : ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

Kuvempu University

ಶಿವಮೊಗ್ಗ (shivamogga), ಜುಲೈ 25: ಕುವೆಂಪು ವಿಶ್ವವಿದ್ಯಾಲಯವು 2026-27ನೇ ಸಾಲಿನ ವಿವಿಧ ಸ್ನಾತಕೋತ್ತರ ಪದವಿ, ಸ್ನಾತಕೋತ್ತರ ಡಿಪ್ಲೊಮಾ ಹಾಗೂ ಸರ್ಟಿಫಿಕೇಟ್ ಕೋರ್ಸ್ಗಳ ಪ್ರವೇಶಾತಿಗಾಗಿ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು ಜುಲೈ 31 ರವರೆಗೆ ವಿಸ್ತರಿಸಿದೆ.

ಸ್ನಾತಕ ಪದವಿಯ ರಿಪೀಟರ್ಸ್ ಪರೀಕ್ಷಾ ಫಲಿತಾಂಶಗಳು ಹಾಗೂ ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳ ಪರೀಕ್ಷಾ ಫಲಿತಾಂಶ ಪ್ರಕಟಣೆ ವಿಳಂಬವಾಗಿರುವ ಹಿನ್ನೆಲೆಯಲ್ಲಿ, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕುಲಪತಿಗಳ ಅನುಮೋದನೆ ಪಡೆದು ಅರ್ಜಿ ಸಲ್ಲಿಕೆಯ ವೇಳಾಪಟ್ಟಿಯನ್ನು ಮರು ನಿಗದಿಪಡಿಸಲಾಗಿದೆ.

ಜುಲೈ 31 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದ್ದು ಮೆರಿಟ್ ಪಟ್ಟಿ ಪ್ರಕಟಣೆ: ಆಗಸ್ಟ್ 10, ಪ್ರವೇಶಾತಿ ಕೌನ್ಸಿಲಿಂಗ್ (ಮೆರಿಟ್ & ವಿಶೇಷ ವರ್ಗ): ಆಗಸ್ಟ್ 13, ಪ್ರವೇಶಾತಿ ಕೌನ್ಸಿಲಿಂಗ್ (ಮೆರಿಟ್ ಕಮ್ ಪೇಮೆಂಟ್):ಆಗಸ್ಟ್ 14 ಆಗಿರುತ್ತದೆ.

ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ನಿಗದಿತ ದಿನಾಂಕದೊಳಗೆ ಅರ್ಜಿ ಸಲ್ಲಿಸಿ ಇದರ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ ಎಂದು ವಿಶ್ವವಿದ್ಯಾಲಯದ ಕುಲಸಚಿವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Kuvempu University PG – Postgraduate Diploma Admission: Application Submission Period Extended | Shivamogga, July 25: Kuvempu University has extended the last date for submitting applications for admission to various postgraduate degrees, postgraduate diploma and certificate courses for the year 2026-27 to July 31.
In the wake of the delay in the publication of the results of the repeaters’ examination of the bachelor’s degree and the examination results of various universities in the state, the application submission schedule has been rescheduled with the approval of the Vice-Chancellor in the interest of the students.
The last date for submitting applications is July 31, and the merit list will be published on August 10, admission counseling (merit & special category): August 13, admission counseling (merit cum payment): August 14.
Eligible and interested candidates can apply by the specified date and take advantage of this, the university’s Registrar said in a press release. #shimoga #Shivamogga #kuvempuuniversity #NewsUpdate #newsfeed

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *