malnad rain news | ಮಳೆ ಕೊರತೆ : ಅಂಜನಾಪುರ, ಅಂಬ್ಲಿಗೋಳ ಜಲಾಶಯ ವ್ಯಾಪ್ತಿಯ ರೈತರಿಗೆ ನೀರಾವರಿ ಇಲಾಖೆ ಮನವಿ

Shivamogga: Heavy rain before Diwali! ಶಿವಮೊಗ್ಗ : ದೀಪಾವಳಿಗೂ ಮುನ್ನ ಭರ್ಜರಿ ಮಳೆ!

ಶಿವಮೊಗ್ಗ, ಜು, 22 : ಮುಂಗಾರು ಮಳೆ ಕೊರತೆಯಿಂದ, ಶಿಕಾರಿಪುರ ತಾಲೂಕಿನ ಅಂಜನಾಪುರ ಮತ್ತು ಅಂಬ್ಲಿಗೋಳ ಜಲಾಶಯಗಳ ನೀರಿನ ಸಂಗ್ರಹದಲ್ಲಿ ಇಳಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಸದರಿ ಜಲಾಶಯಗಳ ನೀರನ್ನು ನಂಬಿಕೊಂಡು, ಯಾವುದೇ ಬೆಳೆ ಬೆಳೆಯದಂತೆ ನೀರಾವರಿ ಇಲಾಖೆಯು ರೈತರಿಗೆ ಮನವಿ ಮಾಡಿದೆ.

ರಾಜ್ಯಾದ್ಯಂತ ಬಹುತೇಕ ಜಲಾಶಯಗಳಲ್ಲಿ ಒಳಹರಿವು ಕಡಿಮೆಯಾಗಿದೆ. ‘ಎಲ್ ನಿನೋ’ ಪರಿಣಾಮದಿಂದ ಉಂಟಾಗಲಿರುವ ಬರ ಪರಿಸ್ಥಿತಿ ಕುರಿತಂತೆ ಜುಲೈ 2 ರಂದು ಸಿಎಂ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಸುದೀರ್ಘ ಚರ್ಚೆಯಾಗಿದೆ. ಜಲಾಶಯಗಳಲ್ಲಿನ ನೀರಿನ ಕೊರತೆ ಹಿನ್ನೆಲೆಯಲ್ಲಿ “ಜಲಾಶಯ ನಂಬಿಕೊಂಡು ಯಾವ ರೈತರೂ ಬೆಳೆ ಹಾಕಬೇಡಿ” ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.

ಮುಖ್ಯಮಂತ್ರಿಗಳ ನಿರ್ದೇಶನದಂತೆ, ಪ್ರಸ್ತುತ ಜಲಾಶಯಗಳಲ್ಲಿ ಲಭ್ಯವಿರುವ ನೀರನ್ನು ಕಡ್ಡಾಯವಾಗಿ ಕುಡಿಯುವ ನೀರಿನ ಉದ್ದೇಶಕ್ಕೆ ಮಾತ್ರ ಕಾಯ್ದಿರಿಸಬೇಕಾದ ಪರಿಸ್ಥಿತಿ ಉದ್ಭವಿಸಿದೆ. ಈ ಹಿನ್ನೆಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಅಂಜನಾಪುರ ಮತ್ತು ಅಂಬ್ಲಿಗೋಳ ಜಲಾಶಯಗಳ ನೀರನ್ನು ನಂಬಿಕೊಂಡು ಯಾವುದೇ ಬೆಳೆಯನ್ನು ಬೆಳೆಯದಂತೆ ರೈತರಿಗೆ ಮನವರಿಕೆ ಮಾಡಲಾಗುತ್ತಿದೆ.

ರೈತರು ಪ್ರಸ್ತುತ ಮುಂಗಾರು ಹಂಗಾಮಿನ ಬೆಳೆಗಳನ್ನು ಬೆಳೆಯದೆ, ನೀರಾವರಿ ಇಲಾಖೆಯೊಂದಿಗೆ ಸಂಪೂರ್ಣವಾಗಿ ಸಹಕರಿಸಬೇಕಾಗಿ ಕಾರ್ಯಪಾಲಕ ಎಂಜಿನಿಯರ್‌ ರವರು ಪತ್ರಿಕಾ ಪ್ರಕಟಣೆ ಮೂಲಕ ವಿನಂತಿಸಿದ್ದಾರೆ.

Irrigation Department appeals to farmers in Anjanapura, Ambligola reservoir area | Shivamogga, July 22: Due to lack of monsoon rains, the water storage of Anjanapura and Ambligola reservoirs in Shikaripura taluk has decreased. In this context, the Irrigation Department has appealed to farmers not to grow any crops while relying on the water of the said reservoirs.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *