shimoga news | ಭದ್ರಾವತಿ ಸರ್ಕಾರಿ ಹಾಸ್ಟೆಲ್ ಗೆ ತೆರಳಿದ ಶಿವಮೊಗ್ಗದ ಬಾಲಕ ನಾಪತ್ತೆ!

ಭದ್ರಾವತಿ ಸರ್ಕಾರಿ ಹಾಸ್ಟೆಲ್ ಗೆ ತೆರಳಿದ ಶಿವಮೊಗ್ಗದ ಬಾಲಕ ನಾಪತ್ತೆ! ಶಿವಮೊಗ್ಗ, ಸೆಪ್ಟಂಬರ್ 03: ಮನೆಯಿಂದ ಸರ್ಕಾರಿ ಹಾಸ್ಟೆಲ್ ಗೆ ತೆರಳಿದ ಬಾಲಕನೋರ್ವ ನಿಗೂಢವಾಗಿ ಕಣ್ಮರೆಯಾಗಿರುವ ಘಟನೆ ಸಂಬಂಧ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾದ ಘಟನೆ ನಡೆದಿದೆ. ಶಿವಮೊಗ್ಗದ ಕೋಟೆಗಂಗೂರು ಗ್ರಾಮದ ಅಡಕೆ ಮಂಡಿ ಲೇಔಟ್ ನಿವಾಸಿ ಸಲ್ಮಾನ್ ಎಂಬುವವರ ಮಗ ಸೂಫಿಯಾನ್ (12 ವರ್ಷ) ನಾಪತ್ತೆಯಾದ ಬಾಲಕ ಎಂದು ಗುರುತಿಸಲಾಗಿದೆ. ಆಗಸ್ಟ್ 18 ರಂದು ಮನೆಯಿಂದ ಭದ್ರಾವತಿಯ ಸರ್ಕಾರಿ ಹಾಸ್ಟೆಲ್ಗೆಂದು ಬಾಲಕ ತೆರಳಿದ್ದನು. ಆದರೆ ಅಲ್ಲಿಗೆ ಹೋಗದೆ ಕಾಣೆಯಾಗಿದ್ದು, ಈವರೆಗೂ ಆತನ ಸುಳಿವು ಲಭ್ಯವಾಗಿಲ್ಲ. ಚಹರೆ : ಕಾಣೆಯಾದ ಬಾಲಕ 3.8 ಅಡಿ ಎತ್ತರ, ತೆಳುವಾದ ಮೈಕಟ್ಟು, ಎಣ್ಣೆಗೆಂಪು ಮೈಬಣ್ಣ, ಕೋಲು ಮುಖ ಹೊಂದಿದ್ದು, ಬಲಗಣ್ಣಿನ ಕೆಳಗೆ ಮತ್ತು ಮೂಗಿನ ಮೇಲೆ ಹಳೆ ಗಾಯದ ಗುರುತುಗಳಿವೆ. ಮನೆಯಿಂದ ಹೋಗುವಾಗ ಕೆಂಪು ಶರ್ಟ್ ನೀಲಿ ಪ್ಯಾಂಟ್, ನಶೆ ಬಣ್ಣದ ಜರ್ಕಿನ್ ಧರಿಸಿರುತ್ತಾರೆ. ಸದರಿ ಬಾಲಕನ ಕುರಿತು ಸುಳಿವು ಲಭ್ಯವಾದಲ್ಲಿ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ ; 08182-261400/261418/9480803332/ 9480803350 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ. Shimoga boy missing after leaving for Bhadravati government

ಶಿವಮೊಗ್ಗ (shivamogga), ಸೆಪ್ಟಂಬರ್ 03: ಮನೆಯಿಂದ ಸರ್ಕಾರಿ ಹಾಸ್ಟೆಲ್ ಗೆ ತೆರಳಿದ ಬಾಲಕನೋರ್ವ ನಿಗೂಢವಾಗಿ ಕಣ್ಮರೆಯಾಗಿರುವ ಘಟನೆ ಸಂಬಂಧ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾದ ಘಟನೆ ನಡೆದಿದೆ.

ಶಿವಮೊಗ್ಗದ ಕೋಟೆಗಂಗೂರು ಗ್ರಾಮದ ಅಡಕೆ ಮಂಡಿ ಲೇಔಟ್ ನಿವಾಸಿ ಸಲ್ಮಾನ್ ಎಂಬುವವರ ಮಗ ಸೂಫಿಯಾನ್ (12 ವರ್ಷ) ನಾಪತ್ತೆಯಾದ ಬಾಲಕ ಎಂದು ಗುರುತಿಸಲಾಗಿದೆ.

ಆಗಸ್ಟ್ 18 ರಂದು ಮನೆಯಿಂದ ಭದ್ರಾವತಿಯ ಸರ್ಕಾರಿ ಹಾಸ್ಟೆಲ್‌ಗೆಂದು ಬಾಲಕ ತೆರಳಿದ್ದನು. ಆದರೆ ಅಲ್ಲಿಗೆ ಹೋಗದೆ ಕಾಣೆಯಾಗಿದ್ದು, ಈವರೆಗೂ ಆತನ ಸುಳಿವು ಲಭ್ಯವಾಗಿಲ್ಲ.

ಚಹರೆ : ಕಾಣೆಯಾದ ಬಾಲಕ 3.8 ಅಡಿ ಎತ್ತರ, ತೆಳುವಾದ ಮೈಕಟ್ಟು, ಎಣ್ಣೆಗೆಂಪು ಮೈಬಣ್ಣ, ಕೋಲು ಮುಖ ಹೊಂದಿದ್ದು, ಬಲಗಣ್ಣಿನ ಕೆಳಗೆ ಮತ್ತು ಮೂಗಿನ ಮೇಲೆ ಹಳೆ ಗಾಯದ ಗುರುತುಗಳಿವೆ. ಮನೆಯಿಂದ ಹೋಗುವಾಗ ಕೆಂಪು ಶರ್ಟ್ ನೀಲಿ ಪ್ಯಾಂಟ್, ನಶೆ ಬಣ್ಣದ ಜರ್ಕಿನ್ ಧರಿಸಿರುತ್ತಾರೆ.

ಸದರಿ ಬಾಲಕನ ಕುರಿತು ಸುಳಿವು ಲಭ್ಯವಾದಲ್ಲಿ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ ; 08182-261400/261418/9480803332/ 9480803350 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.

Shimoga boy missing after leaving for Bhadravati government hostel | Shimoga, September 03: A mysterious incident has been reported in which a boy who left home to go to a government hostel has gone missing. A complaint regarding this case has been registered at the Shimoga Rural Police Station.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *