railway news | ರೈಲುಗಳ ಸಂಚಾರದಲ್ಲಿ ಬದಲಾವಣೆ : ಯಾವಾಗ? ಕಾರಣವೇನು?

shimoga railway - train news

ಶಿವಮೊಗ್ಗ (shivamogga), ಸೆಪ್ಟೆಂಬರ್ 17: ತುಮಕೂರು-ದಾವಣಗೆರೆ ಹೊಸ ಬ್ರಾಡ್ ಗೇಜ್ (ಬಿಜಿ) ಮಾರ್ಗಕ್ಕೆ ಸಂಬಂಧಿಸಿದ ತೊಳಹುಣಸೆ ಯಾರ್ಡ್ನಲ್ಲಿ ಸಂಪರ್ಕ ಜೋಡಣೆ ಕಾಮಗಾರಿ ಹಮ್ಮಿಕೊಂಡಿರುವುದರಿಂದ, ರೈಲು ಸೇವೆಗಳ ಸಂಚಾರದಲ್ಲಿ ಈ ಕೆಳಗಿನಂತೆ ಬದಲಾವಣೆಗಳನ್ನು ಮಾಡಲಾಗುತ್ತದೆ. ವಿವರಗಳು ಹೀಗಿವೆ:

ರೈಲುಗಳ ಸಂಚಾರ ರದ್ದು: 1. ರೈಲು ಸಂಖ್ಯೆ 16214 ಎಸ್ಎಸ್ಎಸ್ ಹುಬ್ಬಳ್ಳಿ–ಅರಸೀಕೆರೆ ಡೈಲಿ ಎಕ್ಸ್’ಪ್ರೆಸ್ ರೈಲನ್ನು ದಿನಾಂಕ 08.10.2026 ಮತ್ತು 09.10.2026 ರಂದು (2 ದಿನಗಳು ಮಾತ್ರ) ರದ್ದುಗೊಳಿಸಲಾಗುವುದು.

2. ರೈಲು ಸಂಖ್ಯೆ 16213 ಅರಸೀಕೆರೆ–ಎಸ್ಎಸ್ಎಸ್ ಹುಬ್ಬಳ್ಳಿ ಡೈಲಿ ಎಕ್ಸ್’ಪ್ರೆಸ್ ರೈಲನ್ನು ದಿನಾಂಕ 09.10.2026 ಮತ್ತು 10.10.2026 ರಂದು (2 ದಿನಗಳು ಮಾತ್ರ) ರದ್ದುಗೊಳಿಸಲಾಗುವುದು.

ರೈಲುಗಳ ಸಂಚಾರ ಭಾಗಶಃ ರದ್ದು: 1. ದಿನಾಂಕ 22.09.2026, 23.09.2026, 27.09.2026, 01.10.2026, 02.10.2026, 03.10.2026, 06.10.2026, 07.10.2026, 08.10.2026 ಮತ್ತು 09.10.2026 ರಂದು (10 ದಿನಗಳು ಮಾತ್ರ) ಹೊರಡುವ ರೈಲು ಸಂಖ್ಯೆ 12725 ಕೆಎಸ್ಆರ್ ಬೆಂಗಳೂರು–ಧಾರವಾಡ ಸಿದ್ಧಗಂಗಾ ಡೈಲಿ ಸೂಪರ್’ಫಾಸ್ಟ್ ಎಕ್ಸ್’ಪ್ರೆಸ್ ರೈಲು ಬೀರೂರು ಮತ್ತು ಧಾರವಾಡ ನಡುವೆ ಭಾಗಶಃ ರದ್ದುಗೊಳ್ಳಲಿದ್ದು, ಧಾರವಾಡದ ಬದಲಿಗೆ ಬೀರೂರಿನಲ್ಲಿಯೇ ತನ್ನ ಪ್ರಯಾಣವನ್ನು ಕೊನೆಗೊಳಿಸಲಿದೆ.

2. ದಿನಾಂಕ 23.09.2026, 24.09.2026, 28.09.2026, 02.10.2026, 03.10.2026, 04.10.2026, 07.10.2026, 08.10.2026, 09.10.2026 ಮತ್ತು 10.10.2026 ರಂದು (10 ದಿನಗಳು ಮಾತ್ರ) ಹೊರಡುವ ರೈಲು ಸಂಖ್ಯೆ 12726 ಧಾರವಾಡ–ಕೆಎಸ್ಆರ್ ಬೆಂಗಳೂರು ಸಿದ್ಧಗಂಗಾ ಡೈಲಿ ಸೂಪರ್’ಫಾಸ್ಟ್ ಎಕ್ಸ್’ಪ್ರೆಸ್, ಧಾರವಾಡದ ಬದಲಿಗೆ ಬೀರೂರಿನಿಂದಲೇ ತನ್ನ ನಿಗದಿತ ನಿರ್ಗಮನ ಸಮಯಕ್ಕೆ ಪ್ರಯಾಣವನ್ನು ಆರಂಭಿಸಲಿದೆ.

3. ದಿನಾಂಕ 25.09.2026, 26.09.2026, 27.09.2026, 01.10.2026, 05.10.2026, 06.10.2026, 11.10.2026, 12.10.2026 ಮತ್ತು 13.10.2026 ರಂದು (9 ದಿನಗಳು ಮಾತ್ರ) ಹೊರಡುವ ರೈಲು ಸಂಖ್ಯೆ 17347 ಎಸ್ಎಸ್ಎಸ್ ಹುಬ್ಬಳ್ಳಿ–ಚಿತ್ರದುರ್ಗ ಡೈಲಿ ಎಕ್ಸ್’ಪ್ರೆಸ್ ರೈಲು ಹರಿಹರ ಮತ್ತು ಚಿತ್ರದುರ್ಗ ನಡುವೆ ಭಾಗಶಃ ರದ್ದುಗೊಳ್ಳಲಿದ್ದು, ಚಿತ್ರದುರ್ಗದ ಬದಲಿಗೆ ಹರಿಹರದಲ್ಲಿಯೇ ತನ್ನ ಪ್ರಯಾಣವನ್ನು ಕೊನೆಗೊಳಿಸಲಿದೆ.

4, ದಿನಾಂಕ 25.09.2026, 26.09.2026, 27.09.2026, 01.10.2026, 05.10.2026, 06.10.2026, 11.10.2026, 12.10.2026 ಮತ್ತು 13.10.2026 ರಂದು (9 ದಿನಗಳು ಮಾತ್ರ) ಹೊರಡುವ ರೈಲು ಸಂಖ್ಯೆ 17348 ಚಿತ್ರದುರ್ಗ–ಎಸ್ಎಸ್ಎಸ್ ಹುಬ್ಬಳ್ಳಿ ಡೈಲಿ ಎಕ್ಸ್’ಪ್ರೆಸ್, ಚಿತ್ರದುರ್ಗದ ಬದಲಿಗೆ ಹರಿಹರದಿಂದ ತನ್ನ ನಿಗದಿತ ನಿರ್ಗಮನ ಸಮಯಕ್ಕೆ ಪ್ರಯಾಣ ಆರಂಭಿಸಲಿದೆ.

5. ದಿನಾಂಕ 25.09.2026, 26.09.2026, 27.09.2026, 01.10.2026, 05.10.2026, 06.10.2026, 11.10.2026, 12.10.2026 ಮತ್ತು 13.10.2026 ರಂದು (9 ದಿನಗಳು ಮಾತ್ರ) ಹೊರಡುವ ರೈಲು ಸಂಖ್ಯೆ 20676 ಮೈಸೂರು–ಬೆಳಗಾವಿ ಎಕ್ಸ್’ಪ್ರೆಸ್ ಬೀರೂರು ಮತ್ತು ಬೆಳಗಾವಿ ನಡುವೆ ಭಾಗಶಃ ರದ್ದುಗೊಳ್ಳಲಿದ್ದು, ಬೆಳಗಾವಿಯ ಬದಲಿಗೆ ಬೀರೂರಿನಲ್ಲಿಯೇ ತನ್ನ ಪ್ರಯಾಣವನ್ನು ಕೊನೆಗೊಳಿಸಲಿದೆ.

6. ದಿನಾಂಕ 26.09.2026, 27.09.2026, 28.09.2026, 02.10.2026, 05.10.2026, 06.10.2026, 11.10.2026, 12.10.2026 ಮತ್ತು 13.10.2026 ರಂದು (9 ದಿನಗಳು ಮಾತ್ರ) ಹೊರಡುವ ರೈಲು ಸಂಖ್ಯೆ 20675 ಬೆಳಗಾವಿ–ಮೈಸೂರು ಎಕ್ಸ್’ಪ್ರೆಸ್ ಬೆಳಗಾವಿಯ ಬದಲಿಗೆ ಬೀರೂರಿನಿಂದಲೇ ತನ್ನ ನಿಗದಿತ ನಿರ್ಗಮನ ಸಮಯಕ್ಕೆ ಪ್ರಯಾಣ ಆರಂಭಿಸಲಿದೆ.

Shimoga (Shivamogga), September 17: Due to the ongoing connection works at Tolahunashe Yard related to the new Tumkur–Davangere Broad Gauge (BG) line changes will be made to train services as follows. The details are:

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *