ಶಿವಮೊಗ್ಗ ಆರ್’ಟಿಓ ಕಚೇರಿ ಪ್ರಕಟಣೆ : ತೆರಿಗೆ ಬಾಕಿಯಿದ್ದ 9 ವಾಹನಗಳ ಬಹಿರಂಗ ಹರಾಜು

auction

ಶಿವಮೊಗ್ಗ (shivamogga), ಸೆಪ್ಟೆಂಬರ್ 18: ಸರ್ಕಾರಕ್ಕೆ ತೆರಿಗೆ ಪಾವತಿಸದೆ ಬಾಕಿ ಉಳಿಸಿಕೊಂಡಿರುವ ಒಟ್ಟು 9 ವಾಹನಗಳನ್ನು, ವಿಲೇವಾರಿ ಮಾಡಲು ಪ್ರಾದೇಶಿಕ ಸಾರಿಗೆ ಇಲಾಖೆ ನಿರ್ಧರಿಸಿದೆ.

ಈ ಸಂಬಂಧ ಸೆಪ್ಟೆಂಬರ್ 25 ರಂದು ಮಧ್ಯಾಹ್ನ 3 ಗಂಟೆಗೆ ಬಹಿರಂಗ ಹರಾಜು ಪ್ರಕ್ರಿಯೆ ನಡೆಯಲಿದೆ ಎಂದು ಶಿವಮೊಗ್ಗ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹರಾಜು ನಡೆಯುವ ಸ್ಥಳ ಮತ್ತು ಸಮಯ: ಸೆಪ್ಟೆಂಬರ್ 25 ರ ಮಧ್ಯಾಹ್ನ 3 ಗಂಟೆಗೆ ಮಲವಗೊಪ್ಪದಲ್ಲಿರುವ ಚಾಲನಾ ತರಬೇತಿ ಟ್ರ್ಯಾಕ್, ಶಿವಮೊಗ್ಗ ಇಲ್ಲಿ ನಡೆಯಲಿದೆ. ಆಸಕ್ತ ಸಾರ್ವಜನಿಕರು ಹಾಗೂ ಬಿಡ್‌ದಾರರು ನಿಗದಿತ ಸಮಯಕ್ಕೆ ಸರಿಯಾಗಿ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿ ಇದರ ಪ್ರಯೋಜನ ಪಡೆದುಕೊಳ್ಳಬಹುದು ಎಂದು ಇಲಾಖೆ ಮನವಿ ಮಾಡಿದೆ.

Shivamogga RTO Office Announcement: Public Auction of 9 Vehicles with Tax Arrears | Shivamogga, 18: The Regional Transport Department has decided to dispose of a total of 9 vehicles for which tax payments to the government were left outstanding. The Regional Transport Officer Shivamogga announced via a press release that a public auction for these vehicles will be held on September 25 at 3:00 PM. Auction Venue and Time: September 25 at 3:00 PM

Location: Driving Training Track, Malavagoppa, Shivamogga. The department has invited interested members of the public and prospective bidders to participate in the auction at the scheduled time and avail themselves of this opportunity.

 

 

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *