shimoga news | ಶಿವಮೊಗ್ಗ : ನಾಯಿ ಮರಿಗಳನ್ನು ನುಂಗಲು ಆಗಮಿಸಿದ ವೇಳೆ ಸಿಕ್ಕಿಬಿದ್ದ ಹೆಬ್ಬಾವು!

Shivamogga, September 21: A python that had arrived to swallow puppies was safely rescued by snake rescuer 'Snake Kiran' near Kallaganguru, on the outskirts of Shivamogga city.

ಶಿವಮೊಗ್ಗ (shivamogga), ಸೆಪ್ಟೆಂಬರ್ 21: ನಾಯಿ ಮರಿಗಳನ್ನು ನುಂಗಲು ಆಗಮಿಸಿದ ಹೆಬ್ಬಾವನ್ನು ಉರಗ ಸಂರಕ್ಷಕ ಸ್ನೇಕ್ ಕಿರಣ್ ಅವರು ಸುರಕ್ಷಿತವಾಗಿ ಸಂರಕ್ಷಿಸಿದ ಘಟನೆ, ಶಿವಮೊಗ್ಗ ನಗರದ ಹೊರವಲಯ ಕಲ್ಲಗಂಗೂರು ಬಳಿ ನಡೆದಿದೆ.

ರಾಘವೇಂದ್ರ ಜಲ್ಲಿ ಕ್ರಷರ್ ಬಳಿ ಘಟನೆ ನಡೆದಿದೆ. ಕ್ರಷರ್ ಬಳಿ ನಾಯಿಯೊಂದು ಮರಿಗಳನ್ನು ಹಾಕಿತ್ತು. ಇವುಗಳನ್ನು ನುಂಗಲು ಹೆಬ್ಬಾವೊಂದು ಮರಿಗಳಿದ್ದ ಸ್ಥಳದ ಬಳಿ ರಾತ್ರಿ ವೇಳೆ ಆಗಮಿಸಿದೆ.

ತಾಯಿ ನಾಯಿಯು ಹೆಬ್ಬಾವನ್ನು ಗಮನಿಸಿ ಜೋರಾಗಿ ಬೊಗಳಲಾರಂಭಿಸಿದೆ. ನಾಯಿ ಬೊಗಳುವ ಶಬ್ದ ಗಮನಿಸಿದ ಕಾರ್ಮಿಕರು ಸ್ಥಳಕ್ಕಾಗಮಿಸಿದ ವೇಳೆ, ಹೆಬ್ಬಾವು ಕಂಡುಬಂದಿದೆ.

ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಸ್ನೇಕ್ ಕಿರಣ್ ಅವರು ಕಾಂಪೌಂಡ್ ಬಳಿಯಿದ್ದ ಸುಮಾರು 6 ಅಡಿ ಉದ್ದದ ಹೆಬ್ಬಾವನ್ನು ರಕ್ಷಿಸಿದ್ದಾರೆ.

Shivamogga: Python caught while attempting to swallow puppies!
Shivamogga, September 21: A python that had arrived to swallow puppies was safely rescued by snake rescuer ‘Snake Kiran’ near Kallaganguru, on the outskirts of Shivamogga city.
The incident occurred near the Raghavendra Jelly Crusher. A mother dog had given birth to puppies near the crusher unit, and a python had arrived at the spot during the night, intending to prey on them.
The mother dog spotted the python and began barking loudly. Workers, alerted by the barking, arrived at the scene and discovered the python.
Upon being informed of the situation, Snake Kiran arrived at the location and rescued the python, which measured approximately six feet in length, from near the compound wall.

 

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *