ಶಿವಮೊಗ್ಗ (shivamogga), ಸೆಪ್ಟೆಂಬರ್ 21: ಶಿವಮೊಗ್ಗ ನಗರದಲ್ಲಿ ತೀರ್ಥಹಳ್ಳಿ ತಹಶೀಲ್ದಾರ್ ಗೆ ಸೇರಿದ ಕಾರಿಗೆ, ಮತ್ತೊಂದು ಕಾರು ಡಿಕ್ಕಿ ಹೊಡೆದು ನಿಲ್ಲಿಸದೆ ಪರಾರಿಯಾದ ಘಟನೆ ಭಾರೀ ಹೈಡ್ರಾಮಾಕ್ಕೆ ಕಾರಣವಾದ ಘಟನೆ ಸೆಪ್ಟೆಂಬರ್ 22 ರ ಬೆಳಿಗ್ಗೆ ನಡೆದಿದೆ.
ಏನೀದು ಘಟನೆ? : ನೆಹರು ರಸ್ತೆಯಲ್ಲಿ ತೀರ್ಥಹಳ್ಳಿ ತಹಶೀಲ್ದಾರ್ ಕಚೇರಿ ಕಾರು ಆಗಮಿಸುತ್ತಿದ್ದ ವೇಳೆ, ಐ20 ಕಾರು ಡಿಕ್ಕಿಯಾಗಿದ್ದು, ಚಾಲಕ ಕಾರು ನಿಲ್ಲಿಸದೆ ತೆರಳಿದ್ದ. ತಕ್ಷಣವೇ ತಹಶಿಲ್ದಾರ್ ಕಚೇರಿ ವಾಹನ ಚಾಲಕ ಸದರಿ ಕಾರನ್ನು ಹಿಂಬಾಲಿಸಿಕೊಂಡು ಹೋಗಿದ್ದಾರೆ.
ಡಿಸಿ ಕಚೇರಿ ಮುಂಭಾಗದ ರಸ್ತೆಯಲ್ಲಿ ಕಾರನ್ನು ನಿಲ್ಲಿಸುವಲ್ಲಿ ಸಫಲರಾಗಿದ್ದಾರೆ. ಈ ವೇಳೆ ಇಬ್ಬರು ಚಾಲಕರ ನಡುವೆ ವಾಗ್ವಾದ ಮಾತಿನ ಚಕಮಕಿ ನಡೆದಿದೆ. ಸ್ಥಳದಲ್ಲಿ ಜಮಾಯಿಸಿದ ಸಾರ್ವಜನಿಕರು ಐ20 ಕಾರು ಚಾಲಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಇದರಿಂದ ರಸ್ತೆಯಲ್ಲಿ ಕೆಲ ಸಮಯ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಸದರಿ ಕಾರು ಚಾಲಕನನ್ನು ಜಯನಗರ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಘಟನೆಯ ಕುರಿತಂತೆ ಹೆಚ್ಚಿನ ವಿವರಗಳು ಇನ್ನಷ್ಟೆ ತಿಳಿದುಬರಬೇಕಾಗಿದೆ.
Tirthahalli Tehsildar’s car collided in Shimoga: Hydrama on the road in front of the DC office! | Shimoga, September 21: A car belonging to Tirthahalli Tehsildar collided with another car in Shimoga city and ran away without stopping, which led to a huge hydra, which took place on the morning of September 21.

