ಶಿವಮೊಗ್ಗ (shivamoga), ಅಕ್ಟೋಬರ್ 30: ಶಿವಮೊಗ್ಗ ನಗರದ ಹೊರವಲಯ ಹರಕೆರೆ ಸಮೀಪದ ಹೊರ ವರ್ತುಲ ರಸ್ತೆಗೆ ಹೊಂದಿಕೊಂಡಂತಿರುವ ತೋಟ – ಗದ್ದೆಗಳಲ್ಲಿ ಇತ್ತೀಚೆಗೆ ಕೃಷಿ ಪಂಪ್ ಸೆಟ್ ಕಳ್ಳರ ಹಾವಳಿ ಹೆಚ್ಚಾಗಿದೆ ಎಂದು ರೈತರು ತಿಳಿಸಿದ್ದಾರೆ.
‘ಕಳೆದ ಕೆಲ ದಿನಗಳ ಹಿಂದೆ ಹರಕೆರೆ ಗ್ರಾಮದಲ್ಲಿರುವ ತಮಗೆ ಸೇರಿದ ಭತ್ತದ ಗದ್ದೆಯಲ್ಲಿನ ಶೆಡ್ ನಲ್ಲಿದ್ದ, 10 ಸಾವಿರ ರೂ. ಮೌಲ್ಯದ ಎರಡು ಹೆಚ್.ಪಿ. ಪಂಪ್ ಸೆಟ್ ನ್ನು ಕಳ್ಳರು ಹೊತ್ತೊಯ್ದಿದ್ದರು. ಮತ್ತೆ ಹೊಸದಾಗಿ 25 ಸಾವಿರ ರೂ. ವೆಚ್ಚದಲ್ಲಿ ಐದು ಹೆಚ್.ಪಿ. ಪಂಪ್ ಸೆಟ್ ಖರೀದಿಸಿ ಅಳವಡಿಸಲಾಗಿತ್ತು.
ಇತ್ತೀಚೆಗೆ ಹೊಸ ಪಂಪ್ ಸೆಟ್ ನ್ನು ಕೂಡ ರಾತ್ರೋರಾತ್ರಿ ಕಳ್ಳರು ಹೊತ್ತೊಯ್ದಿದ್ದಾರೆ. ಈ ಕುರಿತಂತೆ ತುಂಗಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೆನೆ’ ಎಂದು ಸಾಗರ್ ಎಂಬುವರು ಮಾಹಿತಿ ನೀಡಿದ್ದಾರೆ.
‘ಇತ್ತೀಚೆಗೆ ಹೊರವರ್ತುಲ ರಸ್ತೆಗೆ ಹೊಂದಿಕೊಂಡಂತಿರುವ ಗದ್ದೆ – ತೋಟಗಳಲ್ಲಿ ನಿರಂತರವಾಗಿ ಪಂಪ್ ಸೆಟ್ ಗಳ ಕಳವು ಮಾಡಲಾಗುತ್ತಿದೆ. ಈ ಕುರಿತಂತೆ ಬಹುತೇಕರು ಪೊಲೀಸರಿಗೆ ದೂರು ನೀಡಲು ಹೋಗುತ್ತಿಲ್ಲ. ಈ ಕಾರಣದಿಂದ ಪ್ರಕರಣಗಳು ಬೆಳಕಿಗೆ ಬರುತ್ತಿಲ್ಲ’ ಎಂದು ಸಾಗರ್ ಅವರು ಮಾಹಿತಿ ನೀಡಿದ್ದಾರೆ.
ಪಂಪ್ ಸೆಟ್ ಕಳ್ಳರ ಹಾವಳಿಯಿಂದ ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ. ಕಳ್ಳರ ಹಾವಳಿ ನಿಯಂತ್ರಣಕ್ಕೆ ಪೊಲೀಸರು ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಸ್ಥಳೀಯ ರೈತರು ಆಗ್ರಹಿಸಿದ್ದಾರೆ.
Shivamogga, October 31: Farmers have reported an increase in the activities of thieves targeting agricultural pump sets in the orchards and fields located along the outer ring road near Harakere, on the outskirts of Shivamogga city.


