sagara accident news | ಸಾಗರದಲ್ಲಿ ಕೆಎಸ್ಆರ್’ಟಿಸಿ ಬಸ್ ಪಲ್ಟಿ!

KSRTC Bus Overturns in Sagara! | Sagara, November 01: A KSRTC bus overturned on the National Highway near Bapat Kalyana Mantapa in Sagara town early on the morning of November 01 after an axle blade snapped.

ಸಾಗರ (sagara), ನವೆಂಬರ್ 01: ಆಕ್ಸೆಲ್ ಬ್ಲೇಡ್ ತುಂಡರಿಸಿದ ಪರಿಣಾಮ ಕೆಎಸ್ಆರ್’ಟಿಸಿ ಬಸ್ ಪಲ್ಟಿಯಾಗಿ ಬಿದ್ದ ಘಟನೆ, ಸಾಗರ ಪಟ್ಟಣದ ಬಾಪಟ್ ಕಲ್ಯಾಣ ಮಂಟಪ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ನವೆಂಬರ್ 01 ರ ಮುಂಜಾನೆ ನಡೆದಿದೆ.

ಬೆಂಗಳೂರಿನಿಂದ ಶಿವಮೊಗ್ಗ ಮಾರ್ಗವಾಗಿ ಸಾಗರಕ್ಕೆ ಬರುತ್ತಿದ್ದ ಬಸ್ ಅಪಘಾತಕ್ಕೀಡಾಗಿದ್ದು ಎಂದು ಗುರುತಿಸಲಾಗಿದೆ. ಬಸ್ ನಲ್ಲಿ ಸುಮಾರು 40 ಪ್ರಯಾಣಿಕರಿದ್ದರು. ಇದರಲ್ಲಿ ಬಸ್ ಚಾಲಕ, ನಿರ್ವಾಹಕ ಹಾಗೂ 11 ಜನ ಪ್ರಯಾಣಿಕರು ಗಾಯಗೊಂಡಿದ್ದಾರೆ. ಅವರನ್ನು ಸಾಗರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಉಳಿದಂತೆ ಬಸ್ ನಲ್ಲಿದ್ದಇತರೆ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯವಾಗಿದೆ. ಎಲ್ಲರು ಅಪಾಯದಿಂದ ಪಾರಾಗಿದ್ದಾರೆ. ಘಟನಾ ಸ್ಥಳಕ್ಕೆ ಕೆಎಸ್ಆರ್’ಟಿಸಿ ಡಿಪೋದ ಮ್ಯಾನೇಜರ್ (ಪ್ರಭಾರ) ಅರುಣ್ ಬೈಲೂರು ಅವರು ಭೇಟಿಯಿತ್ತು ಪರಿಶೀಲಿಸಿದ್ದಾರೆ. ಹಾಗೆಯೇ ಆಸ್ಪತ್ರೆಗೆ ದಾಖಲಾಗಿರುವ ಪ್ರಯಾಣಿಕರಿಗೆ ಅಗತ್ಯ ಚಿಕಿತ್ಸೆಯ ವ್ಯವಸ್ಥೆಯ ಮಾಡಿದ್ದಾರೆ.

KSRTC Bus Overturns in Sagara! | Sagara, November 01: A KSRTC bus overturned on the National Highway near Bapat Kalyana Mantapa in Sagara town early on the morning of November 01 after an axle blade snapped.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *