shimoga news update | ಶಿವಮೊಗ್ಗ ಬಸ್ ನಿಲ್ದಾಣದಿಂದ ಮಹಿಳೆ ಕಣ್ಮರೆ : ಪತ್ತೆಗೆ ಸಹಕರಿಸಲು ಪೊಲೀಸರ ಮನವಿ

Woman Goes Missing from Shivamogga Bus Stand : Police Seek Public Assistance in Locating Her  | Shivamogga, November 20: A 22-year-old woman named Rakshitha went missing on November 12 after arriving at the Shivamogga bus stand while traveling from Shikaripura towards Bhadravathi.

ಶಿವಮೊಗ್ಗ (shivamogga), ನವೆಂಬರ್ 20: ಶಿಕಾರಿಪುರದಿಂದ  ಭದ್ರಾವತಿ ಕಡೆಗೆ ಹೋಗಲು ಶಿವಮೊಗ್ಗ ಬಸ್ ನಿಲ್ದಾಣಕ್ಕೆ ಬಂದಿಳಿದ ರಕ್ಷಿತಾ (22 ವರ್ಷ) ಎಂಬ ಮಹಿಳೆಯು ಕಣ್ಮರೆಯಾಗಿರುವ ಘಟನೆ ನವೆಂಬರ್ 12 ರಂದು ನಡೆದಿದೆ.

ಈ ಕುರಿತಂತೆ ಪೊಲೀಸ್ ಇಲಾಖೆ ನವೆಂಬರ್ 20 ರಂದು ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ. ಸದರಿ ಮಹಿಳೆ ಪತ್ತೆಗೆ ಸಹಕರಿಸಲು ನಾಗರಿಕರಿಗೆ ಮನವಿ ಮಾಡಿದೆ.

ಚಹರೆ : ಕಾಣೆಯಾದ ಮಹಿಳೆ 4.9 ಅಡಿ ಎತ್ತರ, ಎಣ್ಣೆಕಪ್ಪು ಮೈಬಣ್ಣ, ಸಾಧಾರಣ ಮೈಕಟ್ಟು, ಕೋಲುಮುಖ ಹೊಂದಿದ್ದಾರೆ. ಕನ್ನಡ ಮತ್ತು ಹಿಂದಿ ಭಾಷೆ ಮಾತನಾಡುತ್ತಾರೆ. ಕಾಣೆಯಾದ ವೇಳೆ ಹಳದಿ ಬಣ್ಣದ ಚೂಡಿದಾರ ಧರಿಸಿರುತ್ತಾರೆ.

ಸದರಿ ಮಹಿಳೆ ಬಗ್ಗೆ ಸುಳಿವು ಲಭ್ಯವಾದಲ್ಲಿ ದೊಡ್ಡಪೇಟೆ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ : 08182-261414, 9480803345, 8495037735 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.

Woman Goes Missing from Shivamogga Bus Stand : Police Seek Public Assistance in Locating Her  | Shivamogga, November 20: A 22-year-old woman named Rakshitha went missing on November 12 after arriving at the Shivamogga bus stand while traveling from Shikaripura towards Bhadravathi.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *