ಬಿಜೆಪಿ – ಜೆಡಿಎಸ್ ನಡುವೆ ಏರ್ಪಡಲಿದೆಯಾ ಮೈತ್ರಿ..? ವಿಪಕ್ಷ ನಾಯಕರಾಗಿ ಆಯ್ಕೆಯಾಗಲಿದ್ದಾರಾ ಹೆಚ್.ಡಿ.ಕುಮಾರಸ್ವಾಮಿ..?
ಬೆಂಗಳೂರು, ಜು. 14: ಮುಂಬರುವ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ, ಬಿಜೆಪಿ ಹಾಗೂ ಜೆಡಿಎಸ್ ನಡುವೆ ಮೈತ್ರಿ ಮಾತುಕತೆ ನಡೆಯುತ್ತಿವೆ. ಇದು ಫಲಪ್ರದವಾದರೆ, ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರನ್ನೇ ವಿಧಾನಸಭೆ ವಿಪಕ್ಷ ನಾಯಕರನ್ನಾಗಿ ನೇಮಿಸಲು ಬಿಜೆಪಿ ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ. ಇದು ರಾಜ್ಯ ರಾಜಕೀಯ ವಲಯದಲ್ಲಿ ಸಾಕಷ್ಟು ಕುತೂಹಲ ಕೆರಳುವಂತೆ ಮಾಡಿದೆ!
ಜು. 18 ರಂದು ದೆಹಲಿಯಲ್ಲಿ ಬಿಜೆಪಿ ನೇತೃತ್ವದಲ್ಲಿ ಎನ್.ಡಿ.ಎ ಮೈತ್ರಿಕೂಟದ ಸಭೆ ಆಯೋಜಿಸಲಾಗಿದೆ. ಈ ಸಭೆಗೆ ಜೆಡಿಎಸ್ ಪಕ್ಷ ಕೂಡ ಭಾಗವಹಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದ್ದು, ಸದರಿ ಸಭೆಯ ಬಳಿಕ ಬಿಜೆಪಿ ಪಕ್ಷವು ವಿಧಾನಸಭೆ ವಿಪಕ್ಷ ನಾಯಕ ಹಾಗೂ ಪಕ್ಷದ ರಾಜ್ಯಾಧ್ಯಕ್ಷರ ಆಯ್ಕೆ ನಡೆಸಲಿದೆ ಎನ್ನಲಾಗುತ್ತಿದೆ.
ಜು. 18 ರ ಎನ್.ಡಿ.ಎ ಸಭೆಯಲ್ಲಿ ಜೆಡಿಎಸ್ ಭಾಗಿಯಾದರೆ, ಹೆಚ್.ಡಿ.ಕುಮಾರಸ್ವಾಮಿಯವರೇ ಬಿಜೆಪಿ – ಜೆಡಿಎಸ್ ಮೈತ್ರಿಕೂಟದ ವಿಪಕ್ಷ ನಾಯಕರಾಗಿ ಆಯ್ಕೆಯಾಗುವುದು ಬಹುತೇಕ ಖಚಿತ ಎಂದೇ ಹೇಳಲಾಗುತ್ತಿದೆ.
ವಿಧಾನಸಭೆ ಚುನಾವಣೆ ಫಲಿತಾಂಶ ಹೊರಬಂದು 2 ತಿಂಗಳಾಗುತ್ತಿದೆ. ಅಸೆಂಬ್ಲಿಯಲ್ಲಿ 66 ಸದಸ್ಯ ಬಲ ಹೊಂದಿರುವ ಆ ಪಕ್ಷವು, ಇಲ್ಲಿಯವರೆಗೂ ವಿಪಕ್ಷ ನಾಯಕನ ಆಯ್ಕೆ ಮಾಡಿಲ್ಲ. ವಿಳಂಬ ನೀತಿ ಅನುಸರಿಸುತ್ತಿದೆ. ಇದಕ್ಕೆ ಜೆಡಿಎಸ್ ಜೊತೆಗಿನ ಮೈತ್ರಿ ಸಾಧ್ಯತೆ ಕಾರಣವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಪ್ರಸ್ತುತ ನಡೆಯುತ್ತಿರುವ ವಿಧಾನಸಭೆ ಅಧಿವೇಶನದಲ್ಲಿ ಹೆಚ್.ಡಿ.ಕುಮಾರಸ್ವಾಮಿ ಅಬ್ಬರ ಜೋರಾಗಿದೆ. ಸದನದ ಒಳಗೆ ಹಾಗೂ ಹೊರಗೆ ಕಾಂಗ್ರೆಸ್ ವಿರುದ್ದ ಕಿಡಿಕಾರುತ್ತಿದ್ದಾರೆ. ಕೆಲ ಭ್ರಷ್ಟಾಚಾರ ವಿಷಯಗಳನ್ನು ಮುಂದಿಟ್ಟುಕೊಂಡು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಯತ್ನ ನಡೆಸುತ್ತಿದ್ದಾರೆ.
More Stories
Shamanur Shivashankarappa Death : ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ವಿಧಿವಶ
Shamanur Shivashankarappa Death : Senior Congress MLA Shamanur Shivashankarappa passes away
Shamanur Shivashankarappa Death : ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ವಿಧಿವಶ
bengaluru news | ಸೆಪ್ಟೆಂಬರ್ 13 ರಂದು ಮಹಿಳಾ ನೌಕರರ ದಿನಾಚರಣೆ ಘೋಷಣೆ : CM ಸಿದ್ದರಾಮಯ್ಯ ಭರವಸೆ
Women’s Workers’ Day to be declared on September 13: Chief Minister Siddaramaiah promises
ಸೆಪ್ಟೆಂಬರ್ 13 ರಂದು ಮಹಿಳಾ ನೌಕರರ ದಿನಾಚರಣೆ ಘೋಷಣೆ : ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ
bengaluru news | ಹೆಚ್ ವೈ ಮೇಟಿ ನಿಷ್ಠಾವಂತ ರಾಜಕಾರಣಿ – ಸಿಎಂ ಸಿದ್ದರಾಮಯ್ಯ
H Y Mate is a loyal politician – CM Siddaramaiah
ಹೆಚ್ ವೈ ಮೇಟಿ ನಿಷ್ಠಾವಂತ ರಾಜಕಾರಣಿ – ಸಿಎಂ ಸಿದ್ದರಾಮಯ್ಯ
bengaluru news | ಗ್ರೇಟರ್ ಬೆಂಗಳೂರು : 5 ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರೋಬ್ಬರಿ 368 ವಾರ್ಡ್ ರಚನೆ!
Greater Bengaluru: A total of 368 wards have been formed under the jurisdiction of 5 municipal corporations!ಗ್ರೇಟರ್ ಬೆಂಗಳೂರ : 5 ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರೋಬ್ಬರಿ 368 ವಾರ್ಡ್ ರಚನೆ!
bengaluru | ಬೆಂಗಳೂರು | ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ : ಸೌಜನ್ಯ ತಾಯಿ ನಿರ್ಧರಿಸಬೇಕು – ಸಿಎಂ ಹೇಳಿಕೆ
Appeal to Supreme Court: Saujanya’s mother should decide – CM’s statement
ಬೆಂಗಳೂರು | ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ : ಸೌಜನ್ಯ ತಾಯಿ ನಿರ್ಧರಿಸಬೇಕು – ಸಿಎಂ ಹೇಳಿಕೆ
bengaluru news | ಬೆಂಗಳೂರು | ಆಗಸ್ಟ್ 31 ರಿಂದ ನೋಂದಣಿ – ಮುದ್ರಾಂಕ ಶುಲ್ಕ ಏರಿಕೆ : ಆಯುಕ್ತ ಮುಲ್ಲೈ ಮುಗಿಲನ್ ಹೇಳಿದ್ದೇನು?
Registration – Stamp duty hike from August 31st: What did Commissioner Mullai Mugilan say?
ಬೆಂಗಳೂರು | ಆಗಸ್ಟ್ 31 ರಿಂದ ನೋಂದಣಿ – ಮುದ್ರಾಂಕ ಶುಲ್ಕ ಏರಿಕೆ : ಆಯುಕ್ತ ಮುಲ್ಲೈ ಮುಗಿಲನ್ ಹೇಳಿದ್ದೇನು?
