ಬೈಕ್ ವ್ಹೀಲಿಂಗ್ ಪ್ರಕರಣ : ಮೂವರಿಗೆ ದಂಡ ವಿಧಿಸಿ ನ್ಯಾಯಾಲಯ ಆದೇಶ

Bike wheeling case: court order to fine three people ಬೈಕ್ ವ್ಹೀಲಿಂಗ್ ಪ್ರಕರಣ : ಮೂವರಿಗೆ ದಂಡ ವಿಧಿಸಿ ನ್ಯಾಯಾಲಯ ಆದೇಶ

ಶಿವಮೊಗ್ಗ, ಡಿ. 7: ಬೈಕ್ ವ್ಹೀಲಿಂಗ್ ಮಾಡಿದ್ದ ಇಬ್ಬರು ಯುವಕರು ಹಾಗೂ ಬೈಕ್ ಮಾಲೀಕನಿಗೆ ಶಿವಮೊಗ್ಗದ 3 ನೇ ಎಸಿಜೆ ಮತ್ತು ಜೆಎಂಎಫ್’ಸಿ ನ್ಯಾಯಾಲಯವು ದಂಡ ವಿಧಿಸಿ ಆದೇಶ ಹೊರಡಿಸಿದೆ.

ಬೈಕ್ ಚಾಲಕರಾದ ಶಿವಮೊಗ್ಗದ ಇಲಿಯಾಸ್ ನಗರದ ನಿವಾಸಿ ಫೈಸಲ್ ಅಹ್ಮದ್ (20) ಎಂಬಾತನಿಗೆ 11 ಸಾವಿರ ರೂ., ಟ್ಯಾಂಕ್ ಮೊಹಲ್ಲಾದ ಸೂಫಿಯಾನ್ ಖಾನ್ (21) ಎಂಬಾತನಿಗೆ 8 ಸಾವಿರ ರೂ. ಹಾಗೂ ಬೈಕ್ ಆರ್.ಸಿ. ಮಾಲೀಕರಾದ ಇಲಿಯಾಸ್ ನಗರದ ಮೊಹಮ್ಮದ್ ಸೈಫುಲ್ಲಾ (50) ಅವರಿಗೆ 4500 ರೂ. ದಂಡ ವಿಧಿಸಲಾಗಿದೆ.

ನ್ಯಾಯಾಧೀಶರಾದ ಮಾಯಪ್ಪ ಅವರು 6-12-2023 ರಂದು ಈ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕರಾದ ಕಿರಣ್ ಕುಮಾರ್ ಅವರು ವಾದ ಮಂಡಿಸಿದ್ದರು.

ಪ್ರಕರಣದ ಹಿನ್ನೆಲೆ: 15-8-2023 ರಂದು ಬೆಳಿಗ್ಗೆ ಶಿವಮೊಗ್ಗದ ಪಶ್ಚಿಮ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯ ವಿನೋಬನಗರ ಡಿವಿಎಸ್ ಶಾಲೆ ಮುಂಭಾಗದ 100 ಅಡಿ ರಸ್ತೆಯಲ್ಲಿ, ಫೈಸಲ್ ಅಹ್ಮದ್ ಮತ್ತು ಸೂಫಿಯಾನ್ ಖಾನ್, ಎರಡು ಬೈಕ್ ಗಳಲ್ಲಿ ಅತೀ ವೇಗ ಹಾಗೂ ಅಜಾಗರೂಕವಾಗಿ ವ್ಹೀಲಿಂಗ್ ಮಾಡುತ್ತ ಬೈಕ್ ಚಲಾಯಿಸಿದ್ದರು.

ಸಬ್ ಇನ್ಸ್’ಪೆಕ್ಟರ್ ತಿರುಮಲೇಶ‍್ ಅವರು ಬೈಕ್ ಚಾಲರು ಹಾಗೂ ವಾಹನ ಮಾಲೀಕರ ವಿರುದ್ದ ಐಪಿಸಿ ಹಾಗೂ ಐಎಂವಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ಆರೋಪಪಟ್ಟಿ ದಾಖಲಿಸಿದ್ದರು.

Follow us on social media

About B.Renukesha

1997-98 ನೇ ಸಾಲಿನಿಂದ, ಸರಿಸುಮಾರು 26-27 ವರ್ಷಗಳಿಂದ ಪತ್ರಿಕಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿಕೊಂಡು ಬರುತ್ತಿದ್ದೆನೆ. ಬದಲಾದ ಕಾಲಘಟ್ಟಕ್ಕೆ ಅನುಗುಣವಾಗಿ ಮುದ್ರಣ ಮಾಧ್ಯಮದ ಜೊತೆಜೊತೆಗೆ, ಡಿಜಿಟಲ್ ಮಾಧ್ಯಮದಲ್ಲಿಯೂ ಕಾರ್ಯನಿರ್ವಹಿಸುವ ಅನಿವಾರ್ಯತೆ ಎದುರಾಗಿದೆ. ಆದರೆ ಡಿಜಿಟಲ್ ಮಾಧ್ಯಮ ನನಗೆ ಹೊಸದಲ್ಲ. 2013-14 ರ ಸಾಲಿನಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿಯೇ ಮೊಟ್ಟಮೊದಲ ಬಾರಿಗೆ www.u2rnews.com ಎಂಬ ನ್ಯೂಸ್ ವೆಬ್ ಸೈಟ್ ಆರಂಭಿಸಿದ್ದೆ. ಆದರೆ ಕಾರಣಾಂತರಗಳಿಂದ ಮುನ್ನಡೆಸಿಕೊಂಡು ಹೋಗಲು ಸಾಧ್ಯವಾಗಲಿಲ್ಲ. ಇದೀಗ www.udayasaakshi.com (ಉದಯ ಸಾಕ್ಷಿ) ನ್ಯೂಸ್ ವೆಬ್ ಸೈಟ್ ಹಾಗೂ @UdayaSaakshi ಯೂಟ್ಯೂಬ್ ನ್ಯೂಸ್ ಚಾನಲ್ ಆರಂಭಿಸಿದ್ದೆನೆ. ಈ ಡಿಜಿಟಲ್ ಮಾಧ್ಯಮಗಳ ಮೂಲಕ ಪ್ರಚಲಿತ ವಿದ್ಯಮಾನ, ಮಾಹಿತಿಗಳನ್ನು ಯಥಾರೂಪದಲ್ಲಿ ನಾಗರೀಕರಿಗೆ ತಲುಪಿಸುವ ಪ್ರಾಮಾಣಿಕ ಕಾರ್ಯ ಮಾಡಲಾಗುವುದು. ಮುಖ್ಯವಾಗಿ ಸಾಮಾಜಿಕ ಸಮಸ್ಯೆ, ನಾಗರೀಕರ ದೂರು-ದುಮ್ಮಾನಗಳಿಗೆ ನ್ಯೂಸ್ ವೆಬ್ ಸೈಟ್ ಹಾಗೂ ಚಾನಲ್ ವೇದಿಕೆಯಾಗಲಿದೆ. ಧನ್ಯವಾದಗಳು, ಬಿ.ರೇಣುಕೇಶ್, ಪತ್ರಕರ್ತರು.

View all posts by B.Renukesha →

Leave a Reply

Your email address will not be published. Required fields are marked *