ಕ್ರಿಕೆಟ್ ಪಿಚ್ ಮೇಲೆಯೇ ಮೂತ್ರ ವಿಸರ್ಜನೆ, ಮದ್ಯ – ಮಾಂಸ ಸೇವನೆ : ಕ್ರೀಡಾಪಟುಗಳ ಆಕ್ರೋಶ!

Urination on the cricket pitch consumption of alcohol: anger of the athletes! ಕ್ರಿಕೆಟ್ ಪಿಚ್ ಮೇಲೆಯೇ ಮೂತ್ರ ವಿಸರ್ಜನೆ ಮದ್ಯ - ಮಾಂಸ ಸೇವನೆ : ಕ್ರೀಡಾಪಟುಗಳ ಆಕ್ರೋಶ!

ಶಿವಮೊಗ್ಗ, ಮಾ. 11: ಶಿವಮೊಗ್ಗ ನಗರದ ಎನ್ಇಎಸ್ ಮೈದಾನ (shimoga nes ground) ದಲ್ಲಿ ಭಾನುವಾರ ನಡೆದ ಕುರಿ ಕಾಳಗ ಸ್ಪರ್ಧೆ ವೇಳೆ, ಕೆಲವರು ಮೈದಾನದಲ್ಲಿರುವ ಕ್ರಿಕೆಟ್ ತರಬೇತಿ (cricket training) ಸಂಸ್ಥೆಗಳ ಪಿಚ್ ಹಾಗೂ ನೆಟ್ ಗಳನ್ನು ಕಲುಷಿತಗೊಳಿಸಿರುವ ಘಟನೆ ನಡೆದಿದೆ.

ಪಿಚ್ (pitch) ಗಳ ಮೇಲೆಯೇ ಮದ್ಯದ ಬಾಟಲಿಗಳು (alcohol bottles), ಮಾಂಸದ ತುಂಡು, ಪ್ಲಾಸ್ಟಿಕ್, ಬಾಟಲಿ ಸೇರಿದಂತೆ ತ್ಯಾಜ್ಯ ವಸ್ತುಗಳನ್ನು ಎಲ್ಲೆಂದರಲ್ಲಿ ಎಸೆಯಲಾಗಿದೆ. ಹಾಗೆಯೇ ಪಿಚ್ ಮೇಲೆಯೇ ಮೂತ್ರ ವಿಸರ್ಜನೆ ಮಾಡಿದ್ದಾರೆ. ಇದರಿಂದ ಕ್ರಿಕೆಟ್ ತರಬೇತಿ ಸ್ಥಳದಲ್ಲಿ ದುರ್ನಾತ ಬೀರುತ್ತಿದೆ. ಪಿಚ್ ಸುತ್ತಲೂ ಹಾಕಿದ್ದ ನೆಟ್ ಗಳನ್ನು ಕಿತ್ತು ಹಾಕಲಾಗಿದೆ  ಎಂದು ಕ್ರಿಕೆಟ್ ಪಟುಗಳು ದೂರಿದ್ದಾರೆ.

ಸೋಮವಾರ ಬೆಳಿಗ್ಗೆಎಂದಿನಂತೆ ಕ್ರಿಕೆಟ್ ಪಟುಗಳು (cricketers) ಮೈದಾನಕ್ಕೆ ಆಗಮಿಸಿದ ವೇಳೆ, ಪಿಚ್ ಗಳು ಅಕ್ಷರಶಃ ಕಸದ ತೊಟ್ಟಿಯಂತಾಗಿ ಪರಿವರ್ತಿತವಾಗಿರುವುದು ಬೆಳಕಿಗೆ ಬಂದಿದೆ. ಕ್ರಿಕೆಟ್ ಪಟುಗಳೇ ಪಿಚ್ ಮೇಲೆ ಬಿದ್ದಿದ್ದ ಮದ್ಯದ ಬಾಟಲಿ ಸೇರಿದಂತೆ ತ್ಯಾಜ್ಯ ವಸ್ತುಗಳನ್ನು (Waste material) ತೆರವುಗೊಳಿಸಿ ಸ್ವಚ್ಛತಾ ಕಾರ್ಯ ನಡೆಸಿದ್ದಾರೆ.

‘ಚಿಕ್ಕ ಮಕ್ಕಳು ಕ್ರಿಕೆಟ್ ಕಲಿಯುವ ಸ್ಥಳವನ್ನು ಬೇಕಾಬಿಟ್ಟಿಯಾಗಿ ಕಲುಷಿತಗೊಳಿಸಿ ಹಾಳು ಮಾಡಿರುವುದು ಖಂಡನಾರ್ಹವಾದುದಾಗಿದೆ. ಮುಂದಿನ ದಿನಗಳಲ್ಲಿ ಈ ರೀತಿಯ ಘಟನೆಗಳಿಗೆ ಆಸ್ಪದವಾಗದಂತೆ ಎನ್ಇಎಸ್ ಸಂಸ್ಥೆಯವರು ಅಗತ್ಯ ಕ್ರಮಕೈಗೊಳ್ಳಬೇಕು’ ಎಂದು ಕೆಲ ಕ್ರಿಕೆಟ್ ಪಟುಗಳು ಆಗ್ರಹಿಸಿದ್ದಾರೆ.

Follow us on social media

About B.Renukesha

1997-98 ನೇ ಸಾಲಿನಿಂದ, ಸರಿಸುಮಾರು 26-27 ವರ್ಷಗಳಿಂದ ಪತ್ರಿಕಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿಕೊಂಡು ಬರುತ್ತಿದ್ದೆನೆ. ಬದಲಾದ ಕಾಲಘಟ್ಟಕ್ಕೆ ಅನುಗುಣವಾಗಿ ಮುದ್ರಣ ಮಾಧ್ಯಮದ ಜೊತೆಜೊತೆಗೆ, ಡಿಜಿಟಲ್ ಮಾಧ್ಯಮದಲ್ಲಿಯೂ ಕಾರ್ಯನಿರ್ವಹಿಸುವ ಅನಿವಾರ್ಯತೆ ಎದುರಾಗಿದೆ. ಆದರೆ ಡಿಜಿಟಲ್ ಮಾಧ್ಯಮ ನನಗೆ ಹೊಸದಲ್ಲ. 2013-14 ರ ಸಾಲಿನಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿಯೇ ಮೊಟ್ಟಮೊದಲ ಬಾರಿಗೆ www.u2rnews.com ಎಂಬ ನ್ಯೂಸ್ ವೆಬ್ ಸೈಟ್ ಆರಂಭಿಸಿದ್ದೆ. ಆದರೆ ಕಾರಣಾಂತರಗಳಿಂದ ಮುನ್ನಡೆಸಿಕೊಂಡು ಹೋಗಲು ಸಾಧ್ಯವಾಗಲಿಲ್ಲ. ಇದೀಗ www.udayasaakshi.com (ಉದಯ ಸಾಕ್ಷಿ) ನ್ಯೂಸ್ ವೆಬ್ ಸೈಟ್ ಹಾಗೂ @UdayaSaakshi ಯೂಟ್ಯೂಬ್ ನ್ಯೂಸ್ ಚಾನಲ್ ಆರಂಭಿಸಿದ್ದೆನೆ. ಈ ಡಿಜಿಟಲ್ ಮಾಧ್ಯಮಗಳ ಮೂಲಕ ಪ್ರಚಲಿತ ವಿದ್ಯಮಾನ, ಮಾಹಿತಿಗಳನ್ನು ಯಥಾರೂಪದಲ್ಲಿ ನಾಗರೀಕರಿಗೆ ತಲುಪಿಸುವ ಪ್ರಾಮಾಣಿಕ ಕಾರ್ಯ ಮಾಡಲಾಗುವುದು. ಮುಖ್ಯವಾಗಿ ಸಾಮಾಜಿಕ ಸಮಸ್ಯೆ, ನಾಗರೀಕರ ದೂರು-ದುಮ್ಮಾನಗಳಿಗೆ ನ್ಯೂಸ್ ವೆಬ್ ಸೈಟ್ ಹಾಗೂ ಚಾನಲ್ ವೇದಿಕೆಯಾಗಲಿದೆ. ಧನ್ಯವಾದಗಳು, ಬಿ.ರೇಣುಕೇಶ್, ಪತ್ರಕರ್ತರು.

View all posts by B.Renukesha →

Leave a Reply

Your email address will not be published. Required fields are marked *