
ಶಿವಮೊಗ್ಗದಲ್ಲಿ ಲ್ಯಾಂಡ್ ಆಗದ ವಿಮಾನ : ಬೆಂಗಳೂರಿಗೆ ವಾಪಾಸ್ ಆದ ಗೃಹ ಸಚಿವರು!
ಶಿವಮೊಗ್ಗ (shivamogga), ಜು. 13: ಮಳೆ – ಮೋಡ ಕವಿದ ವಾತಾವರಣದ ಕಾರಣದಿಂದ ಬೆಂಗಳೂರಿನಿಂದ (bengaluru) ಆಗಮಿಸಿದ ಇಂಡಿಗೋ ವಿಮಾನ (indigo plane), ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಸಾಧ್ಯವಾಗದೆ ಬೆಂಗಳೂರಿಗೆ ವಾಪಾಸ್ ಹಿಂದಿರುಗಿದ ಘಟನೆ ಶನಿವಾರ ನಡೆದಿದೆ.
ಸದರಿ ವಿಮಾನದಲ್ಲಿಯೇ (aeroplane) ಗೃಹ ಸಚಿವ ಪರಮೇಶ್ವರ್ (home minister Parameshwar) ಅವರು ಜಿಲ್ಲೆಯ ತೀರ್ಥಹಳ್ಳಿ (thirthalli) ಹಾಗೂ ಸೊರಬದಲ್ಲಿ (soraba) ಆಯೋಜಿತವಾಗಿದ್ದ ವಿವಿಧ ಪೂರ್ವ ನಿರ್ಧರಿತ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಶಿವಮೊಗ್ಗಕ್ಕೆ (shimoga) ಆಗಮಿಸುತ್ತಿದ್ದರು. ವಿಮಾನ ಲ್ಯಾಂಡಿಂಗ್ ಆಗದೆ ಬೆಂಗಳೂರಿಗೆ ವಾಪಾಸ್ ಆಗಿದ್ದರಿಂದ, ಗೃಹ ಸಚಿವರ ಜಿಲ್ಲಾ ಪ್ರವಾಸ ರದ್ದಾಗುವಂತಾಯಿತು.
ಸಮಸ್ಯೆ : ಮಳೆ – ಮೋಡ ಕವಿದ ವಾತಾವರಣದ (rain – cloudy weather) ಕಾರಣದಿಂದ ಶಿವಮೊಗ್ಗ ವಿಮಾನ ನಿಲ್ದಾಣದ ರನ್ ವೇಯು (runway) ಸ್ಪಷ್ಟವಾಗಿ ವಿಮಾನದ ಪೈಲಟ್ ಗೆ (pilot) ಗೋಚರವಾಗುತ್ತಿರಲಿಲ್ಲ. ಆಕಾಶದಲ್ಲಿ ಹಲವು ಬಾರಿ ವಿಮಾನ ಸುತ್ತಾಟ ನಡೆಸಿ, ಲ್ಯಾಂಡಿಂಗ್ ಗೆ ಯತ್ನಿಸಿದರೂ ಲ್ಯಾಂಡಿಂಗ್ ಸಾಧ್ಯವಾಗಿಲ್ಲ ಎನ್ನಲಾಗಿದೆ.
ಮತ್ತೊಂದೆಡೆ, ಮಧ್ಯಾಹ್ನ ತಿರುಪತಿಯಿಂದ (tirupati) ಶಿವಮೊಗ್ಗಕ್ಕೆ ಆಗಮಿಸಿದ್ದ ಸ್ಟಾರ್ ಏರ್ ಲೈನ್ಸ್ ವಿಮಾನ (star airlines plane) ಲ್ಯಾಂಡ್ ಆಗಿದೆ ಎಂದು ತಿಳಿದುಬಂದಿದೆ. ಮಳೆ, ಮೋಡ ಕವಿದ ಸಂದರ್ಭದಲ್ಲಿ ಹಾಗೂ ರಾತ್ರಿ ವೇಳೆ ವಿಮಾನಗಳ ಲ್ಯಾಂಡಿಂಗ್ (night landing) ಮಾಡಲು ಅಗತ್ಯವಾದ ಸೌಲಭ್ಯಗಳು ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ (shimoga airport) ಇಲ್ಲವಾಗಿದೆ. ಇದರಿಂದ ಕೆಲ ವೇಳೆ ವಿಮಾನಗಳ ಲ್ಯಾಂಡಿಂಗ್ ಸಮಸ್ಯೆಯಾಗುತ್ತಿದೆ.