
🚆ಚೆನ್ನೈ – ಶಿವಮೊಗ್ಗ ರೈಲಿನ ವೇಳಾಪಟ್ಟಿಯ ಕಂಪ್ಲೀಟ್ ವಿವರ…
ಶಿವಮೊಗ್ಗ (shivamogga), ಜು. 13: ಬಹು ನಿರೀಕ್ಷಿತ ಚೆನ್ನೈ – ಶಿವಮೊಗ್ಗ ನಡುವೆ ಸಾಪ್ತಾಹಿಕ ರೈಲು (chennai shimoga weekly train) ಸಂಚಾರಕ್ಕೆ, ಶನಿವಾರ ಸಂಜೆ 5. 15 ಕ್ಕೆ ಶಿವಮೊಗ್ಗ ನಗರದ ಮುಖ್ಯ ರೈಲ್ವೆ ನಿಲ್ದಾಣದಲ್ಲಿ (shimoga railway station) ಅಧಿಕೃತವಾಗಿ ಚಾಲನೆ ದೊರಕಲಿದೆ. ಈ ನಡುವೆ ಶನಿವಾರ ಮಧ್ಯಾಹ್ನ 12. 22 ರ ಸುಮಾರಿಗೆ ಶಿವಮೊಗ್ಗಕ್ಕೆ ರೈಲು ಆಗಮಿಸಿತು.
ವೇಳಾಪಟ್ಟಿ (time table) : ಚೆನ್ನೈ ಮತ್ತು ಸತ್ಯಸಾಯಿ ಪ್ರಶಾಂತಿ ನಿಲಯಂ ನಡುವೆ ಸಂಚರಿಸುತ್ತಿದ್ದ ರೈಲು ಸಂಖ್ಯೆ 12691/2 ಅನ್ನು ಸಾರ್ವಜನಿಕರ ಅನುಕೂಲಕ್ಕಾಗಿ ಚೆನ್ನೈ- ಶಿವಮೊಗ್ಗ (chennai – shimoga) ನಡುವೆ ಸಂಚರಿಸುವಂತೆ ಮಾರ್ಗ ಬದಲಾವಣೆ ಮಾಡಲಾಗಿದೆ.
ಸದರಿ ರೈಲು ಶುಕ್ರವಾರ ರಾತ್ರಿ 11 ಗಂಟೆ 30 ನಿಮಿಷಕ್ಕೆ ಚೆನ್ನೈನ ಎಂಜಿಆರ್ ಸೆಂಟ್ರಲ್ ರೈಲ್ವೆ ನಿಲ್ದಾಣದಿಂದ (mgr central railway station) ಹೊರಡಲಿದೆ. 12. 23 ಕ್ಕೆ ಅರಕೋಣಂ (arakkonam), 12. 43 ಕ್ಕೆ ಶೋಲಿಂಘುರ್ (sholinghur), 1. 23 ಕ್ಕೆ ಕಾಟ್ಟಾಡಿ (katpadi), 2. 54 ಕ್ಕೆ ಜೋಲರ್ ಪೆಟ್ಟೈ ಜಂಕ್ಷನ್ (jolarpettai railway junction), 3. 45 ಕ್ಕೆ ಬಂಗಾರಪೇಟೆ (bangarapete), 4. 39 ಕ್ಕೆ ಕೃಷ್ಣರಾಜಪುರಂ (krishnarajapuram), 5. 20 ಕ್ಕೆ ಬೆಂಗಳೂರಿನ ಬೈಯಪ್ಪನಹಳ್ಳಿ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್, 7. 38 ಕ್ಕೆ ತುಮಕೂರು, 9. 4 ತಿಪಟೂರು, 9. 30 ಕ್ಕೆ ಅರಸೀಕೆರೆ, 10. 5 ಬೀರೂರು, 10. 20 ಕಡೂರು, 10. 47 ಕ್ಕೆ ತರೀಕೆರೆ, 11. 33 ಕ್ಕೆ ಭದ್ರಾವತಿ, 12. 20 ಕ್ಕೆ ಶಿವಮೊಗ್ಗಕ್ಕೆ ಆಗಮಿಸಲಿದೆ.
ಶಿವಮೊಗ್ಗದ (shimoga) ಮುಖ್ಯ ರೈಲ್ವೆ ನಿಲ್ದಾಣದಿಂದ ಶನಿವಾರ ಸಂಜೆ 5. 15 ಕ್ಕೆ ಹೊರಡಲಿರುವ ರೈಲು 5. 33 ಕ್ಕೆ ಭದ್ರಾವತಿ (bhadravathi), 5. 53 ಕ್ಕೆ ತರೀಕೆರೆ (tarikere), 6. 23 ಕ್ಕೆ ಕಡೂರು (kadur), 6. 34 ಕ್ಕೆ ಬೀರೂರು (birur), 7. 10 ಕ್ಕೆ ಅರಸೀಕೆರೆ (arsikere), 7. 36 ಕ್ಕೆ ತಿಪಟೂರು (tiptur), 8. 28 ಕ್ಕೆ ತುಮಕೂರು (tumkur), 10. 20 ಕ್ಕೆ ಬೆಂಗಳೂರಿನ ಬೈಯಪ್ಪನಹಳ್ಳಿಯ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ (Sir M Visvesvaraya Terminal at Baiyappanahalli), 11. 10 ಕ್ಕೆ ಕೃಷ್ಣರಾಜಪುರಂ (krishnarajapuram), 11. 22 ಕ್ಕೆ ಬಂಗಾರಪೇಟೆ, 12. 27 ಕ್ಕೆ ಜೋಲಾರ್ ಪೆಟ್ಟೈ ಜಂಕ್ಷನ್, 1. 23 ಕ್ಕೆ ಕಾಟ್ಪಾಡಿ, 2. 33 ಕ್ಕೆ ಶೋಲಿಂಘುರ್, 3. 3 ಕ್ಕೆ ಅರಕೋಣಂ, 4. 13 ಕ್ಕೆ ಪೆರಂಬೂರು (perambur), 4. 55 ಕ್ಕೆ ಚೆನ್ನೈನ ಎಂಜಿಆರ್ ಸೆಂಟ್ರಲ್ ರೈಲ್ವೆ ನಿಲ್ದಾಣ ತಲುಪಲಿದೆ.
ವಿವರ : ಚೆನ್ನೈ – ಶಿವಮೊಗ್ಗ ನಡುವಿನ ಅಂತರ 631 ಕಿ.ಮೀ. ಇದೆ. ಸುಮಾರು 12 ಗಂಟೆ 50 ನಿಮಿಷ ಪ್ರಯಾಣದ ಅವಧಿಯಾಗಿರಲಿದೆ. ಚೆನ್ನೈ – ಶಿವಮೊಗ್ಗ ನಡುವೆ ಸಂಚರಿಸುತ್ತಿರುವ ರೈಲಿನಲ್ಲಿ 22 ಬೋಗಿಗಳು ಇರಲಿವೆ. ಈ ಪೈಕಿ 1 ಎಸಿ ಬೋಗಿ, 2 ಟೈರ ಎಸಿ ಬೋಗಿ, 6 ಮೂರು ಟೈರ್ ಎಸಿ ಬೋಗಿ, 6 ಸ್ಲೀಪರ್ ಬೋಗಿ, 2 ಸೆಕೆಂಡ್ ಸಿಟ್ಟಿಂಗ್ ಬೋಗಿ, 1 ಎಸ್.ಎಲ್.ಆರ್ ಹಾಗೂ 1 ಪವರ್ ಕಾರ್ ಬೋಗಿ ಇರಲಿದೆ.