ಶಿವಮೊಗ್ಗ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಕಳವು ಮಾಡುತ್ತಿದ್ದ ಭದ್ರಾವತಿಯ ಐವರು ಮಹಿಳೆಯರು ಅರೆಸ್ಟ್!

ಶಿವಮೊಗ್ಗ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಕಳವು ಮಾಡುತ್ತಿದ್ದ ಭದ್ರಾವತಿಯ ಐವರು ಅರೆಸ್ಟ್! Bhadravati, who was stealing at Shimoga KSRTC bus station, arrested five

ಶಿವಮೊಗ್ಗ (shivamogga), ಜು. 14: ಶಿವಮೊಗ್ಗ ನಗರದ ಕೆ ಎಸ್ ಆರ್ ಟಿ ಸಿ (Ksrtc) ಬಸ್ ನಿಲ್ದಾಣದಲ್ಲಿ (bus stand) ಮಹಿಳಾ ಪ್ರಯಾಣಿಕರಿಂದ ಚಿನ್ನಾಭರಣ ಅಪಹರಿಸುತ್ತಿದ್ದ ಆರೋಪದ ಮೇರೆಗೆ, ಭದ್ರಾವತಿ (bhadravathi) ನಗರದ ಐವರು ಮಹಿಳೆಯರನ್ನು ದೊಡ್ಡಪೇಟೆ ಠಾಣೆ ಪೊಲೀಸರು (doddapete police station) ಬಂಧಿಸುವಲ್ಲಿ ಸಫಲರಾಗಿದ್ದಾರೆ.

ಭದ್ರಾವತಿ ಹೊಸಮನೆಯ (Hosamane) ಹನುಮಂತನಗರ ಬಡಾವಣೆ ನಿವಾಸಿಗಳಾದ ಶಾಂತಿ ಯಾನೆ ಕರ್ಕಿ (31), ಮೀನಾಕ್ಷಿ (38), ಸಾವಿತ್ರಿ ಯಾನೆ ಬಾಬಾ (29), ಸುಶೀಲಮ್ಮ (66) ಹಾಗೂ ಭೋವಿ ಕಾಲೋನಿಯ ನಿವಾಸಿ ದುರ್ಗಾ ಯಾನೆ ಸಣ್ಣ ದುರ್ಗ (29) ಬಂಧಿತ ಆರೋಪಿಗಳೆಂದು (accused) ಗುರುತಿಸಲಾಗಿದೆ.

ಆರೋಪಿಗಳಿಂದ ಒಟ್ಟಾರೆ 7 ಪ್ರಕರಣಕ್ಕೆ ಸಂಬಂಧಿಸಿದಂತೆ 8,13,000 ರೂ. ಮೌಲ್ಯದ 122 ಗ್ರಾಂ ತೂಕದ ಬಂಗಾರದ ಆಭರಣಗಳನ್ನು (Gold jewelry) ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಕಳೆದ 29-6-2024 ರಂದು ಶಿವಮೊಗ್ಗದ ಜೆಸಿ ನಗರದ ಮಹಿಳೆಯೋರ್ವರು ದಾವಣಗೆರೆಗೆ (davangere) ತೆರಳಲು ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣಕ್ಕೆ (ksrtc bus stand) ಆಗಮಿಸಿದ್ದರು. ಈ ವೇಳೆ ಅವರ ವ್ಯಾನಿಟಿ ಬ್ಯಾಗ್ (vanity bag) ನಲ್ಲಿದ್ದ ಚಿನ್ನಾಭರಣಗಳನ್ನು ಅಪಹರಿಸಲಾಗಿತ್ತು.

ಸದರಿ ಪ್ರಕರಣದ ತನಿಖೆ ಕೈಗೆತ್ತಿಕೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು. ವಿಚಾರಣೆ ವೇಳೆ ಸದರಿ ಬಸ್ ನಿಲ್ದಾಣದಲ್ಲಿ ನಡೆದಿದ್ದ ಇತರೆ ಕಳವು (theft) ಕೃತ್ಯಗಳಲ್ಲಿ ಭಾಗಿಯಾಗಿದ್ದು ಬೆಳಕಿಗೆ ಬಂದಿದೆ.

ದೊಡ್ಡಪೇಟೆ ಠಾಣೆ ಇನ್ಸ್‌ಪೆಕ್ಟರ್ (inspector) ರವಿ ಪಾಟೀಲ್ ನೇತೃತ್ವದಲ್ಲಿ ಎ ಎಸ್ ಐ ನಾಗರಾಜ್, ಫಾಲಾಕ್ಷ ನಾಯ್ಕ್, ಲಚ್ಚನಾಯ್ಕ್, ಸಿಪಿಸಿಗಳಾದ ಚಂದ್ರ ನಾಯ್ಕ್, ಗುರುನಾಯ್ಕ್, ನಿತಿನ್, ಪುನೀತ್ ರಾವ್, ಸಿಬ್ಬಂದಿಗಳಾದ ದೀಪಾ ಎಸ್ ಹುಬ್ಬಳ್ಳಿ, ಪೂಜಾ, ಸುಮಿತ್ರಬಾಯಿ, ಲಕ್ಷ್ಮೀರವರು ಆರೋಪಿಗಳನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.

About B.Renukesha

1997-98 ನೇ ಸಾಲಿನಿಂದ, ಸರಿಸುಮಾರು 26-27 ವರ್ಷಗಳಿಂದ ಪತ್ರಿಕಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿಕೊಂಡು ಬರುತ್ತಿದ್ದೆನೆ. ಬದಲಾದ ಕಾಲಘಟ್ಟಕ್ಕೆ ಅನುಗುಣವಾಗಿ ಮುದ್ರಣ ಮಾಧ್ಯಮದ ಜೊತೆಜೊತೆಗೆ, ಡಿಜಿಟಲ್ ಮಾಧ್ಯಮದಲ್ಲಿಯೂ ಕಾರ್ಯನಿರ್ವಹಿಸುವ ಅನಿವಾರ್ಯತೆ ಎದುರಾಗಿದೆ. ಆದರೆ ಡಿಜಿಟಲ್ ಮಾಧ್ಯಮ ನನಗೆ ಹೊಸದಲ್ಲ. 2013-14 ರ ಸಾಲಿನಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿಯೇ ಮೊಟ್ಟಮೊದಲ ಬಾರಿಗೆ www.u2rnews.com ಎಂಬ ನ್ಯೂಸ್ ವೆಬ್ ಸೈಟ್ ಆರಂಭಿಸಿದ್ದೆ. ಆದರೆ ಕಾರಣಾಂತರಗಳಿಂದ ಮುನ್ನಡೆಸಿಕೊಂಡು ಹೋಗಲು ಸಾಧ್ಯವಾಗಲಿಲ್ಲ. ಇದೀಗ www.udayasaakshi.com (ಉದಯ ಸಾಕ್ಷಿ) ನ್ಯೂಸ್ ವೆಬ್ ಸೈಟ್ ಹಾಗೂ @UdayaSaakshi ಯೂಟ್ಯೂಬ್ ನ್ಯೂಸ್ ಚಾನಲ್ ಆರಂಭಿಸಿದ್ದೆನೆ. ಈ ಡಿಜಿಟಲ್ ಮಾಧ್ಯಮಗಳ ಮೂಲಕ ಪ್ರಚಲಿತ ವಿದ್ಯಮಾನ, ಮಾಹಿತಿಗಳನ್ನು ಯಥಾರೂಪದಲ್ಲಿ ನಾಗರೀಕರಿಗೆ ತಲುಪಿಸುವ ಪ್ರಾಮಾಣಿಕ ಕಾರ್ಯ ಮಾಡಲಾಗುವುದು. ಮುಖ್ಯವಾಗಿ ಸಾಮಾಜಿಕ ಸಮಸ್ಯೆ, ನಾಗರೀಕರ ದೂರು-ದುಮ್ಮಾನಗಳಿಗೆ ನ್ಯೂಸ್ ವೆಬ್ ಸೈಟ್ ಹಾಗೂ ಚಾನಲ್ ವೇದಿಕೆಯಾಗಲಿದೆ. ಧನ್ಯವಾದಗಳು, ಬಿ.ರೇಣುಕೇಶ್, ಪತ್ರಕರ್ತರು.

View all posts by B.Renukesha →