
ಲಿಂಗನಮಕ್ಕಿ, ತುಂಗಾ, ಭದ್ರಾ ಜಲಾಶಯಗಳಿಗೆ ಭಾರೀ ಪ್ರಮಾಣದ ಒಳಹರಿವು!
ಶಿವಮೊಗ್ಗ (shivamogga), ಜು. 31: ಜಲಾನಯನ ಪ್ರದೇಶ ವ್ಯಾಪ್ತಿಯಲ್ಲಿ ಬೀಳುತ್ತಿರುವ ಧಾರಾಕಾರ ಮಳೆಯಿಂದ ಪ್ರಮುಖ ಜಲಾಶಯಗಳಾದ ಲಿಂಗನಮಕ್ಕಿ, ತುಂಗ, ಭದ್ರಾ ಜಲಾಶಯಗಳ ಒಳಹರಿವಿನಲ್ಲಿ ಭಾರೀ ಪ್ರಮಾಣದ ಏರಿಕೆ ಕಂಡುಬಂದಿದೆ!
ಬುಧವಾರ ಬೆಳಿಗ್ಗೆಯ ಮಾಹಿತಿಯಂತೆ ಲಿಂಗನಮಕ್ಕಿ ಜಲಾಶಯದ (linganamakki dam) ಒಳಹರಿವು 82,587 ಕ್ಯೂಸೆಕ್ ಇದೆ. 5636 ಕ್ಯೂಸೆಕ್ ನೀರನ್ನು ಹೊರ ಹರಿಸಲಾಗುತ್ತಿದೆ (out flow). ಡ್ಯಾಂ ನೀರಿನ ಮಟ್ಟ 1812. 7 (ಗರಿಷ್ಠ ಮಟ್ಟ : 1819) ಅಡಿಯಿದೆ. ಕಳೆದ ವರ್ಷ ಇದೇ ದಿನದಂದು ಡ್ಯಾಂ ನೀರಿನ ಮಟ್ಟ 1787. 5 ಅಡಿಯಿತ್ತು.
ಭದ್ರಾ ಜಲಾಶಯದ (bhadra dam) ಒಳಹರಿವು 61,042 ಕ್ಯೂಸೆಕ್ ಗೆ ಹೆಚ್ಚಳವಾಗಿದೆ. 41,957 ಕ್ಯೂಸೆಕ್ ನೀರನ್ನು ಹೊರ ಹರಿಸಲಾಗುತ್ತಿದೆ. ಡ್ಯಾಂ ನೀರಿನ ಮಟ್ಟ (bhadra dam water level) 184. 6 (ಗರಿಷ್ಠ ಮಟ್ಟ : 186) ಅಡಿಯಿದೆ. ಕಳೆದ ವರ್ಷ ಇದೇ ದಿನದಂದು ಡ್ಯಾಂ ನೀರಿನ ಮಟ್ಟ 162. 2 ಅಡಿಯಿತ್ತು.
ತುಂಗಾ ಜಲಾಶಯದ ಒಳಹರಿವು (tunga dam inflow) 72,250 ಕ್ಯೂಸೆಕ್ ಇದೆ. ಈಗಾಗಲೇ ಡ್ಯಾಂ ಗರಿಷ್ಠ ಮಟ್ಟ ತಲುಪಿರುವುದರಿಂದ ಒಳಹರಿವಿನಷ್ಟೆ ನೀರನ್ನು ಹೊಸಪೇಟೆಯ ತುಂಗಭದ್ರಾ ಜಲಾಶಯಕ್ಕೆ (hospet tungabhadra dam) ಬಿಡಲಾಗುತ್ತಿದೆ.
ಮಳೆ ವಿವರ : ಬುಧವಾರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಜಿಲ್ಲೆಯ ವಿವಿಧೆಡೆ ಬಿದ್ದ ಮಳೆ (rain) ವಿವರ ಈ ಮುಂದಿನಂತಿದೆ. ಪಶ್ಚಿಮಘಟ್ಟ (western ghat) ಪ್ರದೇಶಗಳಾದ ಮಾಣಿಯಲ್ಲಿ (mani) 185 ಮಿಲಿ ಮೀಟರ್ (ಮಿ.ಮೀ.,) ಯಡೂರು (yadur) 188 ಮಿ.ಮೀ., ಹುಲಿಕಲ್ (hulikall) 189 ಮಿ.ಮೀ., ಮಾಸ್ತಿಕಟ್ಟೆ (masthikatte) 186 ಮಿ.ಮೀ., ಚಕ್ರಾ (chakra) 201 ಮಿ.ಮೀ., ಸಾವೇಹಕ್ಲು (savehakklu) 155 ಮಿ.ಮೀ. ವರ್ಷಧಾರೆಯಾಗಿದೆ.
ಉಳಿದಂತೆ ಶಿವಮೊಗ್ಗ (shimoga) 11. 20 ಮಿ.ಮೀ., ಭದ್ರಾವತಿ (bhadravati) 8. 40 ಮಿ.ಮೀ., ತೀರ್ಥಹಳ್ಳಿ (thirthahalli) 73. 90 ಮಿ.ಮೀ., ಸಾಗರ (sagar) 89. 40 ಮಿ.ಮೀ., ಶಿಕಾರಿಪುರ (shikaripur) 13. 80 ಮಿ.ಮೀ., ಸೊರಬ (sorab) 28. 50 ಮಿ.ಮೀ., ಹೊಸನಗರದಲ್ಲಿ (hosanagara) 63. 30 ಮಿ.ಮೀ. ಮಳೆಯಾಗಿದೆ (rainfall).