Theft of gold jewelry at home : Two youths arrested! ಮನೆಯಲ್ಲಿ ಚಿನ್ನಾಭರಣ ಕಳವು : ಇಬ್ಬರು ಯುವಕರ ಬಂಧನ!

ಮನೆಯಲ್ಲಿ ಚಿನ್ನಾಭರಣ ಕಳವು : ಇಬ್ಬರು ಯುವಕರ ಬಂಧನ!

ಶಿವಮೊಗ್ಗ (shivamogga), ಆ. 3: ಮನೆಯೊಂದರಲ್ಲಿ ಚಿನ್ನಾಭರಣ ಕಳವು (theft of gold jewellery) ಮಾಡಿದ್ದ ಆರೋಪಕ್ಕೆ ಸಂಬಂಧಿಸಿದಂತೆ, ಶಿವಮೊಗ್ಗದ ಕೋಟೆ ಠಾಣೆ (shimoga kote police station) ಪೊಲೀಸರು ಇಬ್ಬರು ಯುವಕರನ್ನು ಬಂಧಿಸಿದ ಘಟನೆ ನಡೆದಿದೆ.

ಶಿವಮೊಗ್ಗದ ಚಿಕ್ಕಲ್ ಬಡಾವಣೆ ನಿವಾಸಿ ಮೊಹಮ್ಮದ್ ರಫೀಕ್ ಯಾನೆ ಕಾಣ (25) ಮತ್ತು ಬಾಪೂಜಿನಗರದ ನಿವಾಸಿ ಅತಾವುಲ್ಲಾ (24) ಬಂಧಿತ ಆರೋಪಿಗಳೆಂದು ಗುರುತಿಸಲಾಗಿದೆ.

ಆರೋಪಿಗಳಿಂದ ಅಂದಾಜು 7,62,000 ರೂ. ಮೌಲ್ಯದ 127 ಗ್ರಾಂ ತೂಕದ, ಕಳವು ಚಿನ್ನಾಭರಣಗಳನ್ನು (jewellery) ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

15-7-2022 ರಂದು ಶಿವಮೊಗ್ಗದ ಬಾಪೂಜಿ ನಗರದ (bapuji nagar) ನಿವಾಸಿ ದಸ್ತಗೀರ್ ಖಾನ್ ಯಾನೆ ಬಾಬು (47) ಎಂಬುವರ ಮನೆಯಲ್ಲಿ ಕಳವು ಕೃತ್ಯ ನಡೆದಿತ್ತು. ಬಾಗಿಲ ಬೀಗ ಮುರಿದು ಒಳ ಪ್ರವೇಶಿಸಿ, ಚಿನ್ನಾಭರಣ ಮತ್ತು ಹಣ (cash) ಕಳವು ಮಾಡಲಾಗಿತ್ತು. ಈ ಸಂಬಂಧ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಡಿವೈಎಸ್ಪಿ (dysp) ಬಾಬು ಆಂಜನಪ್ಪ ಮೇಲ್ವಿಚಾರಣೆಯಲ್ಲಿ ಇನ್ಸ್’ಪೆಕ್ಟರ್ (inspector) ಎಂ. ಎಸ್. ದೀಪಕ್, ಸಬ್ ಇನ್ಸ್’ಪೆಕ್ಟರ್ (sub inspector) ಗಳಾದ ಕುಮಾರ್, ಸಿ.ಆರ್.ಕೊಪ್ಪದ್ ಹಾಗೂ ಸಿಬ್ಬಂದಿಗಳಾದ ಎಎಸ್ಐ (asi) ಹರ್ಷ, ಹೆಚ್.ಸಿ. (hc) ಗಳಾದ ಅಣ್ಣಪ್ಪ, ನಾಗರಾಜ್, ಸಿಪಿಸಿಗಳಾದ (cpc) ಪ್ರಕಾಶ್, ಗೊರವರ ಅಂಜಿನಪ್ಪ, ಕಿಶೋರ, ಜಯಶ್ರೀ ಅವರು ಆರೋಪಿಗಳನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.

After Bhadra Dam Prohibition around Tunga Reservoir! ಭದ್ರಾ ಡ್ಯಾಂ ನಂತರ ತುಂಗಾ ಜಲಾಶಯದ ಸುತ್ತಮುತ್ತಲು ನಿಷೇಧಾಜ್ಞೆ ಜಾರಿ Previous post ಭದ್ರಾ ಡ್ಯಾಂ ನಂತರ ತುಂಗಾ ಜಲಾಶಯ ಸುತ್ತಮುತ್ತಲು ನಿಷೇಧಾಜ್ಞೆ ಜಾರಿ!
Heavy water out of Linganamakki Dam: Sharavathi river is overflowing! ಲಿಂಗನಮಕ್ಕಿ ಡ್ಯಾಂನಿಂದ ಭಾರೀ ನೀರು ಹೊರಕ್ಕೆ : ಮೈದುಂಬಿ ಹರಿಯುತ್ತಿರುವ ಶರಾವತಿ ನದಿ! Next post ಲಿಂಗನಮಕ್ಕಿ ಡ್ಯಾಂನಿಂದ ಭಾರೀ ನೀರು ಹೊರಕ್ಕೆ!