ಭದ್ರಾ ಡ್ಯಾಂ ನಂತರ ತುಂಗಾ ಜಲಾಶಯ ಸುತ್ತಮುತ್ತಲು ನಿಷೇಧಾಜ್ಞೆ ಜಾರಿ!
ಶಿವಮೊಗ್ಗ (shivamogga), ಆ. 1: ಭಾರೀ ಮಳೆಗೆ (heavy rainfall) ಜಿಲ್ಲೆಯ ಪ್ರಮುಖ ಜಲಾಶಯಗಳು ಉಕ್ಕಿ ಹರಿಯುತ್ತಿವೆ. ಜಲಧಾರೆ ವೀಕ್ಷಿಸಲು ಆಗಮಿಸುವ ನಾಗರೀಕರ ಸಂಖ್ಯೆಯು ಹೆಚ್ಚಾಗುತ್ತಿದೆ. ಇದರಿಂದ ಡ್ಯಾಂಗಳ (reservoir) ಆವರಣದಲ್ಲಿ ಗೌಜು-ಗದ್ದಲ ಏರ್ಪಡುತ್ತಿದೆ.
ಈ ಕಾರಣದಿಂದಲೇ ಆ. 1 ರಂದು ಭದ್ರಾ ಜಲಾಶಯ (bhadra dam) ಸುತ್ತಮುತ್ತಲಿನ 500 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ (Prohibition) ಜಾರಿಗೊಳಿಸಿ ಜಿಲ್ಲಾಡಳಿತ (District Administration) ಆದೇಶ ಹೊರಡಿಸಿತ್ತು. ಡ್ಯಾಂ (dam) ಮೇಲ್ಭಾಗಕ್ಕೆ ತೆರಳುವುದಕ್ಕೆ ಹಾಗೂ ಜಲಾಶಯ ಆವರಣದಲ್ಲಿ ಗುಂಪುಗೂಡುವಿಕೆ ನಿರ್ಬಂಧಿಸಿತ್ತು.
ಇದರ ಬೆನ್ನಲ್ಲೇ, ಇದೀಗ ತುಂಗಾ ಜಲಾಶಯದ (tunga dam) ಆವರಣದ ಸುತ್ತಮುತ್ತಲಿನ 500 ಮೀಟರ್ ವ್ಯಾಪ್ತಿಯ ಪ್ರದೇಶದಲ್ಲಿ ನಿಷೇಧಾಜ್ಞೆ ((Prohibition)) ವಿಧಿಸಿ ಜಿಲ್ಲಾಡಳಿತ ಶುಕ್ರವಾರ ಆದೇಶ (order) ಹೊರಡಿಸಿದೆ. 3-8-2024 ರಿಂದ 2-9-2024 ರವರೆಗೆ ನಿಷೇಧಾಜ್ಞೆ ಜಾರಿಯಲ್ಲಿರಲಿದೆ ಎಂದು ಜಿಲ್ಲಾಧಿಕಾರಿ (shimoga dc) ಡಾ.ಗುರುದತ್ತ ಹೆಗಡೆ ತಿಳಿಸಿದ್ದಾರೆ.
ಈಗಾಗಲೇ ತುಂಗಾ ಡ್ಯಾಂ ಸಂಪೂರ್ಣ ಭರ್ತಿಯಾಗಿದೆ (tunga dam water level). ಡ್ಯಾಂನಿಂದ ನೀರು ಹೊರಹರಿಸಲಾಗುತ್ತಿದೆ (out flow). ಡ್ಯಾಂ ವೀಕ್ಷಿಸಲು, ಬಾಗಿನ ಅರ್ಪಿಸಲು ಆಗಮಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದರಿಂದ ಜಲಾಶಯದ ಸುರಕ್ಷತೆ (Reservoir safety) ಕಷ್ಟಕರವಾಗಿ ಪರಿಣಮಿಸುತ್ತಿದೆ.
ಮತ್ತೊಂದೆಡೆ, ಮಳೆಯೂ (rain) ಮುಂದುವರೆದಿದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಡ್ಯಾಂ ಸುತ್ತಮುತ್ತಲಿನ ಪ್ರದೇಶದಲ್ಲಿ ಭಾರತೀಯ ನಾಗರೀಕ ಸುರಕ್ಷತಾ ಸಂಹಿತೆ – 2023 ರ ನಿಯಮದಂತೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.
ನಿಬಂಧನೆಗಳು : ನಿರ್ಬಂಧಿತ ಪ್ರದೇಶದಲ್ಲಿ 5 ಮತ್ತು ಅದಕ್ಕಿಂತ ಹೆಚ್ಚಿನ ಜನರು ಗುಂಪುಗೂಡುವಂತಿಲ್ಲ. ತುಂಗಾ ನದಿಗೆ (tunga river) ಇಳಿಯುವುದು, ಪೋಟೋ ತೆಗೆಯುವಂತಿಲ್ಲ. ಜಲಾಶಯದ (reservoir) ಗೇಟ್ ಮುಂಭಾಗ ನಿಲ್ಲುವುದು, ಡ್ಯಾಂ ಮೇಲ್ಭಾಗ ಹೋಗುವಂತಿಲ್ಲ.
ಡ್ಯಾಂ ಭದ್ರತಾ ಸಿಬ್ಬಂದಿಗಳಿಗೆ ತೊಂದರೆ ಉಂಟು ಮಾಡುವಂತಿಲ್ಲ. ಬಾಗಿನ ಅರ್ಪಿಸಲು ಆಗಮಿಸುವವರು ನೀರಿನಲ್ಲಿ ಇಳಿಯುವಂತಿಲ್ಲ. ಈಜಾಡುವಂತಿಲ್ಲ ಎಂಬುವುದು ಸೇರಿದಂತೆ ಕೆಲ ನಿಬಂಧನೆಗಳನ್ನು (conditions) ಜಿಲ್ಲಾಧಿಕಾರಿಗಳು ವಿಧಿಸಿದ್ದಾರೆ.
