
ಕಣ್ಮನ ಸೆಳೆಯುತ್ತಿರುವ ಜೋಗ ಜಲಪಾತದ ಜಲರಾಶಿಯ ಸೌಂದರ್ಯ!
ಸಾಗರ, ಆ. 3: ಲಿಂಗನಮಕ್ಕಿ ಜಲಾಶಯದಿಂದ (linganamakki dam) ಭಾರೀ ಪ್ರಮಾಣದ ನೀರು ಹೊರಬಿಟ್ಟಿರುವ (outflow) ಕಾರಣದಿಂದ, ವಿಶ್ವವಿಖ್ಯಾತ ಜೋಗ ಜಲಪಾತ (world famous jogfalls) ಜಲಧಾರೆಯಿಂದ ಭೋರ್ಗರೆಯಲಾರಂಭಿಸಿದೆ. ಪ್ರವಾಸಿಗರ (tourists) ಕಣ್ಮನ ಸೆಳೆಯುತ್ತಿದೆ.
ಶನಿವಾರ ಲಿಂಗನಮಕ್ಕಿ ಜಲಾಶಯದಿಂದ (reservoir) ಸುಮಾರು 58 ಸಾವಿರ ಕ್ಯೂಸೆಕ್ ನೀರನ್ನು, ಹೊರ ಹರಿಸಲಾಗುತ್ತಿದೆ. ಡ್ಯಾಂನಿಂದ ಭಾರೀ ಪ್ರಮಾಣದ ನೀರು ಹೊರ ಬಿಟ್ಟಿರುವ ಕಾರಣದಿಂದ, ಜೋಗ ಜಲಪಾತದ (jogfalls) ಜಲಧಾರೆಯ ವೈಭೋಗ ಮತ್ತಷ್ಟು ಕಳೆಗಟ್ಟಿದೆ.
ವೀಕೆಂಡ್ (weekend) ವೇಳೆಯಲ್ಲಿಯೇ ಜೋಗ ಜಲಪಾತ ಕಳೆಗಟ್ಟಿರುವುದರಿಂದ ಭಾರೀ ದೊಡ್ಡ ಸಂಖ್ಯೆಯ ಪ್ರವಾಸಿಗರು ಜೋಗದತ್ತ (jog) ದೌಡಾಯಿಸುತ್ತಿದ್ದಾರೆ. ಶನಿವಾರ ಸಾವಿರಾರು ಪ್ರವಾಸಿಗರು ಫಾಲ್ಸ್ ಗೆ (falls) ಭೇಟಿ ನೀಡಿದ್ದರು. ಭಾನುವಾರ ಈ ಪ್ರಮಾಣ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.
‘ಲಿಂಗನಮಕ್ಕಿ ಡ್ಯಾಂನಿಂದ (linganamakki reservoir) ಭಾರೀ ಪ್ರಮಾಣದ ನೀರು ಹೊರಬಿಟ್ಟಿರುವ ಕಾರಣದಿಂದ, ಜೋಗಕ್ಕೆ ಹೊಸ ಕಳೆ ಬಂದಿದೆ. ಅಮೆರಿಕಾದ ನಯಾಗಾರ ಜಲಪಾತದಂತೆ (america niagara falls) ಭೋರ್ಗರೆಯುತ್ತಿದೆ. ಜೋಗದ ಸಿರಿ ಅವರ್ಣನೀಯವಾಗಿದೆ’ ಎಂದು ಕೆಲ ಪ್ರವಾಸಿಗರು ಸಂತಸ ವ್ಯಕ್ತಪಡಿಸುತ್ತಾರೆ.
ಶರಾವತಿ ಕಣಿವೆ (sharavati valley) ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದೆ (heavy rainfall). ಇದರಿಂದ ಶರಾವತಿ ನದಿ (sharavati river) ಉಕ್ಕಿ ಹರಿಯುತ್ತಿದೆ. ಮತ್ತೊಂದೆಡೆ, ಲಿಂಗನಮಕ್ಕಿ ಡ್ಯಾಂನಿಂದ (linganamakki dam) ನೀರು ಹೊರಬಿಟ್ಟಿರುವ ಕಾರಣದಿಂದ, ಡ್ಯಾಂ ಕೆಳಭಾಗದಲ್ಲಿ ಶರಾವತಿ ನದಿ ನೀರಿನ ಹರಿವು (sharavati river flowing) ಮತ್ತಷ್ಟು ಹೆಚ್ಚಾಗಿದೆ. ತಗ್ಗು ಪ್ರದೇಶಗಳಲ್ಲಿ ಪ್ರವಾಹ ಭೀತಿ ಸೃಷ್ಟಿಸಿದೆ.