
ಶಿವಮೊಗ್ಗ – ಕುಡಿಯುವ ನೀರು ಪೂರೈಕೆಗೆ ಕಳ್ಳಕಾಕರ ಅಡ್ಡಿ : ಗಮನಹರಿಸುವರೆ ಪೊಲೀಸರು?
ಶಿವಮೊಗ್ಗ (shivamogga), ಆ. 4: ಶಿವಮೊಗ್ಗ ನಗರದ ಹೊರವಲಯ ಸೋಮಿನಕೊಪ್ಪ ಕೆ.ಹೆಚ್.ಬಿ ಪ್ರೆಸ್ ಕಾಲೋನಿ (khb press colony) ಯಲ್ಲಿರುವ, ಕುಡಿಯುವ ನೀರು ಪೂರೈಕೆ ಟ್ಯಾಂಕ್ ಕಟ್ಟಡದಲ್ಲಿ ನಿರಂತರವಾಗಿ ಕಳವು ಕೃತ್ಯಗಳು ನಡೆಯುತ್ತಿವೆ. ಇದರಿಂದ ಕುಡಿಯುವ ನೀರು ಪೂರೈಕೆಗೆ (drinking water supply) ಅಡ್ಡಿಯಾಗಿ ಪರಿಣಮಿಸಿದೆ ಎಂದು ಸ್ಥಳೀಯ ನಿವಾಸಿಗಳು ದೂರಿದ್ದಾರೆ.
ತಡರಾತ್ರಿ ಕೂಡ ದುಷ್ಕರ್ಮಿಗಳು, ಓವರ್ ಹೆಡ್ ಟ್ಯಾಂಕ್ ನ (over head tank) ಪೈಪ್ ಕಳ್ಳತನ ಮಾಡಿದ್ದಾರೆ. ಇದರಿಂದ ಭಾನುವಾರ ಕುಡಿಯುವ ನೀರು ಪೂರೈಕೆಯಾಗದಂತಾಗಿದೆ. ಕಳೆದ ಎರಡ್ಮೂರು ತಿಂಗಳಲ್ಲಿ ನಾಲ್ಕು ಬಾರಿ ಸದರಿ ಟ್ಯಾಂಕ್ ಕಟ್ಟಡದಲ್ಲಿ (drinking water supply tank building) ಕಳವು ಕೃತ್ಯಗಳು (theft) ನಡೆದಿವೆ. ಸಾವಿರಾರು ರೂಪಾಯಿ ಮೌಲ್ಯದ ಮೋಟಾರ್ ಪಂಪ್ ಸೆಟ್, ಪೈಪ್ ಗಳನ್ನು ಕಳ್ಳರು ಹೊತ್ತೊಯ್ದಿದ್ದಾರೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ಧಾರೆ.
ಸದರಿ ಟ್ಯಾಂಕ್ ಕಟ್ಟಡ ಜನವಸತಿ ಪ್ರದೇಶ (residential area) ದಿಂದ ದೂರವಿದೆ. ಸಿಸಿ ಕ್ಯಾಮರಾ (cc camera), ಬೀದಿ ದೀಪ (street lights) ಸೇರಿದಂತೆ ಕನಿಷ್ಠ ಸುರಕ್ಷತಾ ಕ್ರಮಗಳು (safety measures) ಇಲ್ಲವಾಗಿದೆ. ಇದರಿಂದ ಕಳ್ಳಕಾಕರ ಹಾವಳಿ ಹೆಚ್ಚಾಗುವಂತಾಗಿದೆ. ಹೇಳುವವರು, ಕೇಳುವವರು ಯಾರೂ ಇಲ್ಲದಂತಾಗಿದೆ ಎಂದು ನಿವಾಸಿಗಳು (residents) ತಿಳಿಸಿದ್ದಾರೆ.
ಸದರಿ ಬಡಾವಣೆಯ (extension) ಅರ್ಧ ಭಾಗ ಮಹಾನಗರ ಪಾಲಿಕೆ (corporation) ಹಾಗೂ ಇನ್ನರ್ಧ ಅಬ್ಬಲಗೆರೆ ಗ್ರಾಮ ಪಂಚಾಯ್ತಿ ಆಡಳಿತದ (abbalagere grama panchayat) ಅಧೀನದಲ್ಲಿದೆ. ತಕ್ಷಣವೇ ನೀರಿನ ಟ್ಯಾಂಕ್ ಕಟ್ಟಡಕ್ಕೆ ಸಿಸಿ ಕ್ಯಾಮರಾ ಅಳವಡಿಕೆ, ಬೀದಿ ದೀಪಗಳ ವ್ಯವಸ್ಥೆ ಮಾಡಬೇಕು. ಪೊಲೀಸರು (police dept) ಕಳ್ಳಕಾಕರ ಹಾವಳಿ ತಡೆಗೆ ಕ್ರಮಕೈಗೊಳ್ಳಬೇಕು ಎಂದು ನಿವಾಸಿಗಳು ಆಗ್ರಹಿಸಿದ್ದಾರೆ.