ಶಿವಮೊಗ್ಗ : ಭಾರೀ ಗಾತ್ರದ ಹೆಬ್ಬಾವು ಸಂರಕ್ಷಣೆ!

Shimoga: Preservation of huge python! ಶಿವಮೊಗ್ಗ : ಭಾರೀ ಗಾತ್ರದ ಹೆಬ್ಬಾವು ಸಂರಕ್ಷಣೆ!

ಶಿವಮೊಗ್ಗ (shivamogga), ಆ. 6: ಮನೆಯ ಹಿಂಭಾಗದ ಹುಲ್ಲಿನ ಬಣವೆಯ ಬಿಲದ ಬಳಿ ಅವಿತುಕೊಂಡಿದ್ದ, ಭಾರೀ ಗಾತ್ರದ ಹೆಬ್ಬಾವೊಂದನ್ನು (python) ಉರಗ ಸಂರಕ್ಷಕ ಸ್ನೇಕ್ ಕಿರಣ್ ಅವರು ಸುರಕ್ಷಿತವಾಗಿ ಸಂರಕ್ಷಿಸಿದ ಘಟನೆ ಶಿವಮೊಗ್ಗದ (shimoga) ತೀರ್ಥಹಳ್ಳಿ ರಸ್ತೆಯ ಕುರುಬರ ಪಾಳ್ಯದಲ್ಲಿ ನಡೆದಿದೆ.

ಸುಹಾಸ್ ಎಂಬುವರ ಮನೆಯ ಬಳಿ ಘಟನೆ ನಡೆದಿದೆ. ಹುಲ್ಲಿನ ಬಣವೆಯ ಬಳಿ ಹಾವು ಕಾಣಿಸಿಕೊಂಡಿತ್ತು. ನಂತರ ಅದು ಸಮೀಪದ ಬಿಲದಲ್ಲಿ ಅಡಗಿತ್ತು. ಈ ಕುರಿತಂತೆ ಅವರು ಉರಗ ಸಂರಕ್ಷಕ ಸ್ನೇಕ್ ಕಿರಣ್ (snake rescuer snake kiran) ಅವರಿಗೆ ಮಾಹಿತಿ ರವಾನಿಸಿದ್ದರು.

ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಕಿರಣ್ ಅವರು ಸುಮಾರು ಅರ್ಧ ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಹಾವನ್ನು ರಕ್ಷಿಸಿದ್ದಾರೆ. ಸದರಿ ಹಾವು (snake) ಸುಮಾರು ಏಳೂವರೆ ಅಡಿ ಉದ್ದವಿದೆ. 705 ಗ್ರಾಂ ತೂಕವಿದೆ. ಅರಣ್ಯ ಇಲಾಖೆ (forest dept) ಸಿಬ್ಬಂದಿಗಳ ಸಮ್ಮುಖದಲ್ಲಿ ಹಾವನ್ನು ಕಾಡಿಗೆ ಬಿಡಲಾಯಿತು ಎಂದು ಸ್ನೇಕ್ ಕಿರಣ್ ಅವರು ಮಾಹಿತಿ ನೀಡಿದ್ದಾರೆ.

‘ಹಾವುಗಳು (snakes) ಪ್ರಕೃತಿಯ ಅಪರೂಪದ ಜೀವ ವೈವಿಧ್ಯಗಳಲ್ಲಿ ಒಂದಾಗಿವೆ. ಇವುಗಳು ಜನವಸತಿ ಪ್ರದೇಶಗಳಲ್ಲಿ ಕಾಣಿಸಿಕೊಂಡಾಗ ಹೊಡೆದು ಸಾಯಿಸಬೇಡಿ. ತಮಗೆ ಮಾಹಿತಿ ನೀಡಿದರೆ ಸಂರಕ್ಷಣೆ ಮಾಡುವುದಾಗಿ’ ಸ್ನೇಕ್ ಕಿರಣ್ (snake kiran) ಅವರು ನಾಗರೀಕರಿಗೆ ಮನವಿ ಮಾಡಿಕೊಂಡಿದ್ದಾರೆ. 

Follow us on social media

About B.Renukesha

1997-98 ನೇ ಸಾಲಿನಿಂದ, ಸರಿಸುಮಾರು 26-27 ವರ್ಷಗಳಿಂದ ಪತ್ರಿಕಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿಕೊಂಡು ಬರುತ್ತಿದ್ದೆನೆ. ಬದಲಾದ ಕಾಲಘಟ್ಟಕ್ಕೆ ಅನುಗುಣವಾಗಿ ಮುದ್ರಣ ಮಾಧ್ಯಮದ ಜೊತೆಜೊತೆಗೆ, ಡಿಜಿಟಲ್ ಮಾಧ್ಯಮದಲ್ಲಿಯೂ ಕಾರ್ಯನಿರ್ವಹಿಸುವ ಅನಿವಾರ್ಯತೆ ಎದುರಾಗಿದೆ. ಆದರೆ ಡಿಜಿಟಲ್ ಮಾಧ್ಯಮ ನನಗೆ ಹೊಸದಲ್ಲ. 2013-14 ರ ಸಾಲಿನಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿಯೇ ಮೊಟ್ಟಮೊದಲ ಬಾರಿಗೆ www.u2rnews.com ಎಂಬ ನ್ಯೂಸ್ ವೆಬ್ ಸೈಟ್ ಆರಂಭಿಸಿದ್ದೆ. ಆದರೆ ಕಾರಣಾಂತರಗಳಿಂದ ಮುನ್ನಡೆಸಿಕೊಂಡು ಹೋಗಲು ಸಾಧ್ಯವಾಗಲಿಲ್ಲ. ಇದೀಗ www.udayasaakshi.com (ಉದಯ ಸಾಕ್ಷಿ) ನ್ಯೂಸ್ ವೆಬ್ ಸೈಟ್ ಹಾಗೂ @UdayaSaakshi ಯೂಟ್ಯೂಬ್ ನ್ಯೂಸ್ ಚಾನಲ್ ಆರಂಭಿಸಿದ್ದೆನೆ. ಈ ಡಿಜಿಟಲ್ ಮಾಧ್ಯಮಗಳ ಮೂಲಕ ಪ್ರಚಲಿತ ವಿದ್ಯಮಾನ, ಮಾಹಿತಿಗಳನ್ನು ಯಥಾರೂಪದಲ್ಲಿ ನಾಗರೀಕರಿಗೆ ತಲುಪಿಸುವ ಪ್ರಾಮಾಣಿಕ ಕಾರ್ಯ ಮಾಡಲಾಗುವುದು. ಮುಖ್ಯವಾಗಿ ಸಾಮಾಜಿಕ ಸಮಸ್ಯೆ, ನಾಗರೀಕರ ದೂರು-ದುಮ್ಮಾನಗಳಿಗೆ ನ್ಯೂಸ್ ವೆಬ್ ಸೈಟ್ ಹಾಗೂ ಚಾನಲ್ ವೇದಿಕೆಯಾಗಲಿದೆ. ಧನ್ಯವಾದಗಳು, ಬಿ.ರೇಣುಕೇಶ್, ಪತ್ರಕರ್ತರು.

View all posts by B.Renukesha →