KSRTC bus which was going from Bhatkal to Bangalore caught fire: a huge disaster! ಬೆಂಕಿಗಾಹುತಿಯಾದ ಭಟ್ಕಳದಿಂದ ಬೆಂಗಳೂರಿಗೆ ತೆರಳುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ : ತಪ್ಪಿದ ಭಾರೀ ಅನಾಹುತ!

ಬೆಂಕಿಗಾಹುತಿಯಾದ ಭಟ್ಕಳದಿಂದ ಬೆಂಗಳೂರಿಗೆ ತೆರಳುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ : ತಪ್ಪಿದ ಭಾರೀ ಅನಾಹುತ!

ಶಿವಮೊಗ್ಗ, ಆ. 6:  ಪ್ರಯಾಣಿಕರಿದ್ದ ಕೆ.ಎಸ್.ಆರ್.ಟಿ.ಸಿ ಬಸ್ (ksrtc bus) ವೊಂದು ಬೆಂಕಿಯಿಂದ ಧಗಧಗನೆ ಹೊತ್ತಿ ಉರಿದ ಘಟನೆ, ಸಾಗರದ ಎಲ್.ಬಿ. ಕಾಲೇಜ್ ಸಮೀಪ ಮಂಗಳವಾರ ಬೆಳಿಗ್ಗೆ ನಡೆದಿದೆ.

ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಗೆ (north west karnataka transport corporation) ಸದರಿ ಬಸ್ ಸೇರಿದ್ದಾಗಿದೆ. ಭಟ್ಕಳದಿಂದ (bhatkal) ಹೊನ್ನಾವರ (honnavara), ಸಾಗರ ಮಾರ್ಗವಾಗಿ ಬೆಂಗಳೂರಿಗೆ (bengaluru) ತೆರಳುತ್ತಿತ್ತು (bhatkal – bengaluru bus). ಸುಮಾರು 14 ಜನ ಪ್ರಯಾಣಿಕರಿದ್ದರು ಎಂದು ತಿಳಿದುಬಂದಿದೆ.

ಬಸ್ ನಲ್ಲಿ (bus) ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಚಾಲಕ (driver) ಬಸ್ ನಿಲ್ಲಿಸಿದ್ದು, ಪ್ರಯಾಣಿಕರೆಲ್ಲರೂ (travelers) ಹೊರ ಓಡಿ ಬಂದಿದ್ದಾರೆ. ಕ್ಷಣಮಾತ್ರದಲ್ಲಿಯೇ ಬಸ್ ಬೆಂಕಿಯಿಂದ ಹೊತ್ತಿ ಉರಿಯಲಾರಂಭಿಸಿದೆ (ksrtc bus caught fire) ಎಂದು ಹೇಳಲಾಗಿದೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳ (Fire Brigade) ಸಿಬ್ಬಂದಿಗಳು ಬಸ್ ಗೆ ಹೊತ್ತಿದ್ದ ಬೆಂಕಿ ನಂದಿಸಿದ್ದಾರೆ. ಘಟನೆಯ ಕುರಿತಂತೆ ಹೆಚ್ಚಿನ ವಿವರಗಳು ಇನ್ನಷ್ಟೆ ಲಭ್ಯವಾಗಬೇಕಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು (police) ಭೇಟಿಯಿತ್ತು ಪರಿಶೀಲನೆ ನಡೆಸಿದ್ದಾರೆ.

Shimoga: Preservation of huge python! ಶಿವಮೊಗ್ಗ : ಭಾರೀ ಗಾತ್ರದ ಹೆಬ್ಬಾವು ಸಂರಕ್ಷಣೆ! Previous post ಶಿವಮೊಗ್ಗ : ಭಾರೀ ಗಾತ್ರದ ಹೆಬ್ಬಾವು ಸಂರಕ್ಷಣೆ!
Karnataka Okkaliga Community Development Corporation / Maratha Community Development Corporation: Online Application Invitation under Various Schemes ಕರ್ನಾಟಕ ಒಕ್ಕಲಿಗ ಸಮುದಾಯ ಅಭಿವೃದ್ಧಿ ನಿಗಮ / ಮರಾಠ ಸಮುದಾಯ ಅಭಿವೃದ್ಧಿ ನಿಗಮ : ವಿವಿಧ ಯೋಜನೆಯಡಿ ಆನ್ಲೈನ್ ಅರ್ಜಿ ಆಹ್ವಾನ Next post ಕರ್ನಾಟಕ ಒಕ್ಕಲಿಗ ಸಮುದಾಯ ಅಭಿವೃದ್ಧಿ ನಿಗಮ : ವಿವಿಧ ಯೋಜನೆಯಡಿ ಆನ್‌ಲೈನ್ ಅರ್ಜಿ ಆಹ್ವಾನ