The priest who worshiped actor Darshan in front of the idol of God has been suspended! ದೇವರ ವಿಗ್ರಹದ ಎದುರು ನಟ ದರ್ಶನ್ ಫೋಟೋಗಳಿಟ್ಟು ಪೂಜಿಸಿದ್ದಅರ್ಚಕ ಸಸ್ಪೆಂಡ್!

ದೇವರ ವಿಗ್ರಹದ ಎದುರು ನಟ ದರ್ಶನ್ ಫೋಟೋಗಳಿಟ್ಟು ಪೂಜಿಸಿದ್ದ ಅರ್ಚಕ ಸಸ್ಪೆಂಡ್!

ಬೆಂಗಳೂರು, / ಬಳ್ಳಾರಿ, ಆ. 6: ಬಳ್ಳಾರಿ ಜಿಲ್ಲೆಯ ಕುರುಗೋಡು ಪಟ್ಟಣದ ಐತಿಹಾಸಿಕ ದೊಡ್ಡ ಬಸವೇಶ್ವರ ದೇವಾಲಯದ ನಂದಿ ವಿಗ್ರಹದ ಎದುರು, ಕೊಲೆ ಪ್ರಕರಣದಲ್ಲಿ (murder case) ಜೈಲು ಸೇರಿರುವ ಚಿತ್ರನಟ ದರ್ಶನ್ (actor darshan) ಫೋಟೋವಿಟ್ಟು ಪೂಜೆ ಸಲ್ಲಿಸಿದ ಅರ್ಚಕನನ್ನು, ಮುಜುರಾಯಿ ಇಲಾಖೆಯು ಸೇವೆಯಿಂದ ಅಮಾನತ್ತುಗೊಳಿಸಿದ ಘಟನೆ ನಡೆದಿದೆ.

ದೇವರ ವಿಗ್ರಹದ ಮುಂಭಾಗ ಅಮಾವಾಸ್ಯೆ ದಿನದಂದು ಚಿತ್ರನಟ ದರ್ಶನ್ ಪೋಟೋಗಳನ್ನಿಟ್ಟು (darshan Photos) ಪೂಜಿಸಲಾಗಿತ್ತು. ಮಂಗಳಾರತಿ ಎತ್ತಲಾಗಿತ್ತು. ಸದರಿ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ (social media) ವೈರಲ್ ಆಗಿತ್ತು. ಈ ನಡುವೆ ಕೆಲ ಭಕ್ತರು ದೇವಾಲಯ ಅರ್ಚಕನ (priest) ಕ್ರಮದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು.

ಸದರಿ ದೇವಾಲಯ (temple) ಮುಜುರಾಯಿ ಇಲಾಖೆ ಅಧೀನದಲ್ಲಿರುವುದರಿಂದ, ಘಟನೆಯ ಬಗ್ಗೆ ಧಾರ್ಮಿಕ ದತ್ತಿ ಇಲಾಖೆಯು ಮಾಹಿತಿ ಸಂಗ್ರಹಿಸಿತ್ತು. ಈ ನಡುವೆ ದೇವಾಲಯ ಅರ್ಚಕನನ್ನು (temple priest) ಸೇವೆಯಿಂದ ಅಮಾನತ್ತುಗೊಳಿಸಿ (suspend) ಆದೇಶ ಹೊರಡಿಸಿದೆ ಎಂದು ತಿಳಿದುಬಂದಿದೆ.

ದರ್ಶನ್ (darshan) ಅವರಿಗೆ ಒಳ್ಳೆಯದಾಗಲಿ. ಅವರ ಸಂಕಷ್ಟಗಳು ದೂರವಾಗಲಿ ಎಂದು ಪೂಜೆ ಮಾಡಿದರೆ ತಪ್ಪಿಲ್ಲ. ಆದರೆ ದೇವರ ವಿಗ್ರಹದ ಬಳಿಯೇ ಅವರ ಫೋಟೋಗಳನ್ನಿಟ್ಟು ಪೂಜಿಸುವುದು ಎಷ್ಟರಮಟ್ಟಿಗೆ ಸರಿ ಎಂದು ಕೆಲ ಭಕ್ತರು ಆಕ್ಷೇಪ ವ್ಯಕ್ತಪಡಿಸಿದ್ದರು.

Approval for resumption of night landing work at Shimoga Airport! ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ರಾತ್ರಿ ಲ್ಯಾಂಡಿಂಗ್ ಕೆಲಸದ ಪುನರಾರಂಭಕ್ಕೆ ಅನುಮೋದನೆ! Previous post ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ರಾತ್ರಿ ಲ್ಯಾಂಡಿಂಗ್ ಕೆಲಸದ ಪುನರಾರಂಭಕ್ಕೆ ಅನುಮೋದನೆ!
Chikkaballapur : A wicked son who raped his mother..! ಚಿಕ್ಕಬಳ್ಳಾಪುರ : ತಾಯಿಯ ಮೇಲೆಯೇ ಅತ್ಯಾಚಾರ ಎಸಗಿದ ದುರುಳ ಮಗ..! Next post ಚಿಕ್ಕಬಳ್ಳಾಪುರ : ತಾಯಿಯ ಮೇಲೆಯೇ ಅತ್ಯಾಚಾರ ಎಸಗಿದ ದುರುಳ ಮಗ..!