ಭದ್ರಾವತಿಯಲ್ಲಿ ಸುಲಿಗೆ ಪ್ರಕರಣ : ಇಬ್ಬರ ಬಂಧನ!

Extortion case in Bhadravati : Two arrested! ಭದ್ರಾವತಿಯಲ್ಲಿ ಸುಲಿಗೆ ಪ್ರಕರಣ : ಇಬ್ಬರ ಬಂಧನ!

ಭದ್ರಾವತಿ (bhadravati), ಆ. 13: ಗುಂಪೊಂದು ವ್ಯಕ್ತಿಯೋರ್ವರಿಗೆ ಬೆದರಿಕೆ ಹಾಕಿ ಚಿನ್ನಾಭರಣ – ನಗದು ಸುಲಿಗೆ (extortion) ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಭದ್ರಾವತಿ ನ್ಯೂ ಟೌನ್ ಠಾಣೆ (new town police station) ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಭದ್ರಾವತಿಯ ಅನ್ವರ್ ಕಾಲೋನಿಯ ಮೊಮಿನ್ ಮೊಹಲ್ಲಾ ನಿವಾಸಿ ಜಬೀವುಲ್ಲಾ ಯಾನೆ ಮಲ್ಲಿ (23) ಹಾಗೂ ಮಹಮದ್ ಗೌಸ್ ಯಾನೆ ಗುಂಡಾ (24) ಬಂಧಿತ ಆರೋಪಿಗಳೆಂದು ಗುರುತಿಸಲಾಗಿದೆ.

ಆರೋಪಿಗಳಿಂದ 1,50,000 ರೂ. ಮೌಲ್ಯದ  24. 6 ಗ್ರಾಂ ತೂಕದ ಬಂಗಾರದ ಸರ, ಉಂಗುರ (gold jewellery) ಹಾಗೂ ಕೃತ್ಯಕ್ಕೆ ಬಳಸಿದ್ದ ಬೈಕ್ ನ್ನು (bike) ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

9-8-2024 ರಂದು ರಾತ್ರಿ ಭದ್ರಾವತಿಯ ಶಾರದಾ ಮಂದಿರದ ಬಳಿ ನಿಂತಿದ್ದ, ಹುತ್ತಾ ಕಾಲೋನಿ (bhadravati hutta colony) ನಿವಾಸಿ ಮುರುಳೀಧರ್ (64) ಎಂಬುವರನ್ನು, ನಾಲ್ಕೈದು ಯುವಕರು ಬೆದರಿಸಿ ಅವರ ಬಳಿಯಿದ್ದ ಚಿನ್ನದ ಸರ, ಉಂಗುರ, ಹಣ ಸುಲಿಗೆ ಮಾಡಿ ಪರಾರಿಯಾಗಿದ್ದರು.

ಈ ಸಂಬಂಧ ಡಿವೈಎಸ್ಪಿ (dysp) ನಾಗರಾಜ್ ಮೇಲ್ವಿಚಾರಣೆಯಲ್ಲಿ ಸರ್ಕಲ್ ಇನ್ಸ್’ಪೆಕ್ಟರ್ (cpi) ಶ್ರೀಶೈಲಕುಮಾರ್ ನೇತೃತ್ವದಲ್ಲಿ ಸಬ್ ಇನ್ಸ್’ಪೆಕ್ಟರ್ (psi) ಗಳಾದ ಟಿ. ರಮೇಶ್, ಭಾರತಿ, ಚಂದ್ರಶೇಖರನಾಯ್ಕ್, ಸಿಬ್ಬಂದಿಗಳಾದ ಎಸ್ಐ ಮಂಜಪ್ಪ, ಸಿಹೆಚ್’ಸಿ (chc) ನವೀನ್,

ಸಂತೋಷನಾಯ್ಕ್, ಸಿಪಿಸಿ ಪ್ರಸನ್ನ, ಹಳೇನಗರ ಠಾಣೆ (old town police station) ಸಿಹೆಚ್’ಸಿ ಹಾಲಪ್ಪ, ಸಿಪಿಸಿ ಮೌನೇಶ್ ಶಿಕಲ್, ಚಿಕ್ಕಪ್ಪ, ಪ್ರವೀಣ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚನೆ ಮಾಡಲಾಗಿತ್ತು.

About B.Renukesha

1997-98 ನೇ ಸಾಲಿನಿಂದ, ಸರಿಸುಮಾರು 26-27 ವರ್ಷಗಳಿಂದ ಪತ್ರಿಕಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿಕೊಂಡು ಬರುತ್ತಿದ್ದೆನೆ. ಬದಲಾದ ಕಾಲಘಟ್ಟಕ್ಕೆ ಅನುಗುಣವಾಗಿ ಮುದ್ರಣ ಮಾಧ್ಯಮದ ಜೊತೆಜೊತೆಗೆ, ಡಿಜಿಟಲ್ ಮಾಧ್ಯಮದಲ್ಲಿಯೂ ಕಾರ್ಯನಿರ್ವಹಿಸುವ ಅನಿವಾರ್ಯತೆ ಎದುರಾಗಿದೆ. ಆದರೆ ಡಿಜಿಟಲ್ ಮಾಧ್ಯಮ ನನಗೆ ಹೊಸದಲ್ಲ. 2013-14 ರ ಸಾಲಿನಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿಯೇ ಮೊಟ್ಟಮೊದಲ ಬಾರಿಗೆ www.u2rnews.com ಎಂಬ ನ್ಯೂಸ್ ವೆಬ್ ಸೈಟ್ ಆರಂಭಿಸಿದ್ದೆ. ಆದರೆ ಕಾರಣಾಂತರಗಳಿಂದ ಮುನ್ನಡೆಸಿಕೊಂಡು ಹೋಗಲು ಸಾಧ್ಯವಾಗಲಿಲ್ಲ. ಇದೀಗ www.udayasaakshi.com (ಉದಯ ಸಾಕ್ಷಿ) ನ್ಯೂಸ್ ವೆಬ್ ಸೈಟ್ ಹಾಗೂ @UdayaSaakshi ಯೂಟ್ಯೂಬ್ ನ್ಯೂಸ್ ಚಾನಲ್ ಆರಂಭಿಸಿದ್ದೆನೆ. ಈ ಡಿಜಿಟಲ್ ಮಾಧ್ಯಮಗಳ ಮೂಲಕ ಪ್ರಚಲಿತ ವಿದ್ಯಮಾನ, ಮಾಹಿತಿಗಳನ್ನು ಯಥಾರೂಪದಲ್ಲಿ ನಾಗರೀಕರಿಗೆ ತಲುಪಿಸುವ ಪ್ರಾಮಾಣಿಕ ಕಾರ್ಯ ಮಾಡಲಾಗುವುದು. ಮುಖ್ಯವಾಗಿ ಸಾಮಾಜಿಕ ಸಮಸ್ಯೆ, ನಾಗರೀಕರ ದೂರು-ದುಮ್ಮಾನಗಳಿಗೆ ನ್ಯೂಸ್ ವೆಬ್ ಸೈಟ್ ಹಾಗೂ ಚಾನಲ್ ವೇದಿಕೆಯಾಗಲಿದೆ. ಧನ್ಯವಾದಗಳು, ಬಿ.ರೇಣುಕೇಶ್, ಪತ್ರಕರ್ತರು.

View all posts by B.Renukesha →