shimoga | Shimoga - Snake came to the police station: Shocked police..! ಶಿವಮೊಗ್ಗ – ಪೊಲೀಸ್ ಠಾಣೆಗೆ ಬಂದ ಹಾವು : ಬೆಚ್ಚಿಬಿದ್ದ ಪೊಲೀಸರು..!

shimoga | ಶಿವಮೊಗ್ಗ – ಠಾಣೆಗೆ ಬಂದ ಹಾವು : ಬೆಚ್ಚಿಬಿದ್ದ ಪೊಲೀಸರು..!

ಶಿವಮೊಗ್ಗ (shivamogga), ಆ. 21 : ಶಿವಮೊಗ್ಗ ನಗರದ ಗ್ರಾಮಾಂತರ ಪೊಲೀಸ್ ಠಾಣೆ (shimoga rural police station) ಯಲ್ಲಿ ಪತ್ತೆಯಾದ ಕೇರೆ ಹಾವನ್ನು (rat snake), ಉರಗ ಸಂರಕ್ಷಕ ಸ್ನೇಕ್ ಕಿರಣ್ ಅವರು ಸುರಕ್ಷಿತವಾಗಿ ಸಂರಕ್ಷಿಸಿದ ಘಟನೆ ಆ. 21 ರ ಬುಧವಾರ ಬೆಳಿಗ್ಗೆ ನಡೆದಿದೆ.

ಠಾಣೆಯ (police station) ಕಂಪ್ಯೂಟರ್, ಜೆರಾಕ್ಸ್ ಮಿಷನ್ ಇಟ್ಟಿದ್ದ ಕೊಠಡಿಯಲ್ಲಿ ಹಾವು (snake) ಕಾಣಿಸಿಕೊಂಡಿತ್ತು. ಹಾವು ಗಮನಿಸಿದ ಪೊಲೀಸರು, ಉರಗ ಸಂರಕ್ಷಕ ಸ್ನೇಕ್ ಕಿರಣ್ (snake kiran) ಗೆ ಮಾಹಿತಿ ರವಾನಿಸಿದ್ದರು.

ಸ್ಥಳಕ್ಕಾಗಮಿಸಿದ ಕಿರಣ್ ಅವರು ಸುಮಾರು ಮೂರುವರೆ ಅಡಿ ಉದ್ದದ ಕೇರೆ ಹಾವನ್ನು (rat snake) ಸುರಕ್ಷಿತವಾಗಿ ರಕ್ಷಿಸಿದ್ದಾರೆ.

‘ಸದರಿ ಹಾವು ವಿಷ ರಹಿತವಾಗಿದೆ (non-venomous snake). ಠಾಣೆಯ ಕಿಟಕಿ ಮೂಲಕ ಒಳ ಬಂದಿರುವ ಸಾಧ್ಯತೆಯಿದೆ’ ಎಂದು ಸ್ನೇಕ್ ಕಿರಣ್ (snake kira) ಅವರು ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ.

Lokayukta letter to Governor for investigation against HD Kumaraswamy: What did the CM say? ಹೆಚ್.ಡಿ.ಕುಮಾರಸ್ವಾಮಿ ವಿರುದ್ದ ತನಿಖೆಗೆ ರಾಜ್ಯಪಾಲರಿಗೆ ಲೋಕಾಯುಕ್ತ ಪತ್ರ : ಸಿಎಂ ಹೇಳಿದ್ದೇನು? Previous post bengaluru | ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ತನಿಖೆಗೆ ರಾಜ್ಯಪಾಲರಿಗೆ ಲೋಕಾಯುಕ್ತ ಪತ್ರ : CM ಹೇಳಿದ್ದೇನು?
koppal | 'ಅಗತ್ಯಬಿದ್ದರೆ ಮುಲಾಜಿಲ್ಲದೆ HDK ಅರೆಸ್ಟ್' : CM ಸಿದ್ದು ಗುಟುರು! koppal | 'If necessary arrest HDK without hesitation': CM is angry! Next post koppal | ‘ಅಗತ್ಯಬಿದ್ದರೆ ಮುಲಾಜಿಲ್ಲದೆ HDK ಅರೆಸ್ಟ್’ : CM ಸಿದ್ದು ಗುಟುರು!