Lokayukta letter to Governor for investigation against HD Kumaraswamy: What did the CM say? ಹೆಚ್.ಡಿ.ಕುಮಾರಸ್ವಾಮಿ ವಿರುದ್ದ ತನಿಖೆಗೆ ರಾಜ್ಯಪಾಲರಿಗೆ ಲೋಕಾಯುಕ್ತ ಪತ್ರ : ಸಿಎಂ ಹೇಳಿದ್ದೇನು?

bengaluru | ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ತನಿಖೆಗೆ ರಾಜ್ಯಪಾಲರಿಗೆ ಲೋಕಾಯುಕ್ತ ಪತ್ರ : CM ಹೇಳಿದ್ದೇನು?

ಬೆಂಗಳೂರು (bengaluru), ಆ. 20: ತನ್ನ ವಿರುದ್ಧ ಪ್ರಾಸಿಕ್ಯೂಷನ್ ಗೆ (prosecution) ಅನುಮತಿ ನೀಡುವ ಮೂಲಕ ರಾಜ್ಯಪಾಲರು (governor) ತಾರತಮ್ಯವೆಸಗಿದ್ದು, ಅವರು ಭಾರತದ ರಾಷ್ಟ್ರಪತಿಯವರ (president of india) ಪ್ರತಿನಿಧಿಗಳಾಗಿ ಕೆಲಸ ಮಾಡಬೇಕೇ ಹೊರತು, ಕೇಂದ್ರ ಸರ್ಕಾರದ (central govt) ಪ್ರತಿನಿಧಿಯಾಗಿ ಕೆಲಸ ಮಾಡಬಾರದೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ (cm siddaramaiah)  ತಿಳಿಸಿದರು.

ಅವರು ಇಂದು ವಿಧಾನಸೌಧದಲ್ಲಿ (vidhana soudha) ಮಾಧ್ಯಮದವರೊಂದಿಗೆ ಮಾತನಾಡಿದರು. ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರ (h d kumaraswamy) ಮೇಲಿನ ತನಿಖೆಗಾಗಿ, ರಾಜ್ಯಪಾಲರು ಅನುಮತಿ ನೀಡಲು ಲೋಕಾಯುಕ್ತ (lokayukta) ದವರು ಮನವಿ ಮಾಡಿರುವ ಬಗ್ಗೆ ಮಾಧ್ಯಮದವರಿಗೆ ತಮ್ಮ ಪ್ರತಿಕ್ರಿಯೆ ನೀಡುತ್ತಾ, 

ಶ್ರೀ ಸಾಯಿ ವೆಂಕಟೇಶ್ವರ ಮಿನರಲ್ಸ್ ನಲ್ಲಿ ನಡೆದ ಗಣಿಗಾರಿಕೆಗೆ (mining) ಸಂಬಂಧಿಸಿದಂತೆ ತನಿಖೆ (enquiry) ನಡೆಸಲು ಲೋಕಾಯುಕ್ತದವರು (lokayukta) 23-11-2023 ರಂದು ಅನುಮತಿ ಕೋರಿದ್ದು, ಆ ಬಗ್ಗೆ ರಾಜ್ಯಪಾಲರು ಯಾವುದೇ ನಿರ್ಣಯ ಕೈಗೊಳ್ಳದ ಕಾರಣ ,ಲೋಕಾಯುಕ್ತ ಮತ್ತೊಮ್ಮೆ ಕೋರಿದ್ದಾರೆ ಎಂದರು.

ಆದರೆ 26-07-2024 ರಂದು ಅಬ್ರಾಹಂ (abraham t j) ರವರು ತನ್ನ ವಿರುದ್ಧ ಪ್ರಾಸಿಕ್ಯೂಷನ್ ಗೆ  ಅನುಮತಿ ಕೋರಿದ ತಕ್ಷಣ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ  ನೀಡಿದ್ದು, ಇಂತಹ ತಾರತಮ್ಯವೇಕೆ ಎಂದು ಮುಖ್ಯಮಂತ್ರಿಗಳು ಪ್ರಶ್ನಿಸಿದರು.

ರಾಜ್ಯಪಾಲರನ್ನು ಅವಹೇಳನ ಮಾಡಲಾಗುತ್ತಿದೆ ಎಂದು ಬಿಜೆಪಿಯವರುs (bjp), ಕಾಂಗ್ರೆಸ್ (congress) ನವರ ವಿರುದ್ಧ ಪ್ರತಿಭಟನೆ ಹಮ್ಮಿಕೊಂಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಶಶಿಕಲಾ ಜೊಲ್ಲೆ , ಹೆಚ್.ಡಿ. ಕುಮಾರಸ್ವಾಮಿ , ಮುರುಗೇಶ್ ನಿರಾಣಿ, ಜನಾರ್ಧನ ರೆಡ್ಡಿನವರ ಮೇಲಿರುವ ಆರೋಪಗಳಿದ್ದು, ಇದುವರೆಗೆ ತನಿಖೆಗೆ ಆದೇಶಿಸಿರುವುದಿಲ್ಲ. ರಾಜ್ಯಪಾಲರ ಹುದ್ದೆ ಸಂವಿಧಾನಾತ್ಮಕವಾಗಿದ್ದು, ಅವರ ಮೇಲೆ ಗೌರವವಿದೆ. ಆದರೆ ರಾಜ್ಯಪಾಲರು (governor) ತಾರತಮ್ಯ ಧೋರಣೆ ಅನುಸರಿಸಬಾರದು  ಎಂದರು.

shimoga | Shimoga - The lake is bursting due to heavy rain: Will the taluk administration wake up? ಶಿವಮೊಗ್ಗ - ಭಾರೀ ಮಳೆಗೆ ಬಿರುಕು ಬಿಡುತ್ತಿರುವ ಕೆರೆ ಏರಿ : ಎಚ್ಚೆತ್ತುಕೊಳ್ಳುವುದೆ ತಾಲೂಕು ಆಡಳಿತ? Previous post shimoga | ಶಿವಮೊಗ್ಗ – ಭಾರೀ ಮಳೆಗೆ ಬಿರುಕು ಬಿಡುತ್ತಿರುವ ಕೆರೆ ಏರಿ : ಎಚ್ಚೆತ್ತುಕೊಳ್ಳುವುದೆ ತಾಲೂಕು ಆಡಳಿತ?
shimoga | Shimoga - Snake came to the police station: Shocked police..! ಶಿವಮೊಗ್ಗ – ಪೊಲೀಸ್ ಠಾಣೆಗೆ ಬಂದ ಹಾವು : ಬೆಚ್ಚಿಬಿದ್ದ ಪೊಲೀಸರು..! Next post shimoga | ಶಿವಮೊಗ್ಗ – ಠಾಣೆಗೆ ಬಂದ ಹಾವು : ಬೆಚ್ಚಿಬಿದ್ದ ಪೊಲೀಸರು..!