kundapura news | The death of a Shimoga-based government employee in a lodge in Kundapura! ಕುಂದಾಪುರದ ಲಾಡ್ಜ್ ನಲ್ಲಿ ಶಿವಮೊಗ್ಗ ಮೂಲದ ಸರ್ಕಾರಿ ನೌಕರನ ಸಾವು!

kundapura news | ಕುಂದಾಪುರದ ಲಾಡ್ಜ್ ನಲ್ಲಿ ಶಿವಮೊಗ್ಗ ಮೂಲದ ಸರ್ಕಾರಿ ನೌಕರನ ಸಾವು!

ಶಿವಮೊಗ್ಗ (shivamogga), ಸೆ. 9: ಶಿವಮೊಗ್ಗ ನಗರದ ಗಾಡಿಕೊಪ್ಪದ ನಿವಾಸಿಯಾದ, ಉಡುಪಿ ಜಿಲ್ಲೆಯ ಆರೋಗ್ಯ ಇಲಾಖೆ (health dept) ಯಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದ್ದ ನೌಕರನೋರ್ವ, ಕುಂದಾಪುರ (kundapura) ದ ಲಾಡ್ಜ್ ವೊಂದರಲ್ಲಿ ಮೃತಪಟ್ಟ ಘಟನೆ ನಡೆದಿದೆ.

ಪ್ರಶಾಂತ್ (37) ಮೃತಪಟ್ಟ ನೌಕರ ಎಂದು ಗುರುತಿಸಲಾಗಿದೆ. ಕುಂದಾಪುರ ತಾಲೂಕಿ (kundapura taluk) ನ ಕೊರ್ಗಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದರು.

ಇತ್ತೀಚೆಗೆ ಬೈಂದೂರು ಸಮುದಾಯ ಆರೋಗ್ಯ ಕೇಂದ್ರ (primary health centre) ಕ್ಕೆ ವರ್ಗಾವಣೆಯಾಗಿದ್ದರು ಎಂದು ತಿಳಿದುಬಂದಿದೆ. ಸೆ. 5 ರಂದು ಕುಂದಾಪುರದ ಲಾಡ್ಜ್ (kundapura lodge) ವೊಂದರಲ್ಲಿ ರೂಂ ಬುಕ್ ಮಾಡಿಕೊಂಡು ತಂಗಿದ್ದರು.

ಲಾಡ್ಜ್ ನ ಕೊಠಡಿಯಲ್ಲಿ ಮಲಗಿದ್ದ ಸ್ಥಿತಿಯಲ್ಲಿಯೇ ಅವರು ಮೃತಪಟ್ಟಿದ್ದಾರೆ. ಸಾವಿಗೆ ಇನ್ನಷ್ಟೆ ಸ್ಪಷ್ಟ ಕಾರಣಗಳು ತಿಳಿದುಬರಬೇಕಾಗಿದೆ.

ಮೃತ ದೇಹವನ್ನು ಸೆ. 6 ರಂದು ಶಿವಮೊಗ್ಗದ ಗಾಡಿಕೊಪ್ಪ (shimoga gadikoppa) ದ ನಿವಾಸಕ್ಕೆ ತರಲಾಗುತ್ತಿದೆ. ಸಂಜೆ ಪಾರ್ಥಿವ ಶರೀರದ ಅಂತ್ಯ ಸಂಸ್ಕಾರ ನೆರವೇರಲಿದೆ ಎಂದು ಕುಟುಂಬ ಮೂಲಗಳು ಮಾಹಿತಿ ನೀಡಿವೆ.

ಶಿಕಾರಿಪುರ : shikaripura - Those who went to the temple ended up in the cemetery: A young man and a young woman who were engaged to be married met a tragic end! ದೇವಾಲಯಕ್ಕೆ ಹೊರಟವರು ಸ್ಮಶಾನಕ್ಕೆ : ವಿವಾಹ ನಿಶ್ಚಯವಾಗಿದ್ದ ಯುವಕ – ಯುವತಿಯ ದಾರುಣ ಅಂತ್ಯ! Previous post muddebihal news | ಮುದ್ದೇಬಿಹಾಳ | ಬೈಕ್ ವ್ಹೀಲಿಂಗ್ : ಮೂವರು ಯುವಕರು ಸಾವು – ಹಲವರಿಗೆ ಗಂಭೀರ ಗಾಯ!
Shimoga Corporation limit : Ban on sale of meat on Sepetember 7 ಶಿವಮೊಗ್ಗ ಪಾಲಿಕೆ ವ್ಯಾಪ್ತಿಯಲ್ಲಿ ಸೆ. 7 ರಂದು ಮಾಂಸ ಮಾರಾಟ ನಿಷೇಧ Next post shimoga | ಶಿವಮೊಗ್ಗ ಪಾಲಿಕೆ ವ್ಯಾಪ್ತಿಯಲ್ಲಿ ಸೆ. 7 ರಂದು ಮಾಂಸ ಮಾರಾಟ ನಿಷೇಧ