muddebihal news | ಮುದ್ದೇಬಿಹಾಳ | ಬೈಕ್ ವ್ಹೀಲಿಂಗ್ : ಮೂವರು ಯುವಕರು ಸಾವು – ಹಲವರಿಗೆ ಗಂಭೀರ ಗಾಯ!
ಮುದ್ದೇಬಿಹಾಳ (ವಿಜಯಪುರ ಜಿಲ್ಲೆ), ಸೆ. 6 : ರಸ್ತೆ ದಾಟುತ್ತಿದ್ದವರಿಗೆ ಬೈಕ್ ಡಿಕ್ಕಿ (bike accident) ಹೊಡೆದ ಪರಿಣಾಮ ಮೂವರು ಯುವಕರು ಮೃತಪಟ್ಟು, ನಾಲ್ವರು ಗಾಯಗೊಂಡ ಘಟನೆ ಮುದ್ದೇಬಿಹಾಳ ತಾಲೂಕಿನ (muddebihal taluk) ಕುಂಟೋಜಿ ಗ್ರಾಮದ ಹೊರವಲಯ ಪಿಕೆಪಿಎಸ್ ಬಳಿ ಸೆ. 5 ರಾತ್ರಿ ನಡೆದಿದೆ.
ನಿಂಗರಾಜ ಚೌಧರಿ (22), ಅನಿಲ ವನೂರು (27) ಹಾಗೂ ಕುಮಾರ ಪ್ಯಾಟಿ (18) ಮೃತಪಟ್ಟವರೆಂದು ಗುರುತಿಸಲಾಗಿದೆ.
ಮೃತರಲ್ಲಿ ಬೈಕ್ (bike) ನಲ್ಲಿದ್ದ ಇಬ್ಬರು ಹಾಗೂ ಓರ್ವರು ಪಾದಚಾರಿ (Pedestrian) ಗಳಾಗಿದ್ದಾರೆ ಎಂದು ತಿಳಿದುಬಂದಿದೆ. ಕುಂಟೋಜಿ ಗ್ರಾಮದಲ್ಲಿ ಬಸವೇಶ್ವರ ಜಾತ್ರೆ ನಡೆಯುತ್ತಿದ್ದು, ವಿವಿಧ ಕಾರ್ಯಕ್ರಮಗಳು ಆಯೋಜನೆಯಾಗಿವೆ. ಇವುಗಳನ್ನು ವೀಕ್ಷಿಸಲು ಸುತ್ತಮುತ್ತಲಿನ ಗ್ರಾಮಗಳ ಯುವಕರು ಆಗಮಿಸಿದ್ದರು.
ಬೈಕ್ ವ್ಹೀಲಿಂಗ್ (bike wheeling) ಮಾಡಿಕೊಂಡು ಬಂದವರು, ಚಾಲನೆಯ ನಿಯಂತ್ರಣ ಕಳೆದುಕೊಂಡು ರಸ್ತೆ ದಾಟುತ್ತಿದ್ದವರಿಗೆ ಡಿಕ್ಕಿ (accident) ಹೊಡೆದಿದ್ದಾರೆ ಎಂದು ಹೇಳಲಾಗಿದೆ. ಅವಘಡದಲ್ಲಿ ಗಾಯಗೊಂಡಿರುವ ಯುವಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದರಲ್ಲಿ ಓರ್ವನ ಸ್ಥಿತಿ ಗಂಭೀರವಾಗಿದೆ. ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿಯಿತ್ತು ಪರಿಶೀಲನೆ ನಡೆಸಿದ್ದಾರೆ.
