shimoga | ಶಿವಮೊಗ್ಗ : ಅಪರಿಚಿತ ಯುವಕ ಸಾವು – ಕೈ ಮೇಲಿದೆ ‘ದಿವ್ಯಾ’ ಹೆಸರಿನ ಹಚ್ಚೆ!

Shimoga City : Young man’s body found hanging from a roadside tree ಶಿವಮೊಗ್ಗ ನಗರದ ರಸ್ತೆ ಬದಿ ಮರಕ್ಕೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಯುವಕನ ಶವ ಪತ್ತೆ!

ಶಿವಮೊಗ್ಗ (shivamogga), ಸೆ. 12: ಶಿವಮೊಗ್ಗ ಖಾಸಗಿ ಬಸ್ ನಿಲ್ದಾಣ (shimoga private bus stand) ದ ಬಳಿ ಸುಸ್ತಾಗಿ ಮಲಗಿದ್ದ, ಸುಮಾರು 25 ರಿಂದ 30 ವರ್ಷ ವಯಸ್ಸಿನ ಅಪರಿಚಿತ ಯುವಕ (unknown young man) ನನ್ನು ಸರ್ಕಾರಿ ಮೆಗ್ಗಾನ್ ಆಸ್ಪತ್ರೆ (govt meggan hospital) ಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸೆ.07 ರಂದು ಮೃತಪಟ್ಟಿರುತ್ತಾನೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.

ಈ ಸಂಬಂಧ ಪೊಲೀಸ್ ಇಲಾಖೆ (police department) ಯು ಗುರುವಾರ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದೆ. ಮೃತ ವ್ಯಕ್ತಿಯು ಆಸ್ಪತ್ರೆಗೆ ದಾಖಲಾದ ವೇಳೆ ತನ್ನ ಹೆಸರು ಮನೋಜ್ ಎಂದು ತಿಳಿಸಿರುತ್ತಾನೆ. ಮೃತನು ಸುಮಾರು 5.10 ಅಡಿ ಎತ್ತರ, ಕೋಲುಮುಖ, ಗೋಧಿ ಮೈ ಬಣ್ಣ, ಸಾಧಾರಣ ಮೈ ಕಟ್ಟು, ಬಲಗೈ ಮೇಲೆ ‘ದಿವ್ಯಾ’ ಎಂಬ ಹಚ್ಚೆ (tattoo) ಗುರುತಿದೆ.

3 ಇಂಚು ಉದ್ದದ ಕಪ್ಪು ಕೂದಲು ಮತ್ತು 2 ಇಂಚು ಉದ್ದ ಕಪ್ಪು ಗಡ್ಡ, ಮೀಸೆ ಬಿಟ್ಟಿದ್ದಾನೆ. ನೀಲಿ ಬಣ್ಣದ ಬಿಳಿ ಚುಕ್ಕೆಗಳಿರುವ ತುಂಬು ತೋಳಿನ ಶರ್ಟ್, ಕಪ್ಪು ಮತ್ತು ಬಿಳಿ ಬಣ್ಣದ ತುಂಬು ತೋಳಿನ ಟೀ ಶರ್ಟ್ ಮತ್ತು ಕಂದು ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿರುತ್ತಾನೆ.

ಸದರಿ ವ್ಯಕ್ತಿಯ ವಾರಸುದಾರರು ಯಾರದರು ಇದ್ದಲ್ಲಿ ದೊಡ್ಡಪೇಟೆ ಪೋಲಿಸ್ ಠಾಣೆ (doddapete police station) ದೂ.ಸಂ. 08182 261414 ಅಥವಾ ಮೊ.ನಂ. 99168-82544 ನ್ನು ಸಂಪರ್ಕಿಸಿ ಮಾಹಿತಿಯನ್ನು ನೀಡುವಂತೆ ಠಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →